ಕೋಮಾದಲ್ಲಿ ಜನ್ಮ ನೀಡಿದ ತಾಯಿಯನ್ನ 4 ತಿಂಗಳ ಬಳಿಕ ಜಾಗೃತಗೊಳಿಸಿದ ಪುಟ್ಟ ಕಂದಮ್ಮ..!

ಬ್ಯೂನಸ್ ಐರಿಸ್, ಶುಕ್ರವಾರ, 21 ಏಪ್ರಿಲ್ 2017 (22:00 IST)

Widgets Magazine

ಕೋಮಾದಲ್ಲಿದ್ದಾಗ ಮಗುವಿಗೆ ಜನ್ಮ ನಿಡಿ 4 ತಿಂಗಳ ಬಳಿಕ ಕೋಮಾದಿಂದ ಹೊರಬಂದಾಗ ಮಗುವಿನ ಮುಖ ನೋಡಿರುವ ಘಟನೆ ಅಂರ್ಜೆಂಟೀನಾದ ಪೋಸಡಾಸ್ ನಗರಲ್ಲಿ ನಡೆದಿದೆ. ಅಪಘಾತದಲ್ಲಿ ಪೆಟ್ಟು ತಿಂದಿದ್ದ ಮಹಿಳಾ ಪೊಲೀಸ್ ಅಮೆಲಿಯಾ ಬನ್ನನ್ ಕೋಮಾಕ್ಕೆ ಹೋಗಿದ್ದರು. ಕಳೆದ ವರ್ಷ ಕ್ರಿಸ್ ಮಸ್ ಹಿಂದಿನ ದಿನ ಮಗುವಿಗೆ ಜನ್ಮ ನೀಡಿದ್ದರು. ಇದೀಗ, 4 ತಿಂಗಳ ಬಳಿಕ ಕೋಮಾದಿಂದ ಹೊರಬಂದು ಮಗುವಿನ ಮುಖ ನೋಡಿದ್ದಾರೆ.
 


ಹಾಸಿಗೆ ಮೇಲೆ ಶವದಂತೆ ಮಲಗಿರುತ್ತಿದ್ದ ಬನ್ನನ್ ವರ್ಷಾರಂಭದಲ್ಲಿ ಕೊಂಚ ಚಲನೆ ತೋರಿಸಿದ್ದರು. ಕ್ರಮೇಣ ಚೇತರಿಸಿಕೊಂಡು ಕೋಮಾದಿಂದ ಹೊರ ಬಂದಿದ್ದಾರೆ. ಬನ್ನನ್ ಕೋಮಾದಲ್ಲಿದ್ದ ಹಿನ್ನೆಲೆಯಲ್ಲಿ ಸಹೋದರಿ ಮಗುವಿನ ಲಾಲನೆ ಪೋಷಣೆ ಮಾಡಿದ್ದಾರೆ. ನಿತ್ಯ ಬನ್ನನ್ ಬಳಿಗೆ ಮಗುವನ ಕರೆ ತಂದು ಮೊಲೆಹಾಲುಣಿಸಿ ಕರೆದೊಯ್ಯುತ್ತಿದ್ದರು.
 
ಮಗು ಸಮೀಪಕ್ಕೆ ಬಂದಾಗ ಅದರ ಚಲನವಲನ, ಅಳು, ಅದರ ಸ್ಪರ್ಶ ಕೋಮಾದಲ್ಲಿದ್ದ ತಾಯಿಯನ್ನ ಜಾಗೃತಗೊಳಿಸಿದೆ. ಮೊದ ಮೊದಲು ಶಬ್ದ ಮಾಡುತ್ತಿದ್ದ ಬನ್ನನ್ ಬಳಿಕ ನಿಧಾನವಾಗಿ ನಡೆಯಲು ಶುರುವಿಟ್ಟು ಈಗ ಕೋಮಾದಿಂದ ಹೊರ ಬಂದಿದ್ದಾಳೆ. ಕೋಮಾದಿಂದ ಹೊರ ಬಂದಾಗ ಅದು ತನ್ನ ಮಗುವೆಂದು ಒಪ್ಪುವುದಕ್ಕೂ ಬನ್ನನ್ ಸಿದ್ಧವಿರಲಿಲ್ಲ. ಅಣ್ಣನ ಮಗುವಿರಬಹುದೆಂದುಕೊಂಡಿದ್ದಳಂತೆ. ಬಳಿಕ ಸಹೋದರ, ಸಹೋದರಿಯರು ನಡೆದ ಸಂಗತಿಯನ್ನ ಹೇಳಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ಯಾನ್ ಕಾರ್ಡ್`ಗೆ ಆಧಾರ್ ಕಡ್ಡಾಯವೇಕೆ..?: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ತರಾಟೆ

ಪ್ಯಾನ್ ಕಾರ್ಡ್ ಪಡೆಯಲು, ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಫೈಲಿಂಗ್ ವೇಳೆ ಆಧಾರ್ ಕಡ್ಡಾಯಗೊಳಿಸಿರುವ ಕೇಂದ್ರ ...

news

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ: 13 ಮಂದಿ ದುರ್ಮರಣ

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ...

news

ಜಯಲಲಿತಾ ಸಾವಿಗೆ ಹೊಸ ಟ್ವಿಸ್ಟ್ ನೀಡಿದ ಶಶಿಕಲಾ ಸಂಬಂಧಿ!

ಚೆನ್ನೈ: ತಮಿಳುನಾಡಿನಲ್ಲಿ ಈಗ ಶಶಿಕಲಾ ನಟರಾಜನ್ ವಿರೋಧಿ ಅಲೆ ಹೆಚ್ಚಾಗುತ್ತಿರುವಂತೆ ಶಶಿಕಲಾ ...

news

ಸೋನು ನಿಗಂ ಬೆಂಬಲಿಸಿ ಮಾತನಾಡಿದ್ದಕ್ಕೆ ಕೊಲೆ!

ಮುಂಬೈ: ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಇಟ್ಟು ಪ್ರಾರ್ಥನೆ ಮಾಡಿ ತೊಂದರೆ ಕೊಡಬಾರದು ಎಂದು ಟ್ವೀಟ್ ಮಾಡಿದ್ದ ...

Widgets Magazine Widgets Magazine