ನೆಹರೂ-ಎಡ್ವಿನಾ ಮೌಂಟ್ ಬೇಟನ್ ಸಂಬಂಧದ ರಹಸ್ಯ ಬಿಚ್ಚಿಟ್ಟ ಎಡ್ವಿನಾ ಪುತ್ರಿ

ನವದೆಹಲಿ, ಭಾನುವಾರ, 30 ಜುಲೈ 2017 (15:27 IST)

ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಕೊನೆಯ ಬ್ರಿಟಿಷ್ ವೈಸರಾಯ್ ಲಾರ್ಡ್ ಲೂಯಿಸ್ ಮೌಂಟ್ ಬೇಟನ್ ಪತ್ನಿ ಎಡ್ವಿನಾ ಆಶ್ಲೇ ನಡುವೆ ಪ್ರೀತಿ ಇದ್ದಿದ್ದು ನಿಜ ಎಂದು ಎಡ್ವಿನಾ ಪುತ್ರಿ ಪಮೇಲಾ ಹಿಕ್ಸ್ ನೀ ಮೌಂಟ್ ಬೇಟನ್ ಒಪ್ಪಿಕೊಂಡಿದ್ದಾರೆ.


 
“ಡಾಟರ್ ಆಫ್ ಎಂಪಯರ್: ಲೈಫ್ ಆಸ್ ಎ ಮೌಂಟ್ ಬೇಟನ್” ಎಂಬ ಪಮೇಲಾ ಬರೆದ ಪುಸ್ತಕದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ತಂದೆ, ತಾಯಿ ಜತೆ ಭಾರತಕ್ಕೆ ಬರುವಾಗ ಹಿಕ್ಸ್ ಗೆ 17 ವರ್ಷವಾಗಿತ್ತಂತೆ. ಈ ಸಂದರ್ಭದಲ್ಲಿ ನೆಹರೂ ಮತ್ತು ತನ್ನ ತಾಯಿ ಎಡ್ವಿನಾ ಪರಸ್ಪರ ಆಕರ್ಷಿತರಾಗಿದ್ದುನಿಜ. ಆದರೆ ಇಬ್ಬರಿಗೂ ದೈಹಿಕ ಸಂಬಂಧ ಬೆಳೆಸಲು ಏಕಾಂತ ಸಿಕ್ಕಿರಲಿಲ್ಲ ಎಂದು ಸ್ಪೋಟಕ ಸತ್ಯ ಬಹಿರಂಗಪಡಿಸಿದ್ದಾರೆ.
 
ಇಬ್ಬರ ನಡುವೆ ಆಕರ್ಷಣೆಯಿದ್ದಿದ್ದು ನಿಜ ಎಂದು ತನಗೆ ಗೊತ್ತಾಗಿತ್ತು. ಆದರೆ ಇದು ದೈಹಿಕ ಸಂಬಂಧದವರೆಗೆ ಮುಂದುವರಿದಿತ್ತಾ ಎಂದು ಗೊತ್ತಾಗಬೇಕಿತ್ತು. ಅದಕ್ಕಾಗಿ ಅವರ ಪತ್ರಗಳನ್ನು ಓದಿದ್ದೆ. ಆಗ ನನಗೆ ಅವರು ಪರಸ್ಪರ ಎಷ್ಟು  ಗೌರವ ಇಟ್ಟುಕೊಂಡಿದ್ದರು ಎಂದು ಗೊತ್ತಾಗಿತ್ತು. ಆದರೆ ಅವರಿಬ್ಬರ ನಡುವೆ ದೈಹಿಕ ಸಂಬಂಧ ನಡೆದಿರಲಿಲ್ಲ ಎಂದು ಸ್ಪಷ್ಟವಾಯಿತು ಎಂದು ಎಡ್ವಿನಾ ಪುತ್ರಿ ಹೇಳಿದ್ದಾರೆ.
 
ಇದನ್ನೂ ಓದಿ.. ಯುದ್ಧಕ್ಕೆ ಸಿದ್ಧರಾಗಿ ಎಂದು ಸೈನಿಕರಿಗೆ ಕರೆಕೊಟ್ಟ  ಚೀನಾ ಅಧ್ಯಕ್ಷ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಜವಹರಲಾಲ್ ನೆಹರೂ ಎಡ್ವಿನಾ ಮೌಂಟ್ ಬೇಟನ್ ಪಮೇಲಾ ಹಿಕ್ಸ್ ನೀ ಮೌಂಟ್ ಬೇಟನ್ ಅಂತಾರಾಷ್ಟ್ರೀಯ ಸುದ್ದಿಗಳು International News Edwina Mount Batten Jawahar Lal Nehru Pamela Hicks Nee Mountbatten

ಸುದ್ದಿಗಳು

news

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ ಅರೆಸ್ಟ್

ಬೆಂಗಳೂರು: ಶಾಲಾ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ...

news

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಭೇಟಿ ರದ್ದು

ಬೆಂಗಳೂರು: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ...

news

ಜಿಎಸ್ ಟಿ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ: ಪ್ರಧಾನಿ ಮನ್ ಕಿ ಬಾತ್

ಜಿಎಸ್ ಟಿಯಿಂದ ಓರ್ವ ಸಾಮಾನ್ಯ ವ್ಯಕ್ತಿಗೂ ಲಾಭವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಿದೆ. ಒಂದು ದೇಶ ...

news

ಗುಜರಾತ್ ಕೋಸ್ಟ್ ಗಾರ್ಡ್‌ನಿಂದ 3500 ಕೋಟಿ ಮೌಲ್ಯದ ಡ್ರಗ್ಸ್ ವಶ

ಪೋರಬಂದರ್: ಹಡುಗಿನಲ್ಲಿ ಸಾಗಿಸುತ್ತಿದ್ದ 3500 ಕೋಟಿ ಮೌಲ್ಯದ 1500 ಕೆಜಿ ಹೆರಾಯಿನ್‌ನನ್ನು ಕೋಸ್ಟ್ ...

Widgets Magazine