Widgets Magazine
Widgets Magazine

ಕಲ್ಲಂಗಡಿ ಹಣ್ಣಿನ ಬೀಜದ ಗುಣ ಗೊತ್ತಾದರೆ ನೀವು ಬಿಸಾಕಲ್ಲ!

Bangalore, ಶುಕ್ರವಾರ, 17 ಮಾರ್ಚ್ 2017 (10:28 IST)

Widgets Magazine

ಬೆಂಗಳೂರು: ಕಲ್ಲಂಗಡಿ ಹಣ್ಣು ತಿನ್ನುವಾಗ ಅದರ ಬೀಜವನ್ನು ಉಗಿದು ಬಿಡುತ್ತೇವೆ. ಆದರೆ ಅದು ನೀಡುವ ಆರೋಗ್ಯಕರ ಉಪಯೋಗಗಳನ್ನು ತಿಳಿದುಕೊಂಡರೆ ಉಗಿಯುವುದನ್ನು ಖಂಡಿತಾ ಬಿಡುತ್ತೀರಿ.


 
 
ಅಂತಹದ್ದೇನಿದೆ ಅದರಲ್ಲಿ ಎನ್ನುತ್ತೀರಾ? ಕಲ್ಲಂಗಡಿ ಹಣ್ಣಿನ ಜತೆ ಹಸಿಯಾಗಿ ತಿನ್ನಲು ಇಷ್ಟವಿಲ್ಲದಿದ್ದರೆ, ಒಣಗಿಸಿ ಕುರು ಕುರು ಎಂದು ಸವಿಯಬಹುದು.  ಇದರಲ್ಲಿ ಸೆಲೆನಿಯಂ, ಪೊಟೇಷಿಯಂ, ಝಿಂಕ್ ಅಂಶ ಜಾಸ್ತಿಯಿದೆ ಎಂದು ಸಂಶೋಧಕರು ಹೇಳುತ್ತಾರೆ.
 
 
ಇದನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದಂತೆ. ಅಲ್ಲದೆ ರಕ್ತದೊತ್ತಡ ಏರೋದಿಲ್ಲ. ಜತೆಗೆ ದೇಹದ ರೋಗ ನಿರೋಧಕ ಶಕ್ತಿ ಇನ್ನಷ್ಟು ಜಾಸ್ತಿಯಾಗುತ್ತದಂತೆ.  ಇನ್ನು ಇದರಲ್ಲಿ ಶುಗರ್ ಲೆವೆಲ್ ನಿಯಂತ್ರಣದಲ್ಲಿಡುವ ಗುಣವಿರುವ ಕಾರಣ ಮಧುಮೇಹಿಗಳಿಗಂತೂ ಭಾರೀ ಒಳ್ಳೆಯದು ಅಂತಾರೆ.
 
 
ಹೀಗಾಗಿ ವಾರಕ್ಕೆರಡು ಬಾರಿ ತಲಾ ಅರ್ಧ ಚಮಚ ಕಲ್ಲಂಗಡಿ ಹಣ್ಣಿನ ಬೀಜ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.  ಆದರೆ ನೆನಪಿಡಿ, ಬೇಯಿಸಿ, ಅಥವಾ ಫ್ರೈ ಮಾಡಿ ತಿನ್ನುವುದರಿಂದ ಪ್ರಯೋಜನವಿಲ್ಲ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   


Widgets Magazine

Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ನಮ್ಮ ಅಡುಗೆ ಮನೆಯಲ್ಲೇ ಇದೆ ರೋಗನಿರೋಧಕ ಶಕ್ತಿಗಳು!

ಬೆಂಗಳೂರು: ಆಂಟಿ ಬಯೋಟಿಕ್ಸ್ ತೆಗೆದುಕೊಳ್ಳುವ ಬದಲು ನಮ್ಮ ಅಡುಗೆ ಮನೆಯಲ್ಲೇ ಸಿಗುವ ಆರೋಗ್ಯಕರ ರೋಗನಿರೋಧಕ ...

news

ಹುಟ್ಟಿದ ತಕ್ಷಣ ಮಗು ಅಳುವುದು ಯಾಕೆ ಗೊತ್ತಾ?

ಬೆಂಗಳೂರು: ಮಗುವೊಂದು ತಾಯಿ ಗರ್ಭದಿಂದ ಹೊರ ಬಂದ ತಕ್ಷಣ ಮಾಡುವ ಕೆಲಸವೆಂದರೆ, ಗಂಟಲು ಬಿರಿಯುವಂತೆ ...

news

ಮೊಸರಿನ ಜತೆ ಇವುಗಳನ್ನು ಸೇರಿಸಿ ತಿಂದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು: ಊಟವಾದ ಮೇಲೆ ಒಂಚೂರು ಗಟ್ಟಿ ಮೊಸರು ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಮೊಸರಿನ ಜತೆ ಈ ಕೆಲವು ...

news

ಸತ್ತ ಮೇಲೆ ಮನುಷ್ಯ ಏನಾಗುತ್ತಾನೆ? ವಿಜ್ಞಾನಿಗಳು ಕಂಡುಕೊಂಡ ಸತ್ಯವಿದು!

ನವದೆಹಲಿ: ಸತ್ತ ಮೇಲೆ ಮನುಷ್ಯ ಏನಾಗುತ್ತಾನೆ? ಅದಕ್ಕೆ ಸ್ಪಷ್ಟ ಉತ್ತರ ಎಲ್ಲೂ ಇಲ್ಲ. ಆದರೆ ಕೆನಡಾದ ವೈದ್ಯರ ...

Widgets Magazine
Widgets Magazine Widgets Magazine