ಫೇಸ್‌ಬುಕ್ ಮೂಲಕ ಬಾಲಕಿ ಪರಿಚಯ, ಅಪಹರಣ, ಲೈಂಗಿಕ ದೌರ್ಜನ್ಯ

ಹೈದರಾಬಾದ್, ಬುಧವಾರ, 8 ಮಾರ್ಚ್ 2017 (13:03 IST)

ಕಳೆದ ತಿಂಗಳು ಬೆಂಗಳೂರಿನಿಂದ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿಯನ್ನು ಇಂದು ಹೈದರಾಬಾದ್‌ನಲ್ಲಿ ಪೊಲೀಸರು ರಕ್ಷಿಸಿದ್ದಾರೆ.
ಕಟ್ಟಡ ನಿರ್ಮಾಣ ಕೆಲಸ ಮಾಡುವ 29 ವರ್ಷದ ಯುವಕ ಶೋಹಿಬ್ ಮತ್ತು ಆತನ ಸ್ನೇಹಿತರು ಈ ಬಾಲಕಿಯನ್ನು ಅಪಹರಿಸಿದ್ದರು ಎಂದು ತಿಳಿದು ಬಂದಿದೆ.
 
ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ 9 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ಪರಿಚಯ ಬೆಳಸಿಕೊಂಡಿದ್ದ ಶೋಹಿಬ್ ಆಕೆಯ ಜತೆ ಸದಾ ಚಾಟ್ ಮಾಡುತ್ತಿದ್ದ. ಬಳಿಕ ಹೈದರಾಬಾದ್‌ಗೆ ಬರುವಂತೆ ಆಕೆಯನ್ನು ಪುಸಲಾಯಿಸಿದ್ದಾನೆ. 
 
ಅಮಾಯಕ ಬಾಲಕಿ ಆತನ ಕರೆಯನ್ನು ಒಪ್ಪಿ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದಾಳೆ. ಆಕೆಯನ್ನು ತನ್ನ ಗೆಳೆಯರ ಮನೆಯಲ್ಲಿಟ್ಟ ಶೋಹಿಬ್ ಆಕೆಯನ್ನು ಲೈಂಗಿಕವಾಗಿ
ಬಳಸಿಕೊಳ್ಳತೊಡಗಿದ್ದ.
 
ಮಗಳು ಕಾಣದಾದ ಬಗ್ಗೆ ಆಕೆಯ ತಾಯಿ ನೀಡಿರುವ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಬಾಲಕಿ ಹೈದರಾಬಾದ್‌ನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ.
 
ಪೊಲೀಸರಿಗೆ ತಮ್ಮ ಕುರಿತು ಮಾಹಿತಿ ದೊರೆಯುತ್ತಿದ್ದಂತೆ ಶೋಹಿಬ್ ಮತ್ತು ಬಾಲಕಿ ಮಾನವ ಹಕ್ಕು ಸಂಸ್ಥೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ. ಅದನ್ನು ನಂಬಿದ ಸಂಸ್ಥೆ ಬಾಲಕಿ ತಾಯಿ ಮಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಳು ಎಂದು ಮಾನವ ಹಕ್ಕು ಸಂಸ್ಥೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ.
 
ಆದರೆ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿರುವ ಪೊಲೀಸರು ಆಕೆಯನ್ನು ತಾಯಿಯ ವಶಕ್ಕೆ ಒಪ್ಪಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಲಿಗೆ ಬೀಳುವುದು ಬಿಜೆಪಿ ಸಂಸ್ಕೃತಿಯಲ್ಲ, ವಿಕೃತಿ; ಈಶ್ವರಪ್ಪ ಟಾಂಗ್

ಕಾಲಿಗೆ ಬೀಳುವುದು ಬಿಜೆಪಿ ಸಂಸ್ಕೃತಿಯಲ್ಲ, ಅಧಿಕಾರ ಸ್ಥಾನಮಾನದ ಆಸೆಗಾಗಿ ಕಾಲಿಗೆ ಬೀಳುವುದು ವಿಕೃತಿ ...

news

ಶಂಕಿತ ಐಸಿಸ್ ಉಗ್ರನ ಹತ್ಯೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಜಗತ್ತಿನ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ ಉಗ್ರನನ್ನು ಬರೊಬ್ಬರಿ 12 ಗಂಟೆಗಳ ಕಾರ್ಯಾಚರಣೆ ಮೂಲಕ ...

news

ನಮ್ಮ ತಂದೆ ಹೆಬ್ಬೆಟ್ಟು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನೋಡೀಪ್ಪಾ ದೇಶಪಾಂಡೆ, ನಿಮಗೆ ತಲೆತಲಾಂತರದಿಂದ ಶಿಕ್ಷಣ ಸಿಕ್ಕಿದೆ. ಆದರೆ ನಮ್ಮ ಕುಟುಂಬದಲ್ಲಿ ...

news

ಬೆಂಗಳೂರು ಜನಸಂದಣಿ ತಪ್ಪಿಸಲು ಕೆಜಿಎಫ್`ನಲ್ಲಿ ತಲೆ ಎತ್ತಲಿದೆ ನವನಗರ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆಂಗಳೂರು ನಗರದ ಜನಸಂದಣಿ ತಪ್ಪಿಸಲು ಕೆಜಿಎಫ್ ಬಳಿ ನವನಗರ ...

Widgets Magazine
Widgets Magazine