ಮಗುವಿಗೆ ಚರ್ಮದ ಸಮಸ್ಯೆಯಾಗದಂತೆ ಕಾಪಾಡಲು ಸ್ನಾನಕ್ಕೆ ಕೆಮಿಕಲ್ ಯುಕ್ತ ಸೋಪ್ ಗಳ ಬದಲು ಈ ಪುಡಿ ಬಳಸಿ

ಬೆಂಗಳೂರು, ಶನಿವಾರ, 20 ಜನವರಿ 2018 (07:10 IST)

ಬೆಂಗಳೂರು : ಮಗುವಿನ ತ್ವಚೆ ತುಂಬಾ ನಾಜೂಕಾಗಿರುವುದರಿಂದ ಅವರನ್ನು ಮೂರು ತಿಂಗಳುಗಳ ಕಾಲ ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಬೇಕಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅವರಿಗೆ ಚರ್ಮದ ಸಮಸ್ಯೆ ಉಂಟಾಗುವ ಸಂಭವವಿರುತ್ತದೆ. ಆದ್ದರಿಂದ ಮಗುವಿಗೆ ಚರ್ಮಕ್ಕೆ ಕೆಮಿಕಲ್ ಯುಕ್ತ ವಸ್ತುಗಳನ್ನು ಬಳಸುವ ಬದಲು ಮನೆಯಲ್ಲೇ ಅವರಿಗೆ ಬೇಕಾಗುವ ವಸ್ತುಗಳನ್ನು ಮಾಡಿ ಬಳಸಿರಿ. ಇದರಿಂದ ಮಗುವಿಗೆ ಯಾವ ತರಹದ ಚರ್ಮದ ಸಮಸ್ಯೆಗಳು ಬರೋದಿಲ್ಲ.

 
ಮಗುವಿಗೆ  ಸ್ನಾನಕ್ಕೆ ಕೆಮಿಕಲ್ ಯುಕ್ತ ಸೋಪುಗಳನ್ನು ಬಳಸುವ ಬದಲು ಮನೆಯಲ್ಲೇ ಅದನ್ನು ಹೇಗೆ ತಯಾರಿಸಬೇಕು ಎಂಬುದನ್ನು ತಿಳಿಯಿರಿ. ಮೊದಲಿಗೆ 1 ಕಪ್ ಹೆಸರು ಕಾಳನ್ನು ಚೆನ್ನಾಗಿ ಹುರಿದು ಪುಡಿಮಾಡಿ (ಹೆಸರುಕಾಳು ಬಳಸಲು ಇಷ್ಟವಿರದವರು  ಅದರ ಬದಲು ಮೆಂತ್ಯ ಕಾಳನ್ನು ಬಳಸಬಹುದು) ಅದಕ್ಕೆ 1ಚಮಚ ಶುದ್ದ ಅರಶಿನ ಪುಡಿ, 1 ಚಿಟಿಕೆ ಲಾವಂಚ ಹಾಗು ಸ್ವಲ್ಪ ಹಸುವಿನ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಇದನ್ನು ಪ್ರತಿದಿನ ಮಗುವಿನ ಸ್ನಾನಕ್ಕೆ ಬಳಸಿದರೆ ಮಗುವಿಗೆ ಯಾವುದೇ ಚರ್ಮದ ಸಮಸ್ಯೆ ಬರುವುದಿಲ್ಲ ಹಾಗೆ ಮಗುವಿನ ತ್ವಚೆ ಹೊಳಪಿನಿಂದ ಕೂಡಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಇರುವೆಗಳನ್ನು ಓಡಿಸಲು ಇಲ್ಲಿದೆ ಸುಲಭ ಉಪಾಯ!

ಬೆಂಗಳೂರು: ಅಡುಗೆ ಮನೆಯಲ್ಲಿ ಏನೇ ಸಿಹಿ ಇಟ್ಟರೂ ಇರುವೆ ಕಾಟ ಎಂದು ಗೊಣಗುವವರಿಗೆ ಇಲ್ಲಿದೆ ಒಂದು ಸುಲಭ ...

news

ಸೆಕ್ಸ್ ಮಾಡಲು ಸರಿಯಾದ ವಯಸ್ಸು ಯಾವುದು?

ಬೆಂಗಳೂರು: ನಮ್ಮಲ್ಲಿ ಮದುವೆಗೆ, ಮತದಾನ ಮಾಡಲು ಎಲ್ಲದಕ್ಕೂ ವಯಸ್ಸಿನ ಮಿತಿಯಿದೆ. ಆದರೆ ಲೈಂಗಿಕ ...

news

ಇರುಳುಗಣ್ಣು ಸಮಸ್ಯೆಯೇ...? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ

ಬೆಂಗಳೂರು : ಇರುಳುಗಣ್ಣಿನ ಸಮಸ್ಯೆ ಕೆಲವರಲ್ಲಿ ಕಂಡುಬರುತ್ತದೆ. ಇಂತವರಿಗೆ ಬೆಳಿಗ್ಗೆ ಕಣ್ಣು ಕಾಣಿಸುತ್ತದೆ ...

news

ಕೂದಲು ಕವಲು ಒಡೆಯುವುದನ್ನು ತಡೆಯಬೇಕಾ...? ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಹೆಚ್ಚಿನವರ ಕೂದಲು ತುದಿಯಲ್ಲಿ ಕವಲು ಒಡೆದಿರುವುದನ್ನು ಗಮನಿಸಿರಬಹುದು. ಕೂದಲು ಈ ರೀತಿಯಾಗಿ ...

Widgets Magazine
Widgets Magazine