ಜೀರ್ಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಈ ಮನೆಮದ್ದುಗಳನ್ನು ಬಳಸಿ

ಬೆಂಗಳೂರು, ಶುಕ್ರವಾರ, 13 ಏಪ್ರಿಲ್ 2018 (09:02 IST)

ಬೆಂಗಳೂರು : ಈಗಿನ ಆತುರದ ಜೀವನ ಶೈಲಿಯಲ್ಲಿನ ಆಹಾರದ ವ್ಯತ್ಯಾಸದಿಂದಾಗಿ ಹೆಚ್ಚಾಗಿ ಎಲ್ಲರಲ್ಲೂ ಕಾಡುವ ಸಮಸ್ಯೆ ಎಂದರೆ ಅಜೀರ್ಣತೆ. ಇದು ಮನುಷ್ಯನನ್ನ ಕುಗ್ಗಿಸುತ್ತದೆ, ಅಜೀರ್ಣವಾದ ಕೂಡಲೇ ನಾವು ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತೇವೆ ಆದರೆ ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗಿ ಸಮಯ ಹಾಗೂ ಹಣ ಎರಡನ್ನು ಹಾಳು ಮಾಡುವ ಬದಲು ಮನೆಯಲ್ಲಿಗೆ ಸುಲಭವಾಗಿ ಪರಿಹರಿಸಿಕೊಳ್ಳ ಬಹುದು. ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಕೆಲವು ಮನೆ ಮದ್ದುಗಳು ಇಲ್ಲಿವೆ ನೋಡಿ.


*ಬೆಳ್ಳುಳ್ಳಿಯ ಎರಡು ಎಸಳುಗಳನ್ನ ತುರಿದುಕೊಂಡು ಅದಕ್ಕೆ ಸ್ವಲ್ಪ ಪ್ರಮಾಣದ ಉಪ್ಪು ಮತ್ತು ಅಡುಗೆ ಸೋಡಾ ಬೆರೆಸಿ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.

*ಎರಡು ಚಮಚ ಈರುಳ್ಳಿ ರಸ ತೆಗೆದುಕೊಂಡು ಅದಕ್ಕೆ ಎರಡು ಚಮಚ ಜೇನು ತುಪ್ಪ ಮತ್ತು ಅಷ್ಟೇ ಪ್ರಮಾಣದ ಕಾಳುಮೆಣಸು ಸೇರಿಸಿಕೊಂಡು ಸೇವಿಸಿದರೆ ಅಜೀರ್ಣತೆ ಕಡಿಮೆಯಾಗಿ ಜೀರ್ಣ ಶಕ್ತಿ ಹೆಚ್ಚುತ್ತದೆ.

*ಪೈನಾಪಲ್ ಜ್ಯೂಸ್ ಗೆ ಸ್ವಲ್ಪ ಶುಂಠಿ, ಕಾಳುಮೆಣಸು, ಸಾವಯವ ಸಕ್ಕರೆ ಹಾಕಿಕೊಂಡು ಕುಡಿಯಿರಿ. ಹೀಗೇ ಮೂರು ದಿನ ಮಾಡುತ್ತಿದ್ದರೆ ಅಜೀರ್ಣ ಮಂಗಮಾಯ.

*ಇದು ಸಾಮಾನ್ಯವಾಗಿ ಎಲ್ಲರೂ ಮಾಡುವ ಸರಳ ವಿಧಾನವಾಗಿದೆ ನಿಂಬೆ ರಸ, ಸ್ವಲ್ಪ ಉಪ್ಪು ಸೇರಿಸಿ ತಿಂದರೆ ಜೀರ್ಣ ಶಕ್ತಿ ಹೆಚ್ಚುತ್ತದೆ ಹಾಗೂ ಪಿತ್ತದಿಂದಾಗಿ ವಾಂತಿಯಾಗುತ್ತಿದ್ದರೂ ಶಮನವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಹಿಳೆಯರಲ್ಲಿ ಈ ಲಕ್ಷಣಗಳು ಬಂಜೆತನಕ್ಕೆ ಕಾರಣವಾಗಬಹುದು!

ಬೆಂಗಳೂರು: ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಗೆ ಪರಿಪೂರ್ಣತೆ ಒದಗಿಸುತ್ತದೆ. ಆದರೆ ಬಂಜೆತನ ...

news

ಸೆಕ್ಸ್ ಸಂದರ್ಭ ಹೀಗೆ ಮಾಡುವುದರಿಂದಲೂ ಗರ್ಭಿಣಿಯಾಗಬಹುದು!

ಬೆಂಗಳೂರು: ಸೆಕ್ಸ್ ಮಾಡುವಾಗ ಮಾಡುವ ಕೆಲವೊಂದು ಉದಾಸೀನತೆ ನಿ‍ಮ್ಮನ್ನು ಸಮಸ್ಯೆಗೆ ಸಿಲುಕಿಸಬಹುದು ...

news

ಹಾಗಲಕಾಯಿಯನ್ನು ಈ ಸಮಸ್ಯೆ ಇರುವವರು ಸೇವಿಸಿದರೆ ಅಪಾಯ ಗ್ಯಾರಂಟಿ

ಬೆಂಗಳೂರು : ತರಕಾರಿಗಳನ್ನು ಸೇವಿಸುವುದು ಉತ್ತಮ ಅನ್ನುತ್ತಾರೆ ವೈದ್ಯರು. ಆದರೆ ಅವುಗಳಲ್ಲಿ ಯಾವುದನ್ನೂ ...

news

ಸುಟ್ಟ ಗಾಯದ ಕಲೆ ಹಾಗೆ ಉಳಿದಿದೆಯಾ. ಹಾಗಾದರೆ ಅದು ಹೋಗಬೆಂದರೆ ಈ ಮನೆಮದ್ದು ಬಳಸಿ

ಬೆಂಗಳೂರು : ಹೌದು ಸುಟ್ಟಗಾಯಗಳೇ ಇಷ್ಟು, ಗಾಯಾ ವಾಸಿಯಾದರೂ ಕಲೆ ಹೋಗುವುದಿಲ್ಲ.. ಕಲೆಗಳಿಂದಾಗಿ ಚರ್ಮದ ...

Widgets Magazine
Widgets Magazine