ಭಾರತವನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿರುವ ಚೀನಾ

Beijing, ಸೋಮವಾರ, 17 ಜುಲೈ 2017 (10:17 IST)

ಬೀಜಿಂಗ್: ಗಡಿಯಲ್ಲಿ ತಗಾದೆ ತೆಗೆಯುತ್ತಿದ್ದ ಚೀನಾ ಭಾರತದ ನೀತಿ ನೋಡಿ ಬೆಚ್ಚಿದೆ. ಗಡಿ ಭಾಗದಲ್ಲಿ ಮಿಲಿಟರಿ ಶಕ್ತಿ ಪ್ರದರ್ಶನವೊಂದೇ ಮಾಡುತ್ತಿದ್ದರೆ ತಾನು ಜಾಗತಿಕವಾಗಿ ಬೆಂಬಲ ಕಳೆದುಕೊಳ್ಳಬೇಕಾದೀತು ಎಂದು ಬುದ್ದಿ ಕಲಿತಿದೆ.


 
ಗಡಿಯಲ್ಲಿ ಏನೇ ಮಾಡಿದರೂ, ತಲೆ ಕೆಡಿಸಿಕೊಳ್ಳದೆ ವ್ಯಾಪಾರ, ವಾಣಿಜ್ಯ ಕ್ಷೇತ್ರದಲ್ಲಿ ಭಾರತದ ಅಭಿವೃದ್ಧಿ ನೋಡಿ ಹೊಟ್ಟೆ ಉರಿಸಿಕೊಳ್ಳುತ್ತಿರುವ ಚೀನಾ ಮಾಧ್ಯಮಗಳು, ಗಡಿ ಗಲಾಟೆ ಬಿಟ್ಟು, ಶಾಂತವಾಗಿದ್ದುಕೊಂಡು ವಾಣಿಜ್ಯ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಸಲಹೆ ಮಾಡಿವೆ.
 
‘ಭಾರತದ ಅಭಿವೃದ್ಧಿ ನೋಡಿ ಚೀನಾ ‘ಶಾಂತವಾಗಿರಬೇಕು’. ನಮ್ಮ ವಾಣಿಜ್ಯ, ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿ ಮಾಡಬೇಕು. ಭಾರತದ ದೌರ್ಬಲ್ಯವೆಂದರೆ ದುಬಾರಿ ವೆಚ್ಚದ ಉತ್ಪಾದನೆ. ಇದನ್ನೇ ಚೀನಾ ಬಂಡವಾಳ ಮಾಡಿಕೊಂಡು ಜಾಗತಿಕ ಹೂಡಿಕೆದಾರರನ್ನು ತನ್ನತ್ತ ಸೆಳೆಯಬೇಕು. ಹಾಗೂ ನಾವು ಹೊಸದೊಂದು ಯುಗ ಸೃಷ್ಟಿಸಬೇಕು’ ಎಂದು ಅಲ್ಲಿನ ಸರ್ಕಾರಕ್ಕೆ ಸಲಹೆ ಮಾಡಿವೆ.
 
ಎರಡು ದಶಕಗಳ ಹಿಂದೆ ಚೀನಾದಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಈಗ ಭಾರತದಲ್ಲಿ ಆಗುತ್ತಿದೆ. ಇದರಿಂದಾಗಿ ಭಾರತ ಜಾಗತಿಕ ಹೂಡಿಕೆದಾರರ ಸ್ವರ್ಗವಾಗಿ ಮಾರ್ಪಾಡಾಗುತ್ತಿದೆ ಎಂದು ಮಾಧ್ಯಮಗಳು ಹೊಟ್ಟೆ ಉರಿದುಕೊಂಡಿವೆ.
 
ಇದನ್ನೂ ಓದಿ.. ನೇತಾಜಿ ಸಾವಿಗೆ ಹೊಸ ಟ್ವಿಸ್ಟ್?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೇತಾಜಿ ಸಾವಿಗೆ ಹೊಸ ಟ್ವಿಸ್ಟ್?

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಹೇಗೆ ಮತ್ತು ಯಾವಾಗ ಮೃತಪಟ್ಟರು ಎನ್ನುವುದು ಇನ್ನೂ ನಿಗೂಢವಾಗಿಯೇ ...

news

ಕೇವಲ 5 ರೂ. ಗಾಗಿ ರಿಕ್ಷಾ ಡ್ರೈವರ್ ನ ಕುತ್ತಿಗೆ ಸೀಳಿದರು!

ನವದೆಹಲಿ: ನಾವು ನೀವು ರಿಕ್ಷಾದಲ್ಲಿ ಓಡಾಡುವಾಗ ರಿಕ್ಷಾ ಡ್ರೈವರ್ ಜತೆ ಬಾಡಿಗೆಗಾಗಿ ಕಿತ್ತಾಡಿದ ಘಟನೆಗಳು ...

news

ನೂತನ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ

ಪ್ರಣಬ್ ಮುಖರ್ಜಿ ಅವರಿಂದ ತೆರವಾಗಲಿರುವ ರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಎನ್`ಡಿಎ ...

news

ಬಂಗಾಳದ ಹುಲಿ ಗಂಗೂಲಿ ಕಂಚಿನ ಪ್ರತಿಮೆ ಅನಾವರಣ

ಕೊಲ್ಕತ್ತಾ:ಬಂಗಾಳದ ಹುಲಿ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲಿ ...

Widgets Magazine