Widgets Magazine
Widgets Magazine

ವೈದ್ಯರ ಉಡುಗೆ ತೊಟ್ಟು ಆಸ್ಪತ್ರೆಯಲ್ಲಿ ಮಾರಣಹೋಮ

ಕಾಬೂಲ್, ಗುರುವಾರ, 9 ಮಾರ್ಚ್ 2017 (10:47 IST)

Widgets Magazine

ಅಫಘಾನಿಸ್ತಾನದಲ್ಲಿ ಐಸಿಸ್ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಮಿಲಿಟರಿ ಆಸ್ಪತ್ರೆಯೊಳಗೆ ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ 30 ಜನರು ಸಾವನ್ನಪ್ಪಿ, 70 ಜನರು ಗಾಯಗೊಂಡಿದ್ದಾರೆ. 
ಗಾಯಗೊಂಡಿರುವ ಸೈನಿಕರಿಗೆ ಚಿಕಿತ್ಸೆ ನೀಡಲಾಗುವ ಕಾಬೂಲಿನ ಸರ್ದಾರ್ ದೌದ್ ಖಾನ್ ಆಸ್ಪತ್ರೆಯಲ್ಲಿ ಈ ಹೇಯ ಕೃತ್ಯ ನಡೆದಿದ್ದು, ವೈದ್ಯರ ಉಡುಗೆಯಲ್ಲಿ ಆಸ್ಪತ್ರೆಯನ್ನು ಪ್ರವೇಶಿಸಿ ಮಾರಣಹೋಮವನ್ನು ನಡೆಸಲಾಗಿದೆ.
 
ನಿನ್ನೆ ಮುಂಜಾನೆ 9 ಗಂಟೆಗೆ ಪ್ರಾರಂಭವಾದ ದಾಳಿ  ಭದ್ರತಾ ಪಡೆ ಮೂವರು ದಾಳಿಕೋರರನ್ನು ಹೊಡೆದುರುಳಿಸುವ ಮೂಲಕ ಸಂಜೆ ನಾಲ್ಕು ಗಂಟೆಗೆ ಕೊನೆಗೊಂಡಿದೆ.
 
ಕನಿಷ್ಠ  ಐವರು ಆತ್ಮಹತ್ಯಾ ಬಾಂಬ್‌ಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಸೇನೆಯ ಮೂಲಗಳು ತಿಳಿಸಿವೆ. ಮೊದಲು ಆಸ್ಪತ್ರೆಯ ಹೊರಭಾಗದಲ್ಲಿ ಸರ್ಕಾರಿ ಸಂಸ್ಥೆಗಳು, ರಾಯಭಾರಿ ಕಚೇರಿಗಳಿರುವ ಜಾಗದಲ್ಲಿ ಸ್ಪೋಟ ಸಂಭವಿಸಿದೆ. ಬಳಿಕ ಆಸ್ಪತ್ರೆಯ ಗೇಟ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ಬಳಿಕ ಆಸ್ಪತ್ರೆಗೆ ನುಗ್ಗಿ ಗುಂಡಿನ ದಾಳಿ ನಡೆಸಲಾಗಿದೆ, ಜತೆಗೆ ಆಸ್ಪತ್ರೆ ಕಟ್ಟಡದ ಮೇಲ್ಭಾಗದಲ್ಲಿ  ಹೆಲಿಕಾಫ್ಟರ್ ಹಾರಾಡುವಾಗ ಮತ್ತೊಂದು ಬಾಂಬ್ ಸ್ಟೋಟ ನಡೆದಿದೆ.

ದಾಳಿಯ ಹಿಂದೆ ತಮ್ಮ ಕೈವಾಡವಿದೆ ಎಂದು ಐಸಿಸ್ ಒಪ್ಪಿಕೊಂಡಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ತಮಿಳುನಾಡು ಆಯ್ತು, ಇನ್ನು ಕೇರಳದಲ್ಲೂ ಪೆಪ್ಸಿ ಸಿಗಲ್ಲ?

ತಿರುವನಂತರಪುರಂ: ತಮಿಳುನಾಡಿನಲ್ಲಿ ಈಗಾಗಲೇ ಪೆಪ್ಸಿ, ಕೋಕೋ ಕೋಲಾದಂತಹ ತಂಪು ಪಾನೀಯಗಳನ್ನು ...

news

ಇಂದು ದ್ವಿತೀಯ ಪಿಯುಸಿ ಪರೀಕ್ಷೆ, ಚುನಾವಣಾ ಮಾದರಿಯಲ್ಲಿ ಬಿಗಿಭದ್ರತೆ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಚುನಾವಣಾ ಮಾದರಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ...

news

ಮಾಜಿ ಶಾಸಕನಿಗೆ ಸೇರಿದ ವಸತಿಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳ ಸಾವು

ಮಾಜಿ ಶಾಸಕ ಕಿರಣ್ ಕುಮಾರ್ ಅವರಿಗೆ ಸೇರಿರುವ ತುಮಕೂರಿನ ಚಿಕ್ಕನಾಯಕನಹಳ್ಳಿ ಹುಳಿಯಾರ್‌ನಲ್ಲಿರುವ ...

news

ಪಂಚರಾಜ್ಯಗಳ ಮತದಾನ ಸಂಪೂರ್ಣ

ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಬಹುಹಂತದ ಮತದಾನ ಬುಧವಾರ ಕೊನೆಗೊಂಡಿದೆ. ಮಾರ್ಚ್ 11 ಶನಿವಾರ ಫಲಿತಾಂಶ ...

Widgets Magazine Widgets Magazine Widgets Magazine