‘ನಮ್ಮ ದೇಶದ ಭೂಭಾಗಕ್ಕೆ ಹೆಸರಿಡಲು ಚೀನಾ ಯಾರು?’

NewDelhi, ಶುಕ್ರವಾರ, 21 ಏಪ್ರಿಲ್ 2017 (06:52 IST)

Widgets Magazine

ನವದೆಹಲಿ: ಅರುಣಾಚಲ ಪ್ರದೇಶದ ಕೆಲವು ಭೂಭಾಗಳಿಗೆ ತನ್ನ ಹೆಸರಿಟ್ಟಿರುವ ಚೀನಾ ಕ್ರಮವನ್ನು ಭಾರತ ಪ್ರಬಲವಾಗಿ ಖಂಡಿಸಿದೆ. ಅಲ್ಲದೆ ತನ್ನ ಭೂಭಾಗಗಳಿಗೆ ಹೆಸರಿಡುವ ಅಧಿಕಾರ ಚೀನಾಗೆ ಕೊಟ್ಟವರಾರು ಎಂದು ಪ್ರಶ್ನಿಸಿದೆ.


 
ಅರುಣಾಚಲ ಪ್ರದೇಶದ ಆರು ಭಾಗಗಳಿಗೆ ಮರು ನಾಮಕರಣ ಮಾಡಿರುವ ಚೀನಾ ಕ್ರಮವನ್ನು ಪ್ರಶ್ನಿಸಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ‘ಅರುಣಾಚಲ ಪ್ರದೇಶದ ಅಣು ಅಣುವೂ ಭಾರತಕ್ಕೆ ಸೇರಿದ್ದು. ಇದು ನಿಮ್ಮ ನೆರೆಹೊರೆಯವರಿಗೆ ನೀವು ನಾಮಕರಣ ಮಾಡಿದಂತೆ. ನೀವು ಹೆಸರು ಬದಲಾಯಿಸಿದ ಮಾತ್ರಕ್ಕೆ ಅವರ ಮೂಲ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ” ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಮರುನಾಮಕರಣ ಮಾಡುವುದರಿಂದ ನಮ್ಮ ದೇಶದ ಭೂಭಾಗ ಬೇರೆ ದೇಶದ್ದಾಗದು ಎಂದು ವಿದೇಶಾಂಗ ಇಲಾಖೆ ಕೂಡಾ ಖಾರವಾಗಿ ಪ್ರತಿಕ್ರಿಯಿಸಿದೆ. ಇದರಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡಬಹುದು ಎಂದು ಭಾರತ ಎಚ್ಚರಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಸ್ಪರ್ಧೆ: ಜೆಡಿಎಸ್

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ...

news

ನೋಡ ನೋಡುತ್ತಿದ್ದಂತೆ ಕಲ್ಯಾಣಿಯಲ್ಲಿ ಮುಳುಗಿದ ವ್ಯಕ್ತಿ.. ಸಹಾಯಕ್ಕೆ ಬರದೇ ವಿಡಿಯೋ ತೆಗೆಯುತ್ತಿದ್ದ ಜನ

ಯಾವುದೇ ಅಪಘಾತದ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡಬೇಕೆಂದು ಎಷ್ಟೇ ಜಾಗೃತಿ ಮೂಡಿಸಿದರೂ ಜನ ...

news

ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ ಈಶ್ವರಪ್ಪ

ಬೆಂಗಳೂರು: ಬಿಜೆಪಿಯಲ್ಲಿ ಕೆಲವರಿಗೆ ತುಂಬಾ ನೋವು ಕಾಡುತ್ತಿದೆ ಎಂದು ಯಡಿಯೂರಪ್ಪ ವಿರುದ್ಧ ಬಿಜೆಪಿ ಹಿರಿಯ ...

news

ಭಾರಿ ಮಳೆಗೆ ಸಿಲುಕಿದ ಸಚಿವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

ಮೈಸೂರು: ಮೂವರು ಸಚಿವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾರಿ ಮಳೆಯಿಂದಾಗಿ ಹಾರಾಟ ಸಾಧ್ಯವಾಗದೆ ಮತ್ತೆ ...

Widgets Magazine