Widgets Magazine
Widgets Magazine

ಯಾರೇರುತ್ತಾರೆ ಸೈಕಲ್? ಅಪ್ಪಾನಾ, ಮಗನಾ?

ಲಖನೌ, ಸೋಮವಾರ, 9 ಜನವರಿ 2017 (09:23 IST)

Widgets Magazine

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದರೂ ಅಪ್ಪ- ಮಗನ ನಡುವೆ ನಡೆಯುತ್ತಿರುವ ಬಿಕ್ಕಟ್ಟು ಮಾತ್ರ ಕೊನೆಗೊಂಡಿಲ್ಲ. ಸಮಾಜವಾದಿ ಪಕ್ಷದಲ್ಲಿನ ರಾಜಕೀಯ ಶೀತಲ ಸಮರ ಮುಂದುವರೆದಿದ್ದು ಎರಡು ಬಣಗಳಾಗಿ ಒಡೆದು ಹೋಗಿವೆ.
ಮತ್ತೀಗ ಪಕ್ಷದ ಚಿಹ್ನೆಗಾಗಿ ಅಪ್ಪ- ಮಗನಲ್ಲಿ ಹಗ್ಗ- ಜಗ್ಗಾಟ ಆರಂಭವಾಗಿದ್ದು ಸೈಕಲ್ ತನ್ನದು ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದರೆ, ಮುಖ್ಯಮಂತ್ರಿ ಅಖಿಲೇಶ್ ಸೈಕಲ್ ತಮಗೆ ಸೇರಿದ್ದು ಎಂದು ವಾದಿಸುತ್ತಿದ್ದಾರೆ. 
 
ಸೈಕಲ್ ತಮಗೆ ಸೇರಬೇಕು ಎಂಬುದಕ್ಕೆ ಅಖಿಲೇಶ್ ಚುನಾವಣಾ ಆಯೋಗಕ್ಕೆ ದಾಖಲೆ ಪತ್ರ ಸಲ್ಲಿಸಿದ್ದಾರೆ. ಆದರೆ ಅವೆಲ್ಲ ನಕಲಿ ದಾಖಲೆಗಳು ಎನ್ನುತ್ತಿರುವ ಮುಲಾಯಂ ಸೈಕಲ್ ತಮಗೆ ಸೇರಬೇಕು ಎನ್ನುತ್ತಿದ್ದಾರೆ. 
 
ಸೈಕಲ್ ಹಕ್ಕು ಯಾರಿಗೆ ಸೇರಿದ್ದು ಎಂಬುದನ್ನು ನಿರ್ಣಯಿಸಲು, ತಮ್ಮ ತಮ್ಮ ವಾದಕ್ಕೆ ಪೂರಕವಾದ ಪ್ರಮಾಣ ಪತ್ರ ಸಲ್ಲಿಸುವಂತೆ ಚುನಾವಣಾ ಆಯೋಗ ನೀಡಿದ್ದ ಗಡುವು ಇಂದಿಗೆ ಕೊನೆಗೊಳ್ಳಲಿದ್ದು, ಯಾರು ಸೈಕಲ್ ಏರಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
 
ಎರಡು ಬಣಗಳ ನಡುವಿನ ತಮ್ಮ ವ್ಯತ್ಯಾಸಗಳನ್ನು ಪರಿಹರಿಸಲು ವಿಫಲಗೊಂಡರೆ ಚುನಾವಣಾ ಆಯೋಗ ಎರಡು ಬಣಕ್ಕೂ ಬೇರೆ ಬೇರೆ ಚಿಹ್ನೆ ನೀಡುವ ಸಾಧ್ಯತೆಗಳಿವೆ. 
 
ಇನ್ನೊಂದೆಡೆ ಈ ಎಲ್ಲ ಗಲಾಟೆಗೆ ಕಾರಣಕರ್ತ ಎಂಬ ಪಟ್ಟ ಹೊತ್ತಿರುವ ಅಮರ್ ಸಿಂಗ್ ಮೌನ ಮುರಿದಿದ್ದಾರೆ. ಪಕ್ಷಕ್ಕೆ ಒಳ್ಳೆಯದಾದರೆ ನಾನು ಎಂತಹ ತ್ಯಾಗಕ್ಕೂ ಸಿದ್ಧ. ಯಾದವ ಕುಟುಂಬದ ಏಕತೆಗೆ ಪಕ್ಷಕ್ಕೆ ರಾಜೀನಾಮೆ ನೀಡಲು ತಯಾರಾಗಿದ್ದೇನೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗಡಿಯಲ್ಲಿ ಉಗ್ರರ ಅಟ್ಟಹಾಸ: ಮೂವರು ಕಾರ್ಮಿಕರ ಸಾವು

ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು ಜಿಆರ್‌ಇಎಫ್‌ ( ಜನರಲ್ ರಿಸರ್ವ್ ಇಂಜಿನಿಯರ್ ...

news

ಬಿಹಾರದಲ್ಲಿ ಜೆಡಿಯು ನಾಯಕನ ಬರ್ಬರ ಹತ್ಯೆ

ಬಿಹಾರದ ಆಡಳಿತಾರೂಢ ಜೆಡಿ(ಯು) ಪಕ್ಷದ ನಾಯಕ ಮುಖೇಶ್ ಸಿಂಗ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಭಾನುವಾರ ...

news

8/11 ಬಳಿಕ ಪತ್ತೆಯಾದದ್ದು 4,807 ಕೋಟಿ ರೂ. ಕಪ್ಪುಹಣ

500 ಮತ್ತು 1,000 ಮುಖಬೆಲೆಯ ಹಳೆಯ ನೋಟುಗಳನ್ನು ರದ್ದುಗೊಳಿಸುವಾಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 3 ...

news

ಈಗಲೂ ನಾನೇ ರಾಷ್ಟ್ರೀಯ ಅಧ್ಯಕ್ಷ

ಉತ್ತರ ಪ್ರದೇಶದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ ರಾಜ್ಯದ ಪ್ರಮುಖ ಪಕ್ಷ ಸಮಾಜವಾದಿಯಲ್ಲಿನ ...

Widgets Magazine Widgets Magazine Widgets Magazine