ಚೀನಾ ಸೇನೆಯಿಂದ ಭಾರತಕ್ಕೆ ಮತ್ತೊಂದು ಬೆದರಿಕೆ..! ಯುದ್ಧಕ್ಕೆ ನಿಂತೇಬಿಡುತ್ತಾ ಚೀನಾ..?

ನವದೆಹಲಿ, ಸೋಮವಾರ, 17 ಜುಲೈ 2017 (14:08 IST)

Widgets Magazine

ದೊಕ್ಲಾಮ್ ವಿಚಾರವಾಗಿ ಭಾರತವನ್ನ ಮಣಿಸಲು ತಂತ್ರ ಮಾಡುತ್ತಿರುವ ನೆರೆಯ ಚೀನಾ ರಾಷ್ಟ್ರ ಪ್ರತ್ಯಕ್ಷ ಶೂಟಿಂಗ್ ಸಮರಾಭ್ಯಾಸ ನಡೆಸುವ ಮೂಲಕ ಭಾರತಕ್ಕೆ ಪರೋಕ್ಷ ಬೆದರಿಕೆ ಹಾಕಿದೆ.


ಚೀನಾ ಸೇನೆ ದಿ ಪೀಪಲ್ಸ್ ಲಿಬರೇಶನ್ ಆರ್ಮಿಯೂ ನೇರುತ್ಯ ಚೀನಾದ ಟಿಬೆಟ್ ಪ್ರದೇಶದಲ್ಲಿ ಪ್ರತ್ಯಕ್ಷ ಶೂಟಿಂಗ್ ತಾಲೀಮು ನಡೆಸಿದೆ. ಈ ಬಗ್ಗೆ ಚೀನಾ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿ ಸಿಸಿಟಿವಿ ಈ ಬಗ್ಗೆ ವರದಿ ಮಾಡಿದೆ. ಆದರೆ, ಶೂಟಿಂಗ್ ತಾಲೀಮು ನಡೆದ ಸಮಯದ ಬಗ್ಗೆ ಸ್ಪಷ್ಟ ಉಲ್ಲೇಖ ಮಾಡಿಲ್ಲ.

ಚೀನಾದ ಮೌಂಟೇನ್ ಬ್ರಿಗೇಡಿಯರ್ ನೇತೃತ್ವದಲ್ಲಿ ಈ ಸಮರಾಭ್ಯಾಸ ನಡೆದಿದ್ದು, ಬಹ್ಮಪುತ್ರ ನದಿ ವ್ಯಾಪ್ತಿಯಲ್ಲಿ ಈ ತಾಲೀಮು ನಡೆದಿದೆ. ಸೇನೆಯ ಕ್ಷಿಪ್ರ ವರ್ಗಾವಣೆ, ವಿವಿಧ ಮಿಲಿಟರಿ ವರ್ಗಗಳ ಜಂಟಿ ಕಾರ್ಯಾಚರಣೆಯ ಅಭ್ಯಾಸ ನಡೆಸಲಾಗಿದೆ. ಆಂಟಿ ಗ್ರೆನೇಡ್ ಮತ್ತು ಆಂಟಿ ಮಿಸೈಲ್ ಶಸ್ತ್ರಾಸ್ತ್ರಗಳನ್ನ ಚೀನಾ ಸೇನೆ ನಡೆಸಿರುವುದು, ಎದುರಾಳಿ ಏರ್ ಕ್ರಾಫ್ಟ್`ಗಳನ್ನ ಗುರಿತಿಸುವುದು, ಅವುಗಳನ್ನ ಹೊಡೆದುರುಳಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೂಡಲೇ ಡಿಐಜಿ ರೂಪಾ ವರ್ಗಾವಣೆ ರದ್ದುಗೊಳಿಸಿ: ಈಶ್ವರಪ್ಪ ಕಿಡಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರಗಳನ್ನು ಬಯಲಿಗೆಳೆದಿದ್ದ ಡಿಐಜಿ ರೂಪಾ ಅವರ ವರ್ಗಾವಣೆಯನ್ನು ...

news

ಜೈಲಿನ ಅವ್ಯವಹಾರ ಬಯಲಿಗೆಳೆದ ಡಿಐಜಿ ರೂಪಾ ವರ್ಗಾವಣೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ಬಯಲಿಗೆಳೆದಿದ್ದ ಡಿಐಜಿ ರೂಪಾರನ್ನು ಸರಕಾರ ...

news

ಸಂತಾಪ ಸೂಚನೆ ಬಳಿಕ ಸಂಸತ್ ಕಲಾಪ ನಾಳೆಗೆ ಮುಂದೂಡಿಕೆ

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಬೆಳಗ್ಗೆ 11 ಗಂಟೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ...

news

ಯಡಿಯೂರಪ್ಪ ಪಿಎ ಸಂತೋಷ್ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಬಿಜೆಪಿ ಮುಖಂಡ ಈಶ್ವರಪ್ಪ ಪಿಎ ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಯಡಿಯೂರಪ್ಪ ...

Widgets Magazine