ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಮೇಲೆ ಶೂಟೌಟ್

Washington, ಭಾನುವಾರ, 5 ಮಾರ್ಚ್ 2017 (09:04 IST)

ವಾಷಿಂಗ್ಟನ್: ಹೈದರಾಬಾದ್ ಟೆಕಿ ಶ್ರೀನಿವಾಸ್ ಹತ್ಯೆ ಪ್ರಕರಣ ಮಾಸುವ ಮೊದಲೇ ಅಮೆರಿಕಾದಲ್ಲಿ ಇನ್ನೊಬ್ಬ ಭಾರತೀಯನ ಮೇಲೆ ಶೂಟೌಟ್ ನಡೆದಿದೆ. ಈ ಬಾರಿಯೂ ದುಷ್ಕರ್ಮಿ ‘ನಿನ್ನ ದೇಶಕ್ಕೆ ಮರಳು’ ಎನ್ನುತ್ತಾ ಗುಂಡಿನ ಮಳೆಗೆರೆದ ಎನ್ನಲಾಗಿದೆ.


 
ವಾಷಿಂಗ್ಟನ್ ನ್ ಕೆಂಟ್ ನಲ್ಲಿ 39 ವರ್ಷದ ಸಿಖ್ ವ್ಯಕ್ತಿಯ ಮೇಲೆ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ನಡೆದಾಡುಕೊಂಡು ಹೋಗುತ್ತಿದ್ದ ಭಾರತೀಯನ ಮೇಲೆರಗಿದ ದುಷ್ಕರ್ಮಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.
 
ಈ ಬಗ್ಗೆ ಕೆಂಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೊಂದು ಗಂಭೀರ ಪ್ರಕರಣ ಎಂದು ಪೊಲೀಸರು ಬಣ್ಣಿಸಿದ್ದಾರೆ. ದುಷ್ಕರ್ಮಿಯ ಚಹರೆ ಬಗ್ಗೆ ಗಾಯಗೊಂಡ ವ್ಯಕ್ತಿ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್-ಅಖಿಲೇಶ್ ರೋಡ್‌ ಶೋನಲ್ಲಿ ಕಲ್ಲು ತೂರಾಟ

ವಾರಣಾಸಿ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಆರನೇ ಹಂತದ ಪ್ರಚಾರ ಕಣ ರಂಗೇರಿದೆ. ಇಂದು ನಡೆದ ರಾಹುಲ್ ...

news

ಜಾಹೀರಾತು ಫಲಕ ಕಾಣುವುದಿಲ್ಲವೆಂದು ರಸ್ತೆ ಬದಿ ಮರಗಳಿಗೆ ಅಸಿಡ್ ಹಾಕಿದ ದುಷ್ಕರ್ಮಿಗಳು

ಮರಗಳು ಅಡ್ಡವಿರುವುದರಿಂದ ಸರಿಯಾಗಿ ಜಾಹೀರಾತು ಫಲಕ ಕಾಣುವುದಿಲ್ಲವೆಂದು ದುಷ್ಟರ್ಮಿಗಳು 30ಕ್ಕೂ ಅಧಿಕ ...

news

''ಚಮಚಾ"ಗಳಿಂದ ಪ್ರಧಾನಿ ಮೋದಿಗೆ ಹೂ ಮಳೆ: ಮಾಯಾವತಿ

ವಾರಣಾಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹೂ ಮಳೆಗೆರೆಯಲು ಚಮಚಾಗಳನ್ನು ನೇಮಿಸಿಕೊಂಡಿದ್ದಾರೆ ಎಂದು ಮಾಜಿ ...

news

ಸಿಲಿಂಡರ್ ದರ ಏರಿಕೆ: ಪ್ರಧಾನಿ ಮೋದಿಯಿಂದ ದೇಶದ ಜನತೆಗೆ ಮೋಸ ಎಂದ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅಡುಗೆ ಸಿಲಿಂಡರ್ ದರ ಏರಿಕೆಗೊಳಿಸಿ ದೇಶದ ಜನತೆಗೆ ಮೋಸ ...

Widgets Magazine
Widgets Magazine