ಗರ್ಭಿಣಿಯರಿಗೆ ಹೆರಿಗೆ ದಿನ ಹತ್ತಿರ ಬರುವಾಗ ಅವರಲ್ಲಾಗುವ ಬದಲಾವಣೆಗಳು ಏನು ಗೊತ್ತಾ...?

ಬೆಂಗಳೂರು, ಸೋಮವಾರ, 8 ಜನವರಿ 2018 (11:16 IST)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ನಾರ್ಮಲ್ ಡೆಲಿವರಿ ಆಗುವುದಕ್ಕಿಂತ ಹೆಚ್ಚು ಸಿಸೇರಿಯನ್ ಡೆಲಿವರಿ ಆಗುತ್ತಿದೆ. ಅವರಿಗೆ ಹೆರಿಗೆಗೆ ನೀಡಿರುವ ಅವಧಿಗಿಂತ ಮೋದಲೆ ಸಿಸೇರಿಯನ್ ಆಗುತ್ತಿದೆ. ಗರ್ಭಿಣಿಯರಿಗೆ ತಮಗೆ ಹೆರಿಗೆ ದಿನ ಹತ್ತಿರ ಬರುತ್ತಿದೆ ಎಂಬ ಸೂಚನೆಗಳು ಸಿಗುತ್ತದೆ. ಆದರೆ ಆ ಸೂಚನೆಗಳ ಬಗ್ಗೆ ಕೆಲವು ಗರ್ಭಿಣಿಯರಿಗೆ ತಿಳಿಯದ ತಕ್ಷಣ ಹೆರಿಗೆ ನೋವು ಕಾಣಿಸಿಕೊಂಡು ಚಿಕಿತ್ಸೆ ದೊರಕದೆ  ಕೆಲವು ಅನಾಹುತಗಳು ಸಂಭವಿಸುತ್ತದೆ. ಆದ್ದರಿಂದ ಮೊದಲು ಅವರಿಗೆ ಹೆರಿಗೆ ದಿನ ಹತ್ತಿರ ಬರುವಾಗ ಅವರಲಾಗುವ ಬದಲಾವಣೆಗಳು ಏನು ಎಂಬುದನ್ನು ತಿಳಿಸಬೇಕು.


 
ಹೆರಿಗೆ ದಿನ ಹತ್ತಿರ ಬರುತ್ತಿದ್ದಂತೆಯೇ ಮೂತ್ರ ವಿಸರ್ಜನೆಗೆ ಹೋಗುತ್ತಲೇ ಇರಬೇಕು ಅಂತ  ಅನಿಸುತ್ತದೆ. ಏಕೆಂದರೆ ಆ ಸಮಯದಲ್ಲಿ ಮಗುವಿನ ಚಲನೆ ಹೆಚ್ಚಾಗಿರುತ್ತದೆ. ಇದರಿಂದ ಗರ್ಭ ಕಂಠದ ಸುತ್ತಮುತ್ತ ಸ್ನಾಯುಗಳ ಚಲನೆ ಇರುತ್ತದೆ. ಇದರಿಂದ ಮೆದುಳಿಗೆ ಮೂತ್ರ ವಿಸರ್ಜನೆ ಮಾಡುವಂತೆ ಸಂದೇಶ ರವಾನೆಯಾಗುತದೆ. ಗರ್ಭ ದ್ವಾರದ ಹಿಗ್ಗುವಿಕೆ ಹೆಚ್ಚಾಗುವುದರಿಂದ ಹೊಟ್ಟೆಯಲ್ಲಿ ಭಾರವಾದ ಅನುಭವ ಹೆಚ್ಚಾಗಿ ತುಂಬಾ ಹಿಡಿದುಕೊಂಡಿದೆ ಎಂದು ಅನಿಸುತ್ತದೆ. ಮಗುವಿನ ತಲೆ ಕೆಳಮುಖವಾಗಿರುವುದರಿಂದ ಗರ್ಭಿಣಿಯರಿಗೆ ತಮ್ಮ ಕೆಳಹೊಟ್ಟೆಯಲ್ಲಿ ಭಾರವಾದಂತಹ ಅನುಭವವಾಗುತ್ತದೆ. ಹೀಗೆ ಕೆಳಹೊಟ್ಟೆಯ ತೂಕ ಹೆಚ್ಚಾಗಿ ದೇಹ ಸಂಕುಚಿಸಿದ ಅನುಭವವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.


 
ಅಷ್ಟು ದಿನ ಗರ್ಭಿಣಿಯರ ಬೆನ್ನು ಮೂಳೆ ಒಂದು ಭಂಗಿಯಲ್ಲಿ ಇದ್ದು. ನಂತರದ ದಿನಗಳಲ್ಲಿ ಅವರು ಬೆನ್ನು ಮುಂದಕ್ಕೆ ಭಾಗಿಸಿ ನಡೆದು ಮಗುವಿನ ತೂಕಕ್ಕೂ ಅವರ ನಡೆಗೆಗೂ ಸಮತೋಲನ ಮಾಡುತ್ತಿರುತ್ತಾರೆ. ಆದರೆ ಹೆರಿಗೆ ದಿನ ಹತ್ತಿರವಾಗುತ್ತಿದ್ದಂತೆ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಗರ್ಭಿಣಿಯರಲ್ಲಿ ರಿಲಾಕ್ಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗಲು ಶುರುವಾದಾಗ ದೇಹದ ಮೂಳೆಗಳು ಮಗು ಹೊರಗೆ ಬರಲು  ಸಹಕರಿಸುವಂತೆ ನೋಡಿಕೊಳ್ಳುತ್ತವೆ ಹಾಗೆ ಮಗು ಹೊರಗೆ ಬರುವಾಗ ಉಂಟಾಗುವ ಅಡೆತಡೆಗಳನ್ನು ನಿವಾರಿಸುತ್ತವೆ. ಯಾವುದೇ ಸೂಕ್ಷ್ಮ ಜೀವಿಗಳ ಅಪಾಯ ಸೋಕದಂತೆ ಕಾಪಾಡುತ್ತವೆ. ಹೆರಿಗೆ ಸಮಯ ಹತ್ತಿರ ಬರುತ್ತಿದ್ದಂತೆ ದೇಹದ ಜೀರ್ಣ ಕ್ರಿಯೆಯಲ್ಲಿ ಬದಲಾವಣೆಯಾಗಿ ಭೇದಿ ಹಾಗು ವಾಂತಿ ಶುರುವಾಗುತ್ತದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಾಯಿಂದ ದುರ್ವಾಸನೆ ಬರುತ್ತಿದೆಯೇ ಹಾಗಾದರೆ ಈ ವಿಧಾನ ಬಳಸಿ

ಬೆಂಗಳೂರು : ಕೆಲವರಿಗೆ ಬಾಯಿಂದ ದುರ್ವಾಸನೆ ಬರುತ್ತಿರುತ್ತದೆ. ಅಂತವರು ಮಾತನಾಡಿದಾಗ ಅವರ ಪಕ್ಕ ...

news

ಹಾಲು ಯಾವಾಗ ಕುಡಿದರೆ ಉತ್ತಮ?

ಬೆಂಗಳೂರು: ಪ್ರತಿನಿತ್ಯ ಹಾಲು ಕುಡಿದರೆ ನಮ್ಮ ಆರೋಗ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ನಮ್ಮದು. ಆದರೆ ...

news

ಧೂಮಪಾನ ಚಟ ಬಿಡಬೇಕೇ? ಹಾಗಿದ್ದರೆ ಇಲ್ಲಿದೆ ಸುಲಭ ಉಪಾಯ!

ಬೆಂಗಳೂರು: ಧೂಮಪಾನ ಚಟಕ್ಕೆ ಬಿದ್ದರೆ ಬಿಡುವುದು ಅಷ್ಟು ಸುಲಭವಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ...

news

ಪಾನ ಪ್ರಿಯರಿಗೆ ಶಾಕ್ ನೀಡಲಿದೆ ಈ ವರದಿ!

ಬೆಂಗಳೂರು: ಮದ್ಯಪಾನದಿಂದ ಹಲವು ರೋಗಗಳಿಗೆ ಕಾರಣ ಎಂದು ಈ ಹಿಂದೆ ಹಲವು ಅಧ್ಯಯನ ವರದಿಗಳಿಂದ ತಿಳಿದುಬಂದಿದೆ. ...

Widgets Magazine
Widgets Magazine