ವಯಸ್ಸಿಗೆ ತಕ್ಕಂತೆ ನಿಮ್ಮ ದೇಹಕ್ಕೆ ಪ್ರತಿನಿತ್ಯ ಎಷ್ಟು ಪ್ರಮಾಣದ ಅಯೋಡಿನ್ ಅಗತ್ಯ ಎಂಬುದು ತಿಳಿಬೇಕಾ

ಬೆಂಗಳೂರು, ಶನಿವಾರ, 3 ನವೆಂಬರ್ 2018 (14:53 IST)

ಬೆಂಗಳೂರು : ಪ್ರತಿನಿತ್ಯದ ಆಹಾರದಲ್ಲಿ ಅಯೋಡಿನ್‍ ಯುಕ್ತ ಉಪ್ಪನ್ನೇ ಬಳಸಿರಿ ಎಂದು ವೈದ್ಯರು ಹೇಳುತ್ತಾರೆ. ಕಾರಣ ಅಯೋಡಿನ್ ಒಂದು ಸೂಕ್ಷ್ಮ ಖನಿಜಾಂಶವಾಗಿದ್ದು, ಇದು ಮನುಷ್ಯನ ದೇಹಕ್ಕೆ ಆವಶ್ಯಕವಾಗಿದೆ. ಹಾರ್ಮೋನ್‍ಗಳ ಸಂಶ್ಲೇಷಣೆ ಮತ್ತು ಥೈರಾಯ್ಡ್ ಗ್ರಂಥಿಗಳ ಕಾರ್ಯ ಚಟುವಟಿಕೆಗೆ ಅಯೋಡಿನ್ ಅತ್ಯಗತ್ಯ.

ಈ ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ, ಕಿವುಡುತನ ಮತ್ತು ಮೂಕತನ, ಮೆಳ್ಳಗಣ್ಣು, ನಡಿಗೆಯಲ್ಲಿ ಲೋಪ ದೋಷಗಳು, ವಯಸ್ಕರಲ್ಲಿ ನಿಶ್ಯಕ್ತಿ, ಕಾರ್ಯನಿರ್ವಹಣೆಯ ವೈಫಲ್ಯ, ಗಳಗಂಡ ರೋಗ, ಗರ್ಭಿಣಿಯರಲ್ಲಿ ಗರ್ಭಪಾತ ಸಮಸ್ಯೆ ಕಂಡುಬರುತ್ತದೆ.

 

ಆದ್ದರಿಂದ ಪ್ರತಿನಿತ್ಯದ ಆಹಾರದಲ್ಲಿ 1-8 ವರ್ಷದೊಳಗಿನವರಿಗೆ 90 ಮೈಕ್ರೋ ಗ್ರಾಂ. 9 ರಿಂದ 13 ವರ್ಷದೊಳಗಿನವರಿಗೆ 120 ಮೈಕ್ರೋ ಗ್ರಾಂ., 14 ರಿಂದ ಮೇಲ್ಪಟ್ಟ ವಯಸ್ಕರಿಗೆ 150 ಮೈಕ್ರೋ ಗ್ರಾಂ, ಗರ್ಭಿಣಿಯರಿಗೆ 220 ಮೈಕ್ರೋ ಗ್ರಾಂ., ಹಾಲುಣಿಸುವ ತಾಯಂದಿರಿಗೆ 290 ಮೈಕ್ರೋ ಗ್ರಾಂ ಅಯೋಡಿನ್ ಅವಶ್ಯಕತೆ ಇರುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕ್ಯಾನ್ಸರ್ ತಡೆಗಟ್ಟಬೇಕಾದರೆ ಈ ಆಹಾರಗಳನ್ನು ಸೇವಿಸಬೇಡಿ

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕ್ಯಾನ್ಸರ್ ಸದ್ದಿಲ್ಲದೇ ನಮ್ಮ ಜೀವಕ್ಕೆ ಕುತ್ತು ತರುವುದು ...

news

ಹಣ್ಣು ಸೇವಿಸಿದ ಬಳಿಕ ನೀರು ಕುಡಿಯಬಾರದು ಯಾಕೆ ಗೊತ್ತಾ?

ಬೆಂಗಳೂರು: ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹಣ್ಣು ಸೇವಿಸಿದ ಮೇಲೆ ನೀರು ಕುಡಿಯಬಾರದು ...

news

ನಿಯಮಿತವಾಗಿ ಸೆಕ್ಸ್ ಮಾಡದೇ ಇದ್ದರೆ ಕೆಲಸ ಕಳೆದುಕೊಳ್ಳುತ್ತೀರಿ!

ನವದೆಹಲಿ: ನಿಯಮಿತವಾಗಿ ಸೆಕ್ಸ್ ಮಾಡದೇ ಇದ್ದರೆ ನಿಮ್ಮ ಉದ್ಯೋಗಕ್ಕೆ ಕುತ್ತು ಗ್ಯಾರಂಟಿ! ಹೀಗಂತ ನೈಜೀರಿಯಾದ ...

news

ಸಿಂಪಲ್ ಆಗಿ ಬಾದಾಮ್ ಹಲ್ವಾ ಮಾಡಿ ಸವಿಯಿರಿ...

ಯಾವಾಗಲಾದರೂ ನಿಮಗೆ ಸಿಹಿ ತಿಂಡಿಯನ್ನು ತಿನ್ನುವ ಮನಸಾದರೆ ಅತಿ ಶೀಘ್ರವಾಗಿ ನೀವೇ ಮಾಡಿಕೊಳ್ಳಬಹುದಾದ ಸಿಹಿ ...

Widgets Magazine