ತೂಕ ಕಡಿಮೆ ಆಗಬೇಕೆ...? ಹಾಗಾದ್ರೆ ರಾತ್ರಿ ವೇಳೆ ಇವುಗಳನ್ನು ಸೇವಿಸಲೇಬೇಡಿ!

ಬೆಂಗಳೂರು, ಶುಕ್ರವಾರ, 12 ಅಕ್ಟೋಬರ್ 2018 (10:57 IST)

ಬೆಂಗಳೂರು : ಕೆಲವೊಂದು ಪದಾರ್ಥಗಳನ್ನು ರಾತ್ರಿ ಮಲಗುವ ವೇಳೆ ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಒಳ್ಳೆದಾಗುವ ಬದಲು ಕೆಟ್ಟದಾಗುವುದೇ ಹೆಚ್ಚು. ಅವು ಯಾವುವು ಎಂಬುದು ಇಲ್ಲಿವೆ ನೋಡಿ.


ಬೆಣ್ಣೆ : ಬೆಣ್ಣೆಯ ಸೇವನೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಆದರೆ ಇದೇ ಬೆಣ್ಣೆಯನ್ನು ರಾತ್ರಿಯ ಹೊತ್ತು ಸೇವನೆ ಮಾಡಬಾರದು. ಬೆಣ್ಣೆಯಲ್ಲಿ ಹೆಚ್ಚು ಫ್ಯಾಟ್‌ ಇರುತ್ತದೆ. ಇದನ್ನು ರಾತ್ರಿಯ ವೇಳೆ ಸೇವನೆ ಮಾಡಿದರೆ ತೂಕ ಹೆಚ್ಚಾಗುತ್ತದೆ.


ಬಿಳಿ ಬ್ರೆಡ್‌ : ಜನರು ಹೆಚ್ಚಾಗಿ ಬೆಳಗ್ಗಿನ ಬ್ರೇಕ್‌ಫಾಸ್ಟ್‌ನಲ್ಲಿ ಬ್ರೆಡ್‌ ಬಟರ್‌ ಸೇವನೆ ಮಾಡುತ್ತಾರೆ. ಆದರೆ ಅಪ್ಪಿತಪ್ಪಿಯೂ ಇದನ್ನು ರಾತ್ರಿ ವೇಳೆ ಸೇವಿಸಬೇಡಿ. ಯಾಕೆಂದರೆ ಬಿಳಿ ಬ್ರೆಡ್‌ನಲ್ಲಿ ಶುಗರ್‌ ಅಂಶ ಹೆಚ್ಚಾಗಿರೋದರಿಂದ ತೂಕ ಹೆಚ್ಚುತ್ತದೆ. ಅಂದರೆ ಇದನ್ನು ನೀವು ಯಾವಾಗಲೂ ಸೇವನೆ ಮಾಡುತ್ತಿದ್ದರೆ ದೇಹದಲ್ಲಿ ಫ್ಯಾಟ್‌ ಹೆಚ್ಚಾಗುತ್ತದೆ.


ಹಾಲು ಮತ್ತು ಬಾಳೆಹಣ್ಣು : ಹಾಲಿನ ಜೊತೆಗೆ ಬಾಳೆಹಣ್ಣು ಸೇವನೆ ಮಾಡಿದರೆ ದೇಹದ ತೂಕ ತುಂಬಾನೆ ಹೆಚ್ಚಾಗುತ್ತದೆ. ಯಾಕೆಂದರೆ ಹಾಲಿನಿಂದ ಶರೀರದಲ್ಲಿ ಪ್ರೊಟೀನ್‌ ಮತ್ತು ಬಾಳೆಹಣ್ಣಿನಿಂದ ಶುಗರ್‌ ದೇಹಕ್ಕೆ ಸೇರುತ್ತದೆ. ಬಾಳೆಹಣ್ಣು ಸೇವನೆ ಮಾಡಿದರೆ ಹೆಚ್ಚು ಕ್ಯಾಲರಿ ದೊರೆಯುತ್ತದೆ. ಆದುದರಿಂದ ಇದನ್ನು ರಾತ್ರಿಯ ಹೊತ್ತು ಸೇವನೆ ಮಾಡಬಾರದು, ಸೇವನೆ ಮಾಡಿದರೆ ತೂಕ ಬೇಗನೆ ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬರಿಗೈಯಲ್ಲಿ ಊಟ ಮಾಡುವುದು ಉತ್ತಮ ಯಾಕೆ ಗೊತ್ತಾ?

ಬೆಂಗಳೂರು: ಆಧುನಿಕ ಜೀವನ ಶೈಲಿಯಲ್ಲಿ ನಾವು ಚಮಚ, ಸ್ಪೋರ್ಕ್ ಬಳಸಿ ಆಹಾರ ಸೇವಿಸುವುದನ್ನು ...

news

ಮಿಲನ ಕ್ರಿಯೆ ಸಂದರ್ಭ ಹೀಗೆ ಮಾಡುವುದರಿಂದ ಮಹಿಳೆಯರು ಮತ್ತೆ ನಿಮ್ಮತ್ತ ತಿರುಗಿನೋಡಲ್ಲ!

ಬೆಂಗಳೂರು: ಮಿಲನ ಕ್ರಿಯೆ ಸಂದರ್ಭದಲ್ಲಿ ಸಂಗಾತಿಯನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಿಮ್ಮ ...

news

ಮಹಿಳೆಯರನ್ನು ಬೆಡ್ ರೂಂನಲ್ಲಿ ಗೆಲ್ಲಲು ಪುರುಷರಿಗೆ ಇದುವೇ ಕೀ!

ಬೆಂಗಳೂರು: ಸಮಾಗಮ ಸಮಯದಲ್ಲಿ ಮಹಿಳೆಯರ ಮನ ಗೆಲ್ಲಲು ಪುರುಷರು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಇದರ ...

news

ರುಚಿಯಾದ ವೆಗಾನ್ ಸ್ನ್ಯಾಕ್ಸ್ ರೆಸಿಪಿಗಳು...

ವೆಗಾನ್ ಆಹಾರ ಪದ್ಧತಿ ಇತ್ತೀಚೆಗೆ ಅಮೇರಿಕಾದಲ್ಲಿ ಬಹಳ ಪ್ರಚಲಿತದಲ್ಲಿದೆ. ಇದು ಸಸ್ಯ ಜನ್ಯ ಆಹಾರ ...