ಪ್ರಿಯಾಂಕಾ ಚೋಪ್ರಾಳ ಸೌಂದರ್ಯದ ಗುಟ್ಟು ಇಲ್ಲಿದೆ ನೋಡಿ

ಅತಿಥಾ 

ಬೆಂಗಳೂರು, ಗುರುವಾರ, 4 ಜನವರಿ 2018 (18:16 IST)

Widgets Magazine

ಸೆಲೆಬ್ರಿಟಿಗಳನ್ನು ನೋಡುವಾಗ ವಯಸ್ಸು 30 ಕಳೆದರೂ 18 ಯೌವನದ ಚೆಲುವೆಯರಂತೆ ಕಾಣಿಸಿಕೊಳ್ಳುವ ಅವರ ಸೌಂದರ್ಯದ ಗುಟ್ಟೇನು ಎಂದು ಅಚ್ಚರಿ ಪಡೆಯುತ್ತೇವೆ. ಅವರು ದುಬಾರಿ ಸೌಂದರ್ಯವರ್ಧಕ ಬಳಸಿ ಅಷ್ಟೊಂದು ಸುಂದರವಾಗಿ ಕಾಣುತ್ತಾರೆ, ಸಾಮಾನ್ಯರಿಗೆ ಅಂಥ ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಸುವುದಾಗಲಿ, ಚಿಕಿತ್ಸೆ ಪಡೆಯುವುದಾಗಲಿ ಸಾಧ್ಯವಿಲ್ಲ.
ಆದರೆ ಎಷ್ಟೋ ಸೆಲೆಬ್ರಿಟಿಗಳು ತಮ್ಮ ಸೌಂದರ್ಯಕ್ಕಾಗಿ ಸಾಮಾನ್ಯವಾಗಿ ಮನೆಯಲ್ಲಿ ಸಿಗುವ ವಸ್ತುಗಳನ್ನೇ ಬಳಸುತ್ತಾರೆ ಎನ್ನುವುದು ಗೊತ್ತೇ? ಹೌದು ವಿದ್ಯಾಬಾಲನ್, ಪ್ರಿಯಾಂಕಾ ಚೋಪ್ರಾ ಹೀಗೆ ಹಲವು ಸೆಲೆಬ್ರಿಟಿಗಳು ತಮ್ಮ ಸೌಂದರ್ಯ ವೃದ್ಧಿಸಲು ಈಗಲೂ ಅರಿಶಿಣ, ಮೊಸರಿನಂಥ ವಸ್ತುಗಳನ್ನು ಬಳಸುತ್ತಿದ್ದಾರೆ.
 
1. ಬಾಡಿ ಸ್ಕ್ರಬ್
 
ಬೇಕಾಗುವ ಸಾಮಗ್ರಿಗಳು -
ಕಡಲೆ ಹಿಟ್ಟು/ಅಕ್ಕಿ ಹಿಟ್ಟು - 1 ಕಪ್
ನಿಂಬೆ ರಸ - 2-3 ಚಮಚ
ಮೊಸರು - 1-2 ಚಮಚ
ಶ್ರೀಗಂಧದ ಪುಡಿ - 1 ಚಮಚ
ಅರಿಶಿನ ಪುಡಿ - 1/2 ಚಮಚ
ಹಾಲು - 1-2 ಚಮಚ
 
ಸ್ಕ್ರಬ್ ತಾಯಾರಿಸುವ ವಿಧಾನ -
- ಮೇಲೆ ಸೂಚಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಮೃದುವಾದ ಪೇಸ್ಟ್ ತಯಾರಿಸಿ 
- ಈ ಮಿಶ್ರಣವನ್ನು ಮುಖ, ಮತ್ತು ದೇಹಕ್ಕೆ ಲೇಪಿಸಿ, 15 ನಿಮಿಷಗಳ ಕಾಲ ಒಣಗಲು ಬಿಡಿ.
- ಸ್ವಲ್ಪ ನೀರನ್ನು ಬಳಸಿ ಹಗುರವಾಗಿ ಸ್ಕ್ರಬ್ ಮಾಡಿ
- ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ
 
ಬಾಡಿ ಸ್ಕ್ರಬ್‌ನ ಗುಣಗಳು
* ಮುಖ/ ದೇಹದಲ್ಲಿ ರಕ್ತ ಸಂಚಲವನ್ನು ಹೆಚ್ಚಿಸುತ್ತದೆ.
* ಕೆಟ್ಟ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತಾದೆ.
* ಒರಟು ತ್ವಚೆಯನ್ನು ಮೃದುವಾಗಿಸುತ್ತದೆ, ಚರ್ಮಕ್ಕೆ ಹೊಳಪನ್ನು ನೀಡುತ್ತದೆ.
 
2. ಲಿಪ್ ಸ್ಕ್ರಬ್
 
ಬೇಕಾಗುವ ಸಾಮಗ್ರಿಗಳು -
 
ಸೀ ಸಾಲ್ಟ್ / ಉಪ್ಪು - 3-4 ಚಿಟಿಕೆ
ಶುದ್ಧ ಗ್ಲಿಸರಿನ್ - ಕೆಲವು ಹನಿಗಳು
ಕೆಲವು ಹನಿಗಳು ರೋಸ್ ವಾಟರ್
 
ಸ್ಕ್ರಬ್ ತಾಯಾರಿಸುವ ವಿಧಾನ -
- ಮೇಲೆ ಸೂಚಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ
- ನಿಧಾನವಾಗಿ ನಿಮ್ಮ ತುಟಿಗಳು ಮೇಲೆ ಮಿಶ್ರಣವನ್ನು ಲೇಪಿಸಿ, 1-2 ನಿಮಿಷಗಳ ನಂತರ ಅದನ್ನು ತೊಳೆದುಕೊಳ್ಳಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಜನವರಿ 3 ರಿತೇಶ್ ದೇಶ್‌ಮುಖ್‌ಗೆ ಜೀವನ ಬದಲಾದ ದಿನವಂತೆ...!!

ನಟ ರಿತೇಶ್ ದೇಶ್‌ಮುಖ್‌ ಮತ್ತು ಜೆನೆಲಿಯಾ ಡಿಸೋಜಾ ಅವರ ಜೋಡಿ ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಂದು. ...

news

ಬಂತು ನೋಡಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಶಾಕಿಂಗ್ ಸುದ್ದಿ

ಬಾಲಿವುಡ್ ನಟಿಯಾಗಿರುವ ಕರ್ನಾಟಕದ ದೀಪಿಕಾ ಪಡುಕೋಣೆ ಅವರು ಮದುವೆಯಾಗಲಿದ್ದಾರೆ ಎಂಬ ಶಾಕಿಂಗ್ ಸುದ್ದಿಯೊಂದು ...

news

"ಝೀರೋ" ಚಿತ್ರದ ಟೈಟಲ್ ಟೀಸರ್ ಬಿಡುಗಡೆ: ಕುಬ್ಜನಾದ ಕಿಂಗ್ ಖಾನ್

ಮುಂಬೈ: ಕಿಂಗ್ ಖಾನ್ ತಮ್ಮ "ಝೀರೋ" ಚಿತ್ರದ ಟೈಟಲ್ ಟೀಸರ್ ಬಿಡುಗಡೆಗೊಳಿಸಿದ್ದಾರೆ. "ಜಬ್ ತಕ್ ಹೈ ಜಾನ್" ...

news

ಬಿಗ್ ಬಾಸ್ ಕನ್ನಡ: ಚಂದನ್ ಗೆ ಹುಡುಗಿ ಹುಡುಕಿಯೇ ಬಿಟ್ಟ ರಿಯಾಜ್! ಯಾರಾಕೆ ಗೊತ್ತಾ?!

ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರ ಹೋದ ತಕ್ಷಣ ಚಂದನ್ ಶೆಟ್ಟಿ ಮದುವೆಯಾಗುವುದು ಖಂಡಿತಾ ...

Widgets Magazine