ಮಹಿಳೆಯರು ಕೇವಲ ಒಂದು ನಿಮಿಷ ಓಡಿದ್ರೆ ಸಾಕು: ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತವನ್ನು ತಡೆಯಬಹುದು

ವಾಷಿಂಗ್ಟನ್, ಮಂಗಳವಾರ, 18 ಜುಲೈ 2017 (17:14 IST)

ವಾಷಿಂಗ್ಟನ್:ಮಹಿಳೆಯರು ಪ್ರತಿದಿನ ಕೇವಲ ಒಂದು ನಿಮಿಷ ಓಡಿದ್ರೆ ಸಾಕು ಮೂಳೆಗಳು ಸದೃಢಗೊಳ್ಳುತ್ತಂತೆ. ಈ ಮೂಲಕ ವೃದ್ಧಾಪ್ಯದ ದಿನಗಳಲ್ಲಿ ಕಾಣುವಂತಹ ಎಲುಬಿನ ಸಮಸ್ಯೆಗಳನ್ನು ತಡೆಗಟ್ಟಬಹುದು  ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.
 
ಅಮೆರಿಕದ ಲೀಸೆಸ್ಟರ್ ವಿಶ್ವವಿದ್ಯಾಲಯ ಹಾಗೂ ಎಕ್ಸೆಟರ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರತಿ ದಿನ 60-120 ಸೆಕೆಂಡ್ ಗಳಷ್ಟು ಕಠಿಣ ಚಟುವಟಿಕೆ ನಡೆಸುವುದರಿಂದ ಮಹಿಳೆಯರ ಮೂಳೆಗಳು ಸದೃಢಗೊಳ್ಳುತ್ತವೆ. ಓಡುವುದು ಸೇರಿದಂತೆ ಕಠಿಣ ಚಟುವಟಿಕೆಯಲ್ಲಿ ತೊಡಗುವುದರಿಂದ ವೃದ್ಧಾಪ್ಯದಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತವನ್ನು ತಡೆಗಟ್ಟಬಹುದು ಎಂದು ಸಂಶೋಧಕರು ಹೇಳಿದ್ದಾರೆ. 
 
2,500 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಲಾಗಿದ್ದು, ಅವರ ಚಟುವಟಿಕೆಗಳ ಮಟ್ಟ ಹಾಗೂ ಮೂಳೆಗಳ ಆರೋಗ್ಯವನ್ನು ಈ ವೇಳೆ ಸಂಶೋಧಕರು ಗಮನಿಸಿದ್ದಾರೆ.  ಒಂದರಿಂದ ಎರಡು ನಿಮಿಷಗಳ ಕಠಿಣ ವ್ಯಾಯಾಮ ಮಾಡಿದ ಮಹಿಳೆಯರ ಮೂಳೆಗಳ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುವುದು ಇದರಿಂದ ತಿಳಿದುಬಂದಿದೆ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಡಯಾಬಿಟಿಕ್ ಪೇಶಂಟ್ಸ್ ಹಾಕಿಕೊಳ್ಳಲೇ ಬೇಕು ಈ ವಿಶಿಷ್ಟ ಟ್ಯಾಟೂ

ಟ್ಯಾಟೂ ಹಾಕಿಸಿಕೊಳ್ಳೋದು ಒಂದು ರೀತಿಯ ಫ್ಯಾನ್ ಆಗಿದೆ. ಆದರೆ ಕೆಲವೊಂದು ಟ್ಯಾಟೂ ನಿರ್ಧಿಷವಾದ ...

news

ಪುರುಷರಿಗೆ ಸೆಕ್ಸ್ ಲೈಫ್ ಎಷ್ಟು ಉಪಕಾರಿ ಗೊತ್ತಾ?

ಬೆಂಗಳೂರು: ಹೃದಯದ ಆರೋಗ್ಯಕ್ಕೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಹಲವು ಟಿಪ್ಸ್ ನೀವು ಇದುವರೆಗೆ ...

news

ಬೊಜ್ಜು ಕರಗಬೇಕೇ..? ಹಾಗಾದ್ರೆ ಈ ಟೀ ಕುಡಿಯಿರಿ..

ದಪ್ಪಗಿದ್ದೀನಿ ಅಂತ ಬೇಜಾರಾ.. ಬೊಜ್ಜು ಮೈ, ಸೋಂಬೇರಿ ಅಂತಾ ಎಲ್ಲರೂ ಅಣಕವಾಡ್ತಾರಾ.. ಹಾಗಾದ್ರೆ ಇನ್ಮುಂದೆ ...

news

ಕೃತಕ ಸಿಹಿಕಾರಕಗಳನ್ನ ಬಳಸುವವರು ಜೋಕೆ.. ಪ್ರಾಣವೇ ಹೋದೀತು..!

ಸಕ್ಕರೆ ಬದಲಾಗಿ ಬಳಸುವ ಕೃತಕ ಸಿಹಿಕಾರಕ ಉತ್ಪನ್ನಗಳು ದೀರ್ಘಾವಧಿಯಲ್ಲಿ ಒಬೆಸಿಟಿ, ತೀವ್ರ ರಕ್ತದೊತ್ತಡ, ...

Widgets Magazine