ಭಿಕ್ಷುಕರಿಗಾಗಿ ಪ್ರತಿದಿನ ಪಿಜ್ಜಾವನ್ನು ಉಚಿತವಾಗಿ ನೀಡಿದ ಮಹಿಳೆ

ವಾಷಿಂಗ್ಟನ್, ಬುಧವಾರ, 10 ಅಕ್ಟೋಬರ್ 2018 (14:58 IST)

ವಾಷಿಂಗ್ಟನ್ : ರೋಡ್ ನಲ್ಲಿ ಭಿಕ್ಷೆ ಬೇಡುವ ಭಿಕ್ಷುಕರಿಗೆ ಒಂದು ರೂಪಾಯಿ ಹಾಕಲು ಹಿಂದುಮುಂದು ನೋಡುವ ಜನರಿರುವ ಈ ಕಾಲದಲ್ಲಿ ಉತ್ತರ ಡಕೋಟಾದಲ್ಲಿ ಮಹಿಳೆಯೊಬ್ಬಳು ಭಿಕ್ಷುಕರಿಗಾಗಿ ಒಂದು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.

ಮಿಶೆಲ್ ಲುಸಿಯರ್ ಎಂಬ ಮಹಿಳೆ ಉತ್ತರ ಡಕೋಟಾದ ಫಾರ್ಗೋದಲ್ಲಿ ಪಿಜ್ಜಾ ರೆಸ್ಟೋರೆಂಟ್ ಇಟ್ಟುಕೊಂಡಿದ್ದಾರೆ. ಇವರ ಅಂಗಡಿಗೆ ಪಿಜ್ಜಾ ತಿನ್ನಲು ಬರುತ್ತಿದ್ದವರು ಅದನ್ನು ಅರ್ಧಂಬರ್ಧ ತಿಂದು ಉಳಿದನ್ನು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗುತ್ತಿದ್ದರು. ಆಗ ರೋಡ್ ನಲ್ಲಿದ್ದ ಭಿಕ್ಷುಕರು ಕಸದ ತೊಟ್ಟಿಯಿಂದ ಅದನ್ನು ಎತ್ತಿಕೊಂಡು ತಿನ್ನುತ್ತಿದ್ದರು.

ಇದನ್ನು ನೋಡಿ ಬೇಸರಗೊಂಡ ಮಿಶೆಲ್ ಲುಸಿಯರ್ ಅಂಗಡಿಯ ಹೊರಗೆ ಬೋರ್ಡ್ ಒಂದನ್ನು ಹಾಕಿ ಕಸದ ತೊಟ್ಟಿಯಲ್ಲಿ ಎತ್ತಿಕೊಂಡು ತಿನ್ನುವ ವ್ಯಕ್ತಿಗಳೇ, ನೀವೂ ನಮ್ಮಂತೆ ಮನುಷ್ಯರು, ಆದ್ದರಿಂದ ಕಸದ ಬುಟ್ಟಿಯಲ್ಲಿ ಹಾಕಿರುವ ಆಹಾರಕ್ಕಿಂತ ಉತ್ತಮ ಆಹಾರ ತಿನ್ನಲು ನೀವು ಯೋಗ್ಯರಾಗಿದ್ದೀರಿ. ನೀವು ಬೇರೊಬ್ಬರ ಪಿಜ್ಜಾ ತಿನ್ನಬೇಡಿ, ನಮ್ಮ ಅಂಗಡಿಯೊಳಗೆ ಬಂದು ಉಚಿತವಾಗಿ ಪಿಜ್ಜಾ ಮತ್ತು ನೀರನ್ನು ತೆಗೆದುಕೊಂಡು ಹೋಗಿ” ಎಂದು ಮನವಿ ಮಾಡಿಕೊಂಡಿದ್ದಾರೆ. ಹಾಗೇ ಅದನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಸಿಲೂರಿನಲ್ಲಿ ಅ. 11ರಂದು ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ

ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಿಂದ “38ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ ...

news

ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನ ಬಳಕೆಗೆ ಬಿಜೆಪಿ ವಿರೋಧ

ಗೋ ಕಳ್ಳರಿಗೆ ರಕ್ಷಣೆ ಕೊಡುವ ಕೆಲಸ ಸರಕಾರದವರು ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Widgets Magazine