ಗಂಡನಿಗೆ ಸೆಕ್ಸ್ ಒಲ್ಲೆನೆನ್ನುವುದೂ ಕಿರುಕುಳವಂತೆ!

ಮಲೇಷ್ಯಾ, ಶನಿವಾರ, 29 ಜುಲೈ 2017 (08:46 IST)

ಮಲೇಷ್ಯಾ: ಗಂಡ ಮಧುಮಂಚಕ್ಕೆ ಕರೆದರೆ ಮರು ಮಾತನಾಡದೇ ಪತ್ನಿ ಆತನ ಜತೆ ದೇಹ ಹಂಚಿಕೊಳ್ಳಬೇಕು. ಆಕೆ ಒಲ್ಲೆನೆನ್ನುವುದೂ ಒಂದು ರೀತಿಯ ಎಂಬ ವಿವಾದಿತ ಹೇಳಿಕೆಯೊಂದನ್ನು ಮಲೇಷ್ಯಾದ ಶಾಸಕರೊಬ್ಬರು ನೀಡಿದ್ದಾರೆ.


 
ಚೆ ಮೊಹಮ್ಮದ್ ಝುಲ್ಕಿಫಿ ಈ ರೀತಿಯ ಮಹಾನ್ ಷರಾ ಬರೆದ ಮಹಾನುಭಾವ. ಕೆಲವು ಕುಟುಂಬಗಳಲ್ಲಿ ಮಹಿಳೆಯರು ಗಂಡ ಸೆಕ್ಸ್ ಗೆ ಕರೆದರೆ, ಬಾರದೇ ಸತಾಯಿಸುತ್ತಾರೆ. ಇದೊಂದು ರೀತಿಯ ಮಾನಸಿಕ ಕಿರುಕುಳ ಎಂದು ಅವರು ಸಂಸತ್ತಿನಲ್ಲೇ ಹೇಳಿದ್ದಾರೆ.
 
ಕೌಟುಂಬಿಕ ಕಿರುಕುಳದ ಕಾನೂನಿಗೆ ತಿದ್ದುಪಡಿ ತರುವ ವಿದೇಯಕವೊಂದನ್ನು ಚರ್ಚಿಸುತ್ತಿದ್ದಾಗ ಅವರು ಆವೇಷದಿಂದ ಈ ರೀತಿ ಹೇಳಿದ್ದಾರೆ. ಶಾಸಕರ ಈ ಹೇಳಿಕೆಗೆ ಮಹಿಳಾವಾದಿಗಳಿಂದ ಸರಿಯಾಗಿಯೇ ತಿರುಗೇಟು ಸಿಕ್ಕಿದೆ. ಗಂಡ ಕರೆದ ತಕ್ಷಣ ಹೆಂಡತಿ ಸೆಕ್ಸ್ ಗೆ ಸಮ್ಮತಿಸಬೇಕೆಂದಿಲ್ಲ.  ಅದು ಮಹಿಳೆಯರ ಹಕ್ಕು. ಇಂತಹವರೆಲ್ಲಾ ನಮ್ಮನ್ನು ಆಳುತ್ತಾರೆ ಎಂದು ಮಹಿಳಾ ಸಂಘಟನೆಗಳು ಚೆ ಮೊಹಮ್ಮದ್ ಗೆ ತಪರಾಕಿ ನೀಡಿದ್ದಾರೆ.
 
ಇದನ್ನೂ ಓದಿ..  ನೀವೇ ನಮ್ಮ ಪ್ರಧಾನಿಯಾಗಬೇಕಿತ್ತು ಎಂದು ಸಚಿವೆ ಸುಷ್ಮಾಗೆ ಆ ಮಹಿಳೆ ಹೇಳಿದ್ದೇಕೆ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸೆಕ್ಸ್ ಕೌಟುಂಬಿಕ ಕಿರುಕುಳ ಅಂತಾರಾಷ್ಟ್ರೀಯ ಸುದ್ದಿಗಳು ಗಂಡ-ಹೆಂಡತಿ Sex Husband-wife Domestic Violence International News

ಸುದ್ದಿಗಳು

news

ಗುಜರಾತ್ ಕಾಂಗ್ರೆಸ್‌ನಲ್ಲಿ ಉಲ್ಬಣಿಸಿದ ಬಿಕ್ಕಟ್ಟು: 6 ಶಾಸಕರ ರಾಜೀನಾಮೆ

ವಡೋದರಾ: ಗುಜರಾತ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉಲ್ಬಣಿಸಿದ್ದು ಮೂರು ದಿನಗಳಲ್ಲಿ ಆರು ಕಾಂಗ್ರೆಸ್ ...

news

ನಮ್ಮ ಮೆಟ್ರೋದಲ್ಲಿ ಹಿಂದಿ ಬೇಡ: ಕೇಂದ್ರಕ್ಕೆ ಸಿಎಂ ಪತ್ರ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಕುರಿತಂತೆ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ...

news

ಪಾಕಿಸ್ತಾನ: ಪ್ರಧಾನಿ ಹುದ್ದೆ ತ್ಯಜಿಸಿದ ನವಾಜ್ ಷರೀಫ್

ಇಸ್ಲಾಮಾಬಾದ್: ಪನಾಮಾ ಪೇಪರ್ ಪ್ರಕರಣದಲ್ಲಿ ಭ್ರಷ್ಟಾಚಾರವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ...

news

ಧರ್ಮಸಿಂಗ್ ಅಂತ್ಯಸಂಸ್ಕಾರಕ್ಕೆ ನೆಲೋಗಿಗೆ ಆಗಮಿಸಿದ ಸಿಎಂ

ಜೇವರ್ಗಿ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಿಎಂ ಸಿದ್ದರಾಮಯ್ಯ ...

Widgets Magazine