ಮಹಿಳೆಯರು ಬದನೆಕಾಯಿ ತಿನ್ನಲೇಬೇಕು ಯಾಕೆ ಗೊತ್ತಾ?

Bangalore, ಶುಕ್ರವಾರ, 21 ಜುಲೈ 2017 (09:22 IST)

ಬೆಂಗಳೂರು: ಬದನೆ ಕಾಯಿ ಕೊಂಚ ಕಹಿ ರುಚಿ ಕೊಡುತ್ತದೆ. ಆದರೆ ಅದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಕೊಡುವ ಸಿಹಿ ಫಲ ಮಾತ್ರ ಅಪಾರವಾದುದು.


 
ರಕ್ತ ಹೀನತೆಗೆ
ಬದನೆಕಾಯಿಗೆ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ವೃದ್ಧಿಸುವ ಶಕ್ತಿಯಿದೆ. ಇದರಲ್ಲಿ ಕಬ್ಬಿಣದಂಶವೂ ಹೇರಳವಾಗಿರುವುದರಿಂದ ರಕ್ತ ಹೀನತೆಯನ್ನು ದೂರ ಮಾಡುತ್ತದೆ. ವಿಶೇಷವಾಗಿ ಈ ಕಾರಣಕ್ಕಾಗಿಯೇ ಮಹಿಳೆಯರಿಗೆ ಇದು ಹೇಳಿ ಮಾಡಿಸಿದ ತರಕಾರಿ.
 
ಹೃದಯದ ಸ್ನೇಹಿತ
ಬದನೆಕಾಯಿಯಲ್ಲಿ ಬೇಡದ ಕೊಬ್ಬಿನಂಶ ನಿವಾರಿಸುವ ಗುಣವಿದೆ. ಹಾಗಾಗಿ ಹೃದಯದ ಆರೋಗ್ಯಕ್ಕೆ ಬದನೆ ಕಾಯಿ ಸೇವನೆ ಉತ್ತಮ.
 
ಜೀರ್ಣವಾಗಲು
ಇದರಲ್ಲಿರುವ ನಾರಿನಂಶ ನಮ್ಮ ಜೀರ್ಣ ಪ್ರಕ್ರಿಯೆಗೆ ಸಹಕಾರಿ. ಮಲಬದ್ಧತೆ ಅಥವಾ ಬೇದಿಯಂತಹ ಜೀರ್ಣಕ್ರಿಯೆಗೆ ಸಂಬಂಧಿತ ರೋಗಗಳು ಬಾರದಂತೆ ನಮ್ಮನ್ನು ಕಾಪಾಡುತ್ತದೆ.
 
ತೂಕ ಕಳೆದುಕೊಳ್ಳಲು
ಮೊದಲೇ ಹೇಳಿದಂತೆ ಇದರಲ್ಲಿ ಬೇಡದ ಕೊಬ್ಬಿನಂಶ ಕರಗಿಸುವ ಶಕ್ತಿಯಿದೆ. ಹಾಗಾಗಿ ಬೊಜ್ಜು ಕರಗಿಸಲು ಬಯಸುವವರು ಇದನ್ನು ಧಾರಾಳವಾಗಿ ತಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದು. ಇದರಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವೂ ಕಡಿಮೆಯಿರುವುದರಿಂದ ತೂಕ ಕಳೆದುಕೊಳ್ಳಲು ಬಯಸುವರು ತಿನ್ನಲಡ್ಡಿಯಿಲ್ಲ.
 
ಇದನ್ನೂ ಓದಿ..  ಅಂದು ಆಸ್ಟ್ರೇಲಿಯನ್ನರಿಂದ ದಂಡ ಹಾಕಿಸಿದ ಹರ್ಮನ್ ಪ್ರೀತ್ ಇಂದು ರಣಚಂಡಿಯಾದರು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅವಲಕ್ಕಿ ತಿನ್ನುವುದು ಎಷ್ಟು ಆರೋಗ್ಯಕರ ಗೊತ್ತಾ?

ಬೆಂಗಳೂರು: ನಮ್ಮ ಬೆಳಗಿನ ಉಪಾಹಾರದಲ್ಲಿ ಅವಲಕ್ಕಿ ಒಂದು ಅವಿಭಾಜ್ಯ ಅಂಗವೇ ಆಗಿ ಬಿಟ್ಟಿದೆ. ಸುಲಭವಾಗಿ ...

news

ದಿನವೊಂದಕ್ಕೆ ಮಹಿಳೆಯರು ಸೆಕ್ಸ್ ಬಗ್ಗೆ ಅದೆಷ್ಟು ಬಾರಿ ಯೋಚಿಸುತ್ತಾರೆ ಗೊತ್ತೇ?

ಬೆಂಗಳೂರು: ಮಹಿಳೆಯರು ಲೈಂಗಿಕ ವಿಷಯಗಳ ಬಗ್ಗೆ ಹೆಚ್ಚು ಮಾತಾಡಿಕೊಳ್ಳಲ್ಲ. ಈ ವಿಚಾರದಲ್ಲಿ ಬಹಳ ಮಡಿವಂತಿಕೆ ...

news

ಆಪಲ್ ನ ಬೀಜ ತಿಂದರೆ ಜೀವಕ್ಕೇ ಕುತ್ತು!

ಬೆಂಗಳೂರು: ಆಪಲ್ ಪ್ರತಿದಿನ ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ. ಆದರೆ ಆಪಲ್ ಬೀಜ ...

news

ಮಹಿಳೆಯರು ಕೇವಲ ಒಂದು ನಿಮಿಷ ಓಡಿದ್ರೆ ಸಾಕು: ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತವನ್ನು ತಡೆಯಬಹುದು

ಮಹಿಳೆಯರು ಪ್ರತಿದಿನ ಕೇವಲ ಒಂದು ನಿಮಿಷ ಓಡಿದ್ರೆ ಸಾಕು ಮೂಳೆಗಳು ಸದೃಢಗೊಳ್ಳುತ್ತಂತೆ.

Widgets Magazine