ಎಚ್ಚರಿಕೆ! ಸಾಕ್ಸ್ ವಾಸನೆ ತೆಗೆದುಕೊಂಡರೆ ಈ ಖಾಯಿಲೆ ಬರುವುದು ಖಂಡಿತ

ಚೀನಾ, ಗುರುವಾರ, 20 ಡಿಸೆಂಬರ್ 2018 (08:09 IST)

ಚೀನಾ : ಸಾಕ್ಸ್ ವಾಸನೆ ತೆಗೆದುಕೊಂಡ ಕಾರಣ ವ್ಯಕ್ತಿಯೊಬ್ಬ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚೀನಾದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.


ಷೇಕ್ಸ್ ಪೆಂಗ್ (37 ವರ್ಷ) ಸಾಕ್ಸ್ ವಾಸನೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿ. ಈತನಿಗೆ ಸಾಕ್ಸ್ ವಾಸನೆ ತೆಗೆದುಕೊಳ್ಳುವ ಅಭ್ಯಾಸವಿದೆ. ಇತ್ತೀಚೆಗೆ ಪೆಂಗ್ ಗೆ ಎದೆ ನೋವು ಹಾಗೂ ಕೆಮ್ಮು ಕಾಣಿಸಿಕೊಂಡ ಹಿನ್ನಲೆಯಲ್ಲಿ ವೈದ್ಯರನ್ನು ಭೇಟಿಯಾದಾಗ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ವಿಚಾರ ತಿಳಿದುಬಂದಿದೆ.


ಆರಂಭದಲ್ಲಿ ನ್ಯುಮೋನಿಯಾ ಎಂದುಕೊಂಡ ವೈದ್ಯರಿಗೆ  ಚಿಕಿತ್ಸೆ ನಂತರವೂ ಪೆಂಗ್ ಗೆ ಸೋಂಕು ಕಡಿಮೆಯಾಗದ ಹಿನ್ನಲೆಯಲ್ಲಿ ಆತನ ಹವ್ಯಾಸದ ಬಗ್ಗೆ ಕೇಳಿದ್ದಾರೆ. ಧರಿಸುವ ಸಾಕ್ಸ್ ವಾಸನೆ ತೆಗೆದುಕೊಳ್ಳುವ ಹವ್ಯಾಸದ ಬಗ್ಗೆ ಆತ ಹೇಳಿದಾಗ ಆತನಿಗೆ ಪಲ್ಮನರಿ ಹೆಸರಿನ ಫಂಗಲ್ ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಮನೆ ಹೊರಗೆ ಹಾಗೂ ಒಳಗೆ ಫಂಗಲ್ ಇರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಸೋಂಕು ಬೇಗ ಹರಡುತ್ತದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜಸ್ತಾನದ ನೂತನ ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿಸುದ್ದಿ

ಜೈಪುರ : ರಾಜಸ್ಥಾನದ ನೂತನ ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಚಾರದ ವೇಳೆ ನೀಡಿದ ಭರವಸೆಯನ್ನು ...

news

ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದ ಮಹಿಳೆಗೆ ಕಾಮುಕನೊಬ್ಬ ಮಾಡಿದ್ದೇನು ಗೊತ್ತಾ?

ಬೆಂಗಳೂರು : ಪಬ್ ನಲ್ಲಿ ಪಾರ್ಟಿ ಮುಗಿಸಿ ಸ್ನೇಹಿತರ ಜೊತೆ ಹೋಗುತ್ತಿದ್ದ ಮಹಿಳೆಯೊಬ್ಬಳಿಗೆ ಕಾಮುಕನೊಬ್ಬ ...

news

ಫೇಸ್ಬುಕ್ ಸ್ನೇಹಿತನ ಬಣ್ಣದ ಮಾತಿಗೆ ಮರುಳಾಗಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ

ಮೀರತ್ : ಅಪ್ರಾಪ್ತೆಯೊಬ್ಬಳು ಫೇಸ್ಬುಕ್ ಸ್ನೇಹಿತನ ಮದುವೆ ಆಮಿಷಕ್ಕೆ ಮರುಳಾಗಿ ಸಾಮೂಹಿಕ ...

news

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ...