ಅಮೆರಿಕದ ಚಿಲಿಯಲ್ಲಿ 8.2 ತೀವ್ರತೆಯ ಪ್ರಬಲ ಭೂಕಂಪ

ಬುಧವಾರ, 2 ಏಪ್ರಿಲ್ 2014 (11:26 IST)

Widgets Magazine

ವಾಷಿಂಗ್ಟನ್ : ಅಮೆರಿಕದ ಉತ್ತರ ಚಿಲಿಯಲ್ಲಿ ರಿಕ್ಟರ್ ಮಾಪಕದಲ್ಲಿ 8.2 ತೀವ್ರತೆಯ ಪ್ರಬಲ ಸಂಭವಿಸಿದ್ದು, ಸಣ್ಣ ಸುನಾಮಿ ಅಲೆಯನ್ನು ಎಬ್ಬಿಸಿದೆ. ಇದರಿಂದ ಇಡೀ ಪೆಸಿಫಿಕ್ ತೀರದಲ್ಲಿ ವಾಸಿಸುತ್ತಿರುವ ಜನರನ್ನು ತೆರವು ಮಾಡಲಾಗಿದೆ. ಭೂಕಂಪದಿಂದಾಗಿ ಐವರು ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಭೂಕಂಪದಿಂದ ಸಂಭವಿಸಿದ ಭೂಕುಸಿತಗಳಿಂದ ರಸ್ತೆಗಳಿಗೆ ತಡೆಯಾಗಿದ್ದು, ಸಾವಿರಾರು ಜನರಿಗೆ ವಿದ್ಯುಚ್ಛಕ್ತಿ ಪೂರೈಕೆ ಸ್ಥಗಿತಗೊಂಡಿದೆ ಹಾಗೂ ವಿಮಾನನಿಲ್ದಾಣಕ್ಕೆ ಹಾನಿಯಾಗಿದ್ದು ಅನೇಕ ಮಳಿಗೆಗಳಲ್ಲಿ ಬೆಂಕಿ ಆವರಿಸಿದೆ.ಇಖಿಕಿ ಮತ್ತು ಆಲ್ಟೋ ಹಾಸ್ಪಿಸಿಯೋ ನಗರಗಳಲ್ಲಿ ನಾಲ್ವರು ಪುರುಷರು ಮತ್ತು ಒಬ್ಬ ಮಹಿಳೆ ಅವಶೇಷಗಳಡಿ ಸಿಕ್ಕಿ ಮೃತಪಟ್ಟಿರುವುದಾಗಿ ಸಚಿವ ರಾಡ್ರಿಗೋ ತಿಳಿಸಿದ್ದಾರೆ.

PR
PR
ಭೂಕಂಪವು ಸ್ಥಳೀಯ ಕಾಲಮಾನ 20.46ಕ್ಕೆ ಅಪ್ಪಳಿಸಿದೆ. ಇಖಿತ್ ಗಣಿ ಪ್ರದೇಶದ ವಾಯವ್ಯಕ್ಕೆ 86 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದೆ. ಚಿಲಿಯ ಕೆಲವು ಪ್ರದೇಶಗಳಲ್ಲಿ 2.1 ಮೀ(6 ಅಡಿ) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿದ್ದು, ವಿದ್ಯುತ್ ಕಡಿತ, ಬೆಂಕಿ ಅವಘಡಗಳು ಮತ್ತು ಭೂಕುಸಿತಗಳು ಸಂಭವಿಸಿವೆ. ಹತ್ತಾರು ಸಾವಿರ ಜನರನ್ನು ಸ್ಥಳಗಳಿಂದ ತೆರವು ಮಾಡಲಾಗಿದ್ದು, ತುರ್ತು ಸ್ಥಿತಿಯನ್ನು ಘೋಷಿಸಲಾಗಿದೆ. ಗೋಡೆಗಳ ಕುಸಿತ ಮತ್ತು ಹೃದಯಾಘಾತಗಳಿಂದ ಸತ್ತಿರುವ ಜನರು ಮೃತರಲ್ಲಿ ಸೇರಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

Widgets Magazine