ಪ್ರಧಾನಿ ಮೋದಿ ಬಗ್ಗೆ ಚೀನಾ ಅಧ್ಯಕ್ಷರಿಗೆ ಭಯವಿದೆಯಂತೆ!

NewDelhi, ಮಂಗಳವಾರ, 8 ಆಗಸ್ಟ್ 2017 (09:21 IST)

ನವದೆಹಲಿ: ಪ್ರಧಾನಿ ಮೋದಿ ಭಾರತದ ಹಿತಕ್ಕಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಲ್ಲ ಚಾಣಕ್ಷ್ಯ ಎಂಬ ಭಯ ಚೀನಾ ಅಧ್ಯಕ್ಷ ಕ್ಸಿನ್ ಜಿನ್ ಪಿಂಗ್ ಗೆ  ಇದೆಯಂತೆ. ಹಾಗಂತ ಅಮೆರಿಕಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


 
ಭಾರತ ಇತ್ತೀಚೆಗೆ ಜಪಾನ್ ಮತ್ತು ಅಮೆರಿಕಾ ಜತೆ ಹೆಚ್ಚು ಸ್ನೇಹ ಬೆಳೆಸುವ ಮೂಲಕ ಚೀನಾಕ್ಕೆ ಪ್ರತಿಸ್ಪರ್ಧಿಯಾಗುತ್ತಿರುವುದು ಚೀನಾ ಅಧ್ಯಕ್ಷರ ನಿದ್ದೆಗೆಡಿಸಿದೆ ಎಂದು ಅಮೆರಿಕಾ ರಾಜನೀತಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 
ಪ್ರಧಾನಿ ಮೋದಿ ಭಾರತದ ಸುರಕ್ಷತೆಗಾಗಿ ಯಾವ ಹಂತಕ್ಕೆ ಬೇಕಾದರೂ ನಿಲ್ಲಬಲ್ಲ ಸಮರ್ಥ ಎಂಬುದನ್ನು ಜಿನ್ ಪಿಂಗ್ ಅರ್ಥಮಾಡಿಕೊಂಡಿದ್ದಾರಂತೆ. ಇದಕ್ಕೆ ಇತ್ತೀಚೆಗೆ ಚೀನಾದ ಬೆಳವಣಿಗೆಗೆ ವಿರೋಧಿಯಾಗಿ ಭಾರತ ನಡೆಸುತ್ತಿರುವ ವಿದೇಶಾಂಗ ನೀತಿಗಳು, ಸಂಬಂಧಗಳು ಮತ್ತು ಕ್ರಮಗಳೇ ಸಾಕ್ಷಿ ಎಂದು ಅವರು ಮನಗಂಡಿದ್ದಾರಂತೆ.
 
ಅಮೆರಿಕಾ, ಜಪಾನ್, ಆಸ್ಟ್ರೇಲಿಯಾದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜತೆ ಕೈ ಜೋಡಿಸಿ ಭಾರತ ಮುಂದಿನ ದಿನಗಳಲ್ಲಿ ಚೀನಾಕ್ಕೆ ಮತ್ತಷ್ಟು ಸವಾಲು ತರಲಿದೆ ಎಂಬ ಆತಂಕ ಚೀನಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 
ಇದನ್ನೂ ಓದಿ.. ನಿಮಗಿದು ಗೊತ್ತಾ? ಚಕ್ಕೆ ಮಧುಮೇಹವನ್ನು ನಿಯಂತ್ರಿಸುತ್ತದೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಕ್ಸಿನ್ ಜಿನ್ ಪಿಂಗ್ ಅಂತಾರಾಷ್ಟ್ರೀಯ ಸುದ್ದಿಗಳು ಭಾರತ-ಚೀನಾ India-china Xin Zinping Pm Modi International News

ಸುದ್ದಿಗಳು

news

ಶಾರುಖ್ ಸಿನಿಮಾ ನೋಡ್ತಿದ್ದೇನೆ ಕಾಪಾಡಿ ಎಂದು ಸಚಿವೆ ಸುಷ್ಮಾಗೆ ಟ್ವೀಟ್ ಮಾಡಿದ ಭೂಪ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಸಾರ್ವಜನಿಕರು ಮಾಡುವ ಮನವಿಗೆ ತಕ್ಷಣ ...

news

ಮಾಜಿ ಸಚಿವ ಆನಂದ್ ಆಸ್ನೋಟಿಕರ್‌ಗೆ ಜೆಡಿಎಸ್ ಗಾಳ

ಉಡುಪಿ: ಮಾಜಿ ಸಚಿವ ಆನಂದ್ ಆಸ್ನೋಟಿಕರ್‌ಗೆ ಜೆಡಿಎಸ್ ಗಾಳ ಹಾಕಲು ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ...

news

ಆಂಬ್ಯುಲೆನ್ಸ್ ತಡೆದ ಬಿಜೆಪಿ ಮುಖಂಡ: ರೋಗಿ ಸಾವು

ಬಿಜೆಪಿ ಮುಖಂಡನೊಬ್ಬ ಆಂಬ್ಯುಲೆನ್ಸ್ ತಡೆದ ಪರಿಣಾಮ ತುರ್ತು ಚಿಕಿತ್ಸೆ ಅವಶ್ಯಕತೆ ಇದ್ದ ರೋಗಿ ...

news

ಇದು ವೈಯಕ್ತಿಕ ಯುದ್ಧವಲ್ಲ, ಗೆಲುವು ಖಚಿತ: ಅಹ್ಮದ್ ಪಟೇಲ್

ಅಹಮದಾಬಾದ್: ರಾಜ್ಯಸಭೆ ಚುನಾವಣೆ ವೈಯಕ್ತಿಕ ಯುದ್ಧವಲ್ಲ. ಚುನಾವಣೆಯಲ್ಲಿ ನನ್ನ ಗೆಲುವು ಖಚಿತವಾಗಿದೆ ಎಂದು ...

Widgets Magazine