ರೂಂ ಕ್ನೀನ್ ಮಾಡು ಎಂದಿದ್ದಕ್ಕೆ ಅಜ್ಜಿಯನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ 11 ವರ್ಷದ ಬಾಲಕ

ಅಮೇರಿಕಾ, ಮಂಗಳವಾರ, 6 ನವೆಂಬರ್ 2018 (09:10 IST)

ಅಮೇರಿಕಾ : ಕೋಪದ ಕೈಯಲ್ಲಿ ಬುದ್ಧಿ ಕೊಟ್ಟರೆ ಅನಾಹುತ ಆಗುತ್ತದೆ ಎಂಬುದಕ್ಕೆ ಅಮೇರಿಕಾದಲ್ಲಿ ನಡೆದ ಘಟನೆಯೊಂದು ಉತ್ತಮ ಉದಾಹರಣೆ.


ಶನಿವಾರ ಅಮೆರಿಕಾದ ಅರಿಝೋನಾದ ಲೀಚ್‍ಫಿಲ್ಡ್ ಪಾರ್ಕ್ ಎಂಬಲ್ಲಿ ಅಜ್ಜಿ ಕೋಣೆಯನ್ನು ಸ್ವಚ್ಛ ಮಾಡು ಎಂದು ಹೇಳಿದ್ದಕ್ಕೆ ಕೋಪಗೊಂಡ 11 ವರ್ಷದ ಬಾಲಕನೊಬ್ಬ ಅಜ್ಜಿಗೆ ಗುಂಡಿಕ್ಕಿ ಬಳಿಕ ತಾನು ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.


ಈ ಘಟನೆಯನ್ನು ಕುರಿತು ಪೊಲೀಸರು ಹತ್ಯೆಗೆ ಒಳಗಾದ ಅಜ್ಜಿಯ ಪತಿಯನ್ನು ವಿಚಾರಿಸಿದಾಗ  ‘ಪತ್ನಿ ವೈವೋನ್ನೇ ವೂಡಾರ್ಡ್ ಮೊಮ್ಮಗನಿಗೆ ತನ್ನ ರೂಂ ಅನ್ನು ಸ್ವಚ್ಛಗೊಳಿಸಲು ಹೇಳಿದ್ದಾಳೆ. ಈ ವಿಚಾರದಲ್ಲಿ ಆತ ತುಂಬಾ ಹಠ ಮಾಡುತ್ತಿದ್ದ ಕ್ಕೆ ಆಕೆ ಆತನಿಗೆ ಗದರಿದ್ದಾಳೆ. ಇದರಿಂದ ಕೋಪಗೊಂಡ ಆತ ನಾವಿಬ್ಬರು ಟಿವಿ ನೋಡುತ್ತಿದ್ದಾಗ ಮನೆಯಲ್ಲಿದ್ದ ಗನ್ ಹಿಡಿದು ಅಜ್ಜಿಯನ್ನು ಹಿಂಬದಿಯಿಂದ ಬಂದು ಶೂಟ್ ಮಾಡಿದ್ದಾನೆ. ಬಳಿಕ ಅದೇ ಗನ್‍ನಿಂದ ತನ್ನನ್ನು ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.


ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದು ಕೊಲೆಯೋ ಅಥವಾ ಆ ಕ್ಷಣದ ಕೋಪದಿಂದ ಮಾಡಿದ್ದೇ ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ದೂರು ದಾಖಲಿಸುವಂತೆ ಹೈಕೋರ್ಟ್ ಆದೇಶ

ಬೆಂಗಳೂರು : ಬೆಂಗಳೂರನ್ನು ಕಸ ಮುಕ್ತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ...

news

ವ್ಯಕ್ತಿಯನ್ನು ಕೊಂದ ಹುಲಿಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಸೇಡು ತೀರಿಸಿಕೊಂಡ ಗ್ರಾಮಸ್ಥರು

ಲಕ್ನೋ : 50 ವರ್ಷದ ವ್ಯಕ್ತಿಯನ್ನು ಕೊಂದು ಹಾಕಿದ ಹುಲಿಯ ಮೇಲೆ ಸೇಡು ತೀರಿಸಿಕೊಳ್ಳಲು ಗ್ರಾಮಸ್ಥರು ಅದರ ...

news

ಗೆಳೆಯನ ಜೊತೆ ಕುಳಿತು ಮಾತನಾಡುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ಮುಂಬೈ : 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಆಕೆಯ ಗೆಳೆಯ ಜೊತೆ ಕುಳಿತು ಮಾತನಾಡುತ್ತಿರುವ ವೇಳೆ ಕಾಮುಕರು ...

news

ಎರಡನೇ ಮದುವೆಯಾಗಲು ನಿರಾಕರಿಸಿದ ವಿವಾಹಿತನಿಗೆ ಯುವತಿಯ ಮಾವಂದಿರು ಮಾಡಿದ್ದೇನು

ಮೈಸೂರು : ಯುವತಿಯೊಬ್ಬಳ ಜೊತೆ ಎರಡನೇ ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿವಾಹಿತನೊಬ್ಬನನ್ನು ಯುವತಿಯ ...