ಆಧಾರ್ ನಿಂದ ಭಾರತಕ್ಕೆ 900 ಕೋಟಿ ಡಾಲರ್ ಉಳಿತಾಯ: ನಂದನ್ ನಿಲೇಕಣಿ

ಅಮೆರಿಕಾ, ಶುಕ್ರವಾರ, 13 ಅಕ್ಟೋಬರ್ 2017 (20:47 IST)

ಅಮೆರಿಕಾ: ಆಧಾರ್‌ ಕಾರ್ಡ್‌ ಯೋಜನೆಯಿಂದ ಭಾರತ ಸರ್ಕಾರಕ್ಕೆ 900 ಕೋಟಿ ಡಾಲರ್‌ ಉಳಿತಾಯವಾಗಿದೆ ಎಂದು ಆಧಾರ್‌ ರೂವಾರಿ ನಂದನ್‌ ನಿಲೇಕಣಿ ಹೇಳಿದ್ದಾರೆ.


ಅಭಿವೃದ್ಧಿಗಾಗಿ ಡಿಜಿಟಲ್‌ ಎಕಾನಮಿ ಕುರಿತು ವಿಶ್ವ ಬ್ಯಾಂಕ್‌ ಮಂಡಳಿ ಚರ್ಚೆಯಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಅಂದಿನ ಯುಪಿಎ ಸರ್ಕಾರ ಆರಂಭಿಸಿದ ಆಧಾರ್ ನೋಂದಣಿ ಯೋಜನೆ ನಿಜಕ್ಕೂ ದ್ವಿಪಕ್ಷೀಯ ವಿಷಯವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಂಬಲದಿಂದ ಆಧಾರ್ ದೇಶದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನೂರು ಕೋಟಿಗೂ ಅಧಿಕ ಜನರು ಇಂದು ಆಧಾರ್ ನೋಂದಣಿ ಮಾಡಿಸಿದ್ದಾರೆ ಎಂದರು.

ಅಭಿವೃದ್ದಿಶೀಲ ದೇಶಗಳಿಗೆ ಮಹತ್ತರ ಆರ್ಥಿಕ ಅಭಿವೃದ್ಧಿ ಸಾಧಿಸುವುದಕ್ಕೆ ಡಿಜಿಟಲ್‌ ಮೂಲ ಸೌಕರ್ಯ ರೂಪಿಸುವುದೇ ಹೆಚ್ಚು ಸೂಕ್ತ ಮತ್ತು ಸುಲಭ ಎಂದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುವಪಡೆಯೊಂದಿಗೆ ನಿಖಿಲ್, ಪ್ರಜ್ವಲ್ ಚುನಾವಣಾ ಪ್ರಚಾರಕ್ಕೆ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮತ್ತು ಎಚ್.ಡಿ.ರೇವಣ್ಣ ...

news

ಜೆಎನ್ ಯು ಕ್ಯಾಂಪಸ್ ನಲ್ಲಿ ಆತಂಕ ಸೃಷ್ಟಿಸಿದ ಹಾವು

ನವದೆಹಲಿ: ಜವಹರ್ ಲಾಲ್ ನೆಹರು ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ವಿಷಪೂರಿತ ಹಾವೊಂದು ಕಾಣಿಸಿಕೊಂಡು ಕೆಲಕಾಲ ...

news

ಸಿ.ಪಿ.ಯೋಗೇಶ್ವರ್ ಜೆಡಿಎಸ್ ಸೇರ್ಪಡೆ ಮಾಹಿತಿಯಿಲ್ಲ: ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ನನಗೆ ಯಾವುದೇ ...

news

ಪ್ರಜ್ವಲ್‌ ಏನು ಶಾಸಕನೇ, ಸಂಸದನೇ, ಸಚಿವನೇ?: ಜಿ.ಟಿ.ದೇವೇಗೌಡ

ಮೈಸೂರು: ಎಚ್‌.ಡಿ.ದೇವೇಗೌಡ ಮೊಮ್ಮಗ ಪ್ರಜ್ವಲ್ ಹೇಳಿಕೆಯಿಂದ ಅಲ್ಲೋಲ ಕಲ್ಲೋಲವಾಗಲು ಆತನೇನು ಶಾಸಕನೇ, ...

Widgets Magazine
Widgets Magazine