Widgets Magazine

ಮಾದಕ ದ್ರವ್ಯ ಕಳ್ಳಸಾಗಣೆ;ಭಾರತೀಯರು ಸೇರಿ 7 ಜನ ಸೆರೆ

ಕೊಲಂಬೋ| ಗಿರಿಧರ್| Last Modified ಬುಧವಾರ, 30 ನವೆಂಬರ್ 2011 (18:24 IST)
ಭಾರತದಿಂದ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಶ್ರೀಲಂಕಾ ನೌಕಾಪಡೆ ಇಬ್ಬರು ಭಾರತೀಯರು ಮತ್ತು ಐವರು ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿದೆ.

ಬಂಧಿತ ಕಳ್ಳ ಸಾಗಣೆದಾರರಿಂದ 700ಗ್ರಾಂ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ.

ಶ್ರೀಲಂಕಾದ ಉತ್ತರ ಭಾಗದಲ್ಲಿರುವ ಕನ್‌ಕೆಸಂತುರೈ ಕರಾವಳಿಯಲ್ಲಿ ಬೋಟ್‌ ಮೂಲಕ ಮಾದಕ ವಸ್ತುಗಳನ್ನು ಶ್ರೀಲಂಕಾ ಪ್ರಜೆಗಳಿಗೆ ಹಸ್ತಾಂತರಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆರಾಯಿನ್‌ ಮೊದಲಾದ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :