ಮದುವೆಯ ಮೊದಲ ರಾತ್ರಿಯ ಬಗ್ಗೆ ಹೆಣ್ಣಿಗೆ ಕಾಡುವ ಪ್ರಶ್ನೆಗಳೇನು ಗೊತ್ತಾ…?

ಬೆಂಗಳೂರು, ಗುರುವಾರ, 18 ಜನವರಿ 2018 (10:44 IST)

ಬೆಂಗಳೂರು : ಮದುವೆ ಅಂದರೆ ಅದೇನೋ ಒಂದು ರೀತಿಯ ಸಂಭ್ರಮ ಸಡಗರ. ಇದರ ಬಗ್ಗೆ ಎಲ್ಲಾ ಹುಡುಗಿಯರು ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಮದುವೆ ಆದ ಮೇಲೆ ತಮ್ಮ ಗಂಡನ ಜೊತೆಗೆ ಕಳೆಯುವ ಸಮಯವನ್ನು ನೆನೆದು ಖುಷಿ ಪಡುತ್ತಾರೆ. ಅದರ ಜೊತೆ ಹೊಸ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುವುದು ಎಂಬ ಆತಂಕವೂ ಕಾಡುತ್ತಿರುತ್ತದೆ. ಮದುವೆ ಆದ ಮೇಲೆ ಅವರಲ್ಲಿ ಅನೇಕ ಪ್ರಶ್ನೆಗಳು ಕಾಡುತ್ತಿರುತ್ತದೆ.

 
ಮೊದಲನೆಯದಾಗಿ ಮೊದಲ ರಾತ್ರಿಯ ಬಗ್ಗೆ ಎಲ್ಲಾ ಹೆಣ್ಣು ಮಕ್ಕಳಿಗೂ ಆತಂಕವಿದ್ದೇ ಇರುತ್ತದೆ. ಮೊದಲ ಸೆಕ್ಸ್ ನಲ್ಲಾಗುವ ನೋವಿನ ಬಗ್ಗೆ ಅಥವಾ ಹೇಗೆ ಮಾಡಬೇಕೆಂಬ ಗೊಂದಲವಿರುತ್ತದೆ. ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಬೆಳಿಗ್ಗೆ ಎಷ್ಟು ಗಂಟೆಗೆ ಏಳಬೇಕು? ಎದ್ದ ನಂತರ ತಾನು ಯಾವ ಕೆಲಸ ಮಾಡಬೇಕು? ಎಂಬ ಗೊಂದಲ ಕಾಡುತ್ತದೆ. ಬೆಳಿಗ್ಗೆ ಎದ್ದು ಸ್ನಾನ ಮಾಡಿದ ಮೇಲೆ ಯಾವ ಬಟ್ಟೆ ಧರಿಸಬೇಕು, ತಾನು ಹಾಕುವ ಡ್ರೆಸ್ ಮನೆಯರಿಗೆ ಇಷ್ಟವಾಗುತೋ? ಇಲ್ಲವೋ? ಎಂಬ ಆತಂಕ ಬೇರೆ ಕಾಡುತ್ತಿರುತ್ತದೆ.

 
ಮದುವೆಯಾದ ಹೆಣ್ಣುಮಕ್ಕಳನ್ನು ಕಾಡುವ ಮುಖ್ಯವಾದ ಪ್ರಶ್ನೆ ಎಂದರೆ ತಾನು ಸರಿಯಾದ ಬಾಳ ಸಂಗಾತಿಯನ್ನು ಆಯ್ಕೆ ಮಾಡಿದ್ದೇನಾ? ತಾನು ಈ ಕುಟುಂಬಕ್ಕೆ ಹೊಂದಿಕೊಳ್ಳುತ್ತೀನಾ ಎಂಬ ಯೋಚನೆ ಶುರುವಾಗುತ್ತದೆ. ಹೆಣ್ಣುಮಕ್ಕಳು ಚಿಂತೆ ಮಾಡುವ ಇನ್ನೊಂದು ವಿಚಾರವೆನೆಂದರೆ ಮೊದಲರಾತ್ರಿ ಮುಗಿದ ಮೇಲೆ ಫ್ರೆಂಡ್ಸ್,ಮನೆಯವರ ಮುಂದೆ ಹೇಗೆ ಹೋಗೋದು ಎಂದು ತುಂಬಾನೆ ತಲೆಕಡೆಸಿಕೊಳ್ಳುತ್ತಾರೆ. ಕೆಲವರು ಫಸ್ಟ್ ನೈಟ್ ನಂತರ ಗರ್ಭಿಣಿಯಾಗುತ್ತೇನೋ ಎಂಬ ಪ್ರಶ್ನೆ ಕೂಡ ಅವರನ್ನು ಜಾಸ್ತಿ ಕಾಡುತ್ತದೆಯಂತೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಣೆಯರಂತೆ!

ನವದೆಹಲಿ: ಸೆಕ್ಸ್ ವಿಚಾರಕ್ಕೆ ಬಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಣೆಯರು ಎಂದು ಹೊಸ ಸಮೀಕ್ಷೆಯೊಂದು ...

news

ಎಳೆ ಹಲಸಿನ ಕಾಯಿ ಉಪ್ಪಿನಕಾಯಿ ಮಾಡೋದು ಹೇಗೆ ಗೊತ್ತಾ?!

ಬೆಂಗಳೂರು: ಇನ್ನೇನು ಹಲಸಿನ ಕಾಯಿ ಸೀಸನ್ ಬಂತು. ಕರಾವಳಿ, ಮಲೆನಾಡಿನಲ್ಲಿ ಈಗಾಗಲೇ ಎಳೆ ಹಲಸಿನಕಾಯಿ ...

news

ಏಳು ಗಂಟೆ ಮೊದಲು ರಾತ್ರಿ ಊಟ ಮಾಡಿದರೆ ಆಗುವ ಲಾಭವೇನು ಗೊತ್ತಾ?

ಬೆಂಗಳೂರು: ರಾತ್ರಿ ಊಟ ಬೇಗ ಮಾಡಬೇಕು ಎಂದು ನಾವು ಹಲವರು ಹೇಳಿದ್ದನ್ನು ಕೇಳಿದ್ದೇವೆ. ಆದರೆ ರಾತ್ರಿ ಬೇಗ ...

news

ಹೆಸರು ಬೇಳೆ ದೋಸೆ ಮಾಡುವುದು ಹೇಗೆ ಗೊತ್ತಾ?

ಬೆಂಗಳೂರು: ಪ್ರತಿನಿತ್ಯ ತಿಂಡಿಗೆ ಏನು ಮಾಡೋದು ಎಂಬ ಚಿಂತೆಯೇ? ಹಾಗಿದ್ದರೆ ಹೆಸರು ಬೇಳೆ ದೋಸೆ ಮಾಡಿ. ...

Widgets Magazine