ಮಕ್ಕಳ ಗಂಟಲಿನಲ್ಲಿ ನಾಣ್ಯ ಸಿಕ್ಕಿಹಾಕಿಕೊಂಡಾಗ ಈ ರೀತಿ ಮಾಡಿ ಅಪಾಯದಿಂದ ಕಾಪಾಡಿ

ಬೆಂಗಳೂರು, ಶುಕ್ರವಾರ, 17 ಆಗಸ್ಟ್ 2018 (06:42 IST)

ಬೆಂಗಳೂರು : ಚಿಕ್ಕಮಕ್ಕಳು ತಮಗೆ ಸಿಗುವ ಸಣ್ಣಪುಟ್ಟ ವಸ್ತುಗಳನ್ನು ಬಾಯಲ್ಲಿ ಇಟ್ಟುಕೊಳ್ಳುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಮುಖ್ಯವಾಗಿ ಕಾಯಿನ್ಸ್, ಬಟನ್ಸ್, ಆಟವಾಡುವ ವಸ್ತುಗಳು, ಬೀಜಗಳು, ಮರಳು, ಮಣ್ಣು… ಹೀಗೆ ಪ್ರತಿಯೊಬ್ಬರೂ ಬಾಯಲ್ಲಿ ಇಟ್ಟುಕೊಳ್ಳಲು ನೋಡುತ್ತಾರೆ. ಮಕ್ಕಳು ಕಾಯಿನ್ಸ್ ನುಂಗಿದರೂ ಅಥವಾ ಗಂಟಲಲ್ಲಿ ಸಿಕ್ಕಿಕೊಂಡರೂ ತುಂಬಾ ಅಪಾಯ. ಆದಕಾರಣ ಕೂಡಲೆ ಈ ಎಚ್ಚರಿಕೆಗಳನ್ನು ಪಾಲಿಸಿ.

*ಮಕ್ಕಳು ಕಾಯಿನ್ಸ್ ನುಂಗಿದ್ದಾರೆಂದು ಹೇಗೆ ತಿಳಿದುಕೊಳ್ಳಬೇಕು
ಮಕ್ಕಳು ಏನಾದರೂ ವಸ್ತುವನ್ನು ಬಾಯಲ್ಲಿ ಹಾಕಿಕೊಂಡಾಗ ಅಥವಾ ಅವರ ಗಂಟಗಲ್ಲಿ ಇದ್ದಂತಾದರೆ ಬಾಯಿಂದ ಲಾಲಾರಸ ಸೋರುತ್ತಿರುತ್ತದೆ. ಬಿಕ್ಕಿಬಿಕ್ಕಿ ಅಳುತ್ತಿರುತ್ತಾರೆ, ಉಸಿರಾಡಲು ಕಷ್ಟವಾಗುತ್ತದೆ, ಇದ್ದಕ್ಕಿದ್ದಂತೆ ದೇಹದ ಉಷ್ಣತೆ ಹೆಚ್ಚುತ್ತದೆ. ಕುತ್ತಿಗೆ, ಎದೆ ಭಾಗಗಳಲ್ಲಿ ನೋವು ಹೆಚ್ಚಾಗಿ ಇರುತ್ತದೆ, ಪ್ರಜ್ಞೆ ಕಳೆದುಕೊಳ್ಳುವಂತಹದ್ದಾಗುತ್ತದೆ. ವಾಂತಿಯಾಗುತ್ತಿರುತ್ತದೆ. ಈ ಲಕ್ಷಣಗಳು ಇದ್ದರೆ ನಿಮ್ಮ ಮಕ್ಕಳ ಬಾಯಲ್ಲಿ ಏನೋ ಇದೆ ಎಂಬುದನ್ನು ಗುರುತಿಸಬೇಕು

*ಮಕ್ಕಳು ಕಾಯಿನ್ಸ್ ನುಂಗಿದರೆ ಏನು ಮಾಡಬೇಕು
-ಮಕ್ಕಳ ಗಂಟಲಲ್ಲಿ ಕಾಯಿನ್ಸ್ ಸಿಕ್ಕಿಕೊಂಡಿದೆ ಅನ್ನಿಸಿದರೆ ಮೊದಲು ಅವರಿಗೆ ಕುಡಿಯಲು ನೀರು ಅಥವಾ ಏನಾದರೂ ಪಾನೀಯ ನೀಡಬೇಕು. ವಾಂತಿ ಬರುವಂತೆ ಮಾಡಬೇಕು.

-ಮಕ್ಕಳಿಗೆ ಯಾವುದೇ ನೋವಾಗದಂತೆ, ಕಾಯಿನ್ಸ್ ಗಂಟಲಲ್ಲಿ ಇಲ್ಲ ಅನ್ನಿಸಿದರೆ, ಮಕ್ಕಳ ಮಲದಲ್ಲಿ ಕಾಯಿನ್ಸ್ ಬಂತೇನೋ ಗಮನಿಸಬೇಕು. ಈ ರೀತಿ ಬಾರದಿದ್ದರೆ ಬಾಳೆಹಣ್ಣು ತಿನ್ನಿಸಬೇಕು. ನೀರನ್ನು ಚೆನ್ನಾಗಿ ಕುಡಿಸಬೇಕು.

-ಗಂಟಲಲ್ಲಿ ಸಿಕ್ಕಿಕೊಳ್ಳದೆ ಹೊಟ್ಟೆಯೊಳಗೆ ಕಾಯಿನ್ಸ್ ಹೋಗಿದ್ದರೆ ತಪ್ಪಿದಂತೆ ಎಂದು ವೈದ್ಯರು ಹೇಳುತ್ತಿರುತ್ತಾರೆ. ಆದಕಾರಣ ನೀವು ಭಯಬೀಳಬೇಕಾದ ಅಗತ್ಯ ಇಲ್ಲ.

-ಮಕ್ಕಳಿಗೆ ನೋವಾಗುತ್ತಿದ್ದು, ಒಂದು ದಿನ ಅಥವಾ ಎರಡು ದಿನಗಳಾದರೂ ಕಾಯಿನ್ಸ್ ಹೊರಗೆ ಬಾರದಿದ್ದರೆ ಮಾತ್ರ ಕೂಡಲೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸ್ವಾದಿಷ್ಠವಾದ ಫ್ರುಟ್ ಕುಕೀಸ್

ಒಂದು ಬಟ್ಟಲಿನಲ್ಲಿ, ಮೃದುವಾಗುವ ತನಕ ಬೆಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ, ಪುಡಿ ಮಾಡಿದ ಸಕ್ಕರೆಯನ್ನು ...

news

ವಿದ್ಯಾರ್ಥಿಗಳಿಗಾಗಿ ಆರೋಗ್ಯ ಸಲಹೆಗಳು..

ವಿದ್ಯಾರ್ಥಿಗಳು ಕಾರ್ಯನಿರತರಾಗುತ್ತಾರೆ. ಕಠಿಣವಾದ ಪಠ್ಯಕ್ರಮ, ಅತ್ಯಾಕರ್ಷಕ ಸಾಮಾಜಿಕ ಜೀವನ ಮತ್ತು ...

news

ಪುರುಷರೇ ಎಚ್ಚರ! ವೀರ್ಯಾಣು ಸಂಖ್ಯೆ ಕಡಿಮೆಯಾಗಲು ಇದೂ ಕಾರಣವಾಗಬಹುದು!

ಬೆಂಗಳೂರು: ಆಹಾರ, ಮಾಡುವ ಕೆಲಸಗಳು, ಒತ್ತಡಗಳಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗುತ್ತದೆ ಎಂದು ...

news

ನೀವು ಮಾಡುವ ಈ ತಪ್ಪುಗಳೇ ನಿಮ್ಮ ಲೈಂಗಿಕ ಸುಖವನ್ನು ಹಾಳುಮಾಡಬಹುದು ಹುಷಾರು!

ಬೆಂಗಳೂರು : ಸಹಜವಾಗಿ ಎಲ್ಲಾ ಜೋಡಿಗಳು ಅದರಲ್ಲಿ ಹುಡುಗರು ಮಿಲನದ ಸಮಯದಲ್ಲಿ ಆತುರದ ನಿರ್ಧಾರದಲ್ಲಿ ...

Widgets Magazine