ದಾವೂದ್ ಇಬ್ರಾಹಿಂ ಗ್ಯಾಂಗ್ ನಲ್ಲಿ ಮಹಿಳೆಯರಿಗೆ ಏನು ಕೆಲಸ ಗೊತ್ತೇ?!

ಕರಾಚಿ, ಶುಕ್ರವಾರ, 8 ಡಿಸೆಂಬರ್ 2017 (09:21 IST)

ಕರಾಚಿ: ಭೂಗತ ದೊರೆ ದಾವೂದ್ ಇಬ್ರಾಹಿಂ ಗುಂಪಿನಲ್ಲಿ ಮಹಿಳಾ ವಿಭಾಗವೂ ಇದೆಯಂತೆ. ಈ ಮಹಿಳೆಯರಿಗೆ ಭೂಗತ ದೊರೆ ಕೊಟ್ಟ ಕೆಲಸವೇನು ಗೊತ್ತಾ?
 

ಈ ಮಹಿಳಾ ವಿಂಗ್ ಗೆ ದಾವೂದ್ ಬಂಟ ಛೋಟಾ ಶಕೀಲ್ ನೇ ಬಾಸ್ ಅಂತೆ. ಆತನ ಕೈ ಕೆಳಗೆಯೇ ಮಹಿಳಾ ವಿಭಾಗವೂ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮಕ್ಕೆ ತಿಳಿಸಿದ್ದಾರೆ.
 
ಮಹಿಳೆಯರಿಂದ ಹಣ ವಸೂಲಿ ಮಾಡುವುದೇ ಈ ಮಹಿಳಾ ಗ್ಯಾಂಗ್ ಸದಸ್ಯರ ಕೆಲಸವಂತೆ. ಇತ್ತೀಚೆಗೆ ಇದೇ ರೀತಿ ಮುಂಬೈ ಮೂಲದ ಮಹಿಳೆಯೊಬ್ಬರು ಪಾಕ್ ದೂರವಾಣಿ ಸಂಖ್ಯೆಯೊಂದರಿಂದ ತನಗೆ 1 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ ಬಂದಿತ್ತು ಎಂದು ದೂರು ನೀಡಿದ್ದರು ಎಂದು ಆ ಅಧಿಕಾರಿ ಬಹಿರಂಗಪಡಿಸಿದ್ದಾರೆ.
 
ಸಾಮಾನ್ಯವಾಗಿ ಭೂಗತ ಪಾತಕಿಗಳು ತಮ್ಮ ಕಾರ್ಯಾಚರಣೆಯಲ್ಲಿ ಮಹಿಳೆಯರನ್ನು ದೂರವಿಡುತ್ತಾರೆ. ಆದರೆ ದಾವೂದ್ ಮಹಿಳೆಯರಿಂದ ಸುಲಿಗೆ ಮಾಡಲು ಮಹಿಳೆಯರನ್ನೇ ನೇಮಿಸಿಕೊಂಡಿದ್ದಾನೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಶಾಸಕ ಅನಿಲ್ ಲಾಡ್ ಗೆ ಎಸ್ಐಟಿ ಶಾಕ್

ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಂಭ್ರಮದಲ್ಲಿದ್ದಾಗಲೇ ಅಕ್ರಮ ...

news

ದಯಾನಂದ ಸ್ವಾಮೀಯ ರಾಸಲೀಲೆ ಪ್ರಕರಣ; ಕಾವ್ಯಾ ಆಚಾರ್ಯ ಸಹೋದರನ ಮೇಲೆ ಹಲ್ಲೆ

ತೀರ್ಥಹಳ್ಳಿ: ಭಾರೀ ಸುದ್ದಿ ಮಾಡಿದ ದಯಾನಂದ ಸ್ವಾಮೀಯ ರಾಸಲೀಲೆ ಪ್ರಕರಣದ ಹಿನ್ನೆಲೆ ಸಂತ್ರಸ್ತೆ ಕಾವ್ಯಾ ...

news

ಸಿದ್ದರಾಮನಹುಂಡಿಗೆ ಗಂಟು- ಮೂಟೆ ಕಟ್ಟುತ್ತಿರುವ ಸಿದ್ದರಾಮಯ್ಯ- ಆರ್.ಅಶೋಕ್

ಗುಜರಾತ್ ಚುನಾವಣೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಟು ಮೂಟೆ ಕಟ್ಟಿಕೊಂಡು ಸಿದ್ದರಾಮನಹುಂಡಿಗೆ ...

news

ಗುಜರಾತ್ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ- ಮನೆ ಮನೆ ಪ್ರಚಾರ

ಗುಜರಾತ್ ರಾಜ್ಯದ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮನೆ ಮನೆಯ ಪ್ರಚಾರ ...

Widgets Magazine
Widgets Magazine