911 ತುರ್ತು ನಂಬರ್ ಗೆ ಕರೆ ಮಾಡಿದ ಬಾಲಕ ಪೊಲೀಸರಿಗೆ ಹೇಳಿದ್ದೇನು ಗೊತ್ತಾ?

ಅಮೇರಿಕಾ, ಶುಕ್ರವಾರ, 9 ಆಗಸ್ಟ್ 2019 (09:18 IST)

ಅಮೇರಿಕಾ: ಸಾಮಾನ್ಯವಾಗಿ ಜನರು 911 ತುರ್ತು ನಂಬರ್ ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸುತ್ತಾರೆ. ಆದರೆ ಅಮೇರಿಕಾದ ಪ್ಲೋರಿಡಾದಲ್ಲಿ 5 ವರ್ಷದ ಬಾಲಕನೊಬ್ಬ ತುರ್ತು ಸಂಖ್ಯೆಗೆ ಕರೆ ಮಾಡಿ ಹೇಳಿದ್ದನ್ನು ಕೇಳಿ ಪೊಲೀಸರೇ ಅಚ್ಚರಿಗೊಂಡಿದ್ದಾರೆ.
ಹೌದು. ಬಾಲಕನೊಬ್ಬನಿಗೆ ತುಂಬಾ ಹಸಿವಾದ್ದರಿಂದ ಆತ 911 ತುರ್ತು ನಂಬರ್ ಗೆ ಕರೆ ಮಾಡಿ, ನನಗೆ ತುಂಬಾ ಹಸಿವಾಗಿದೆ ಪಿಜ್ಜಾ ತಂದುಕೊಡಿ ಎಂದು ಪೊಲೀಸರಿಗೆ ಆರ್ಡರ್ ಮಾಡಿದ್ದಾನೆ. ಕೆಲಸದ ಒತ್ತಡದ ನಡುವೆಯೂ ಕೋಪಗೊಳ್ಳದ ಪೊಲೀಸರು ಬಾಲಕನ ಮನಸ್ಥಿತಿಯನ್ನು ಅರಿತು ದೊಡ್ಡ ಪಿಜ್ಜಾ ಪೆಟ್ಟಿಗೆಯನ್ನು ತೆಗೆದುಕೊಂಡು ಆತನ ಮನೆಗೆ ಹೋಗಿದ್ದಾರೆ.ಮನೆಯವರಿಗೆ  ಪೊಲೀಸರನ್ನು ಕಂಡು ಅಚ್ಚರಿಯಾಗಿದ್ದು, ಬಳಿಕ ಪೊಲೀಸರು ನಡೆದ ವಿಚಾರವನ್ನು ತಿಳಿಸಿದ್ದಾರೆ. ಬಾಲಕನ ಚೇಷ್ಠಗೆ ಮನೆಯವರು ಪೊಲೀಸರ ಬಳಿ ಕ್ಷಮೆ ಕೇಳಿದ್ದಾರೆ. ಬಳಿಕ ಪಿಜ್ಜಾ ಪೆಟ್ಟಿಗೆಯನ್ನು ಬಾಲಕನಿಗೆ ನೀಡಿದ ಪೊಲೀಸರು ಆತನ ಜೊತೆ ಫೋಟೊ ತೆಗೆಸಿಕೊಂಡು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನದಿ ತೀರದಲ್ಲಿ ಸಿಕ್ಕ ಶವ: ಕೊಲೆನಾ? ಆತ್ಮಹತ್ಯೆಯೋ?

ನದಿ ತೀರದಲ್ಲಿ ಶವವೊಂದು ದೊರಕಿದ್ದು, ಸಾವಿನ ಸುತ್ತ ಅನುಮಾನ ವ್ಯಕ್ತವಾಗತೊಡಗಿದೆ.

news

ಮೂವರು ಮೇರು ಸಾಧಕರಿಗೆ ‘ಭಾರತ ರತ್ನ’ ಪ್ರದಾನ

ಮೂವರು ಹಿರಿಯ ಸಾಧಕರಿಗೆ ರಾಷ್ಟ್ರಪತಿಯವರು ಭಾರತ ರತ್ನ ಪ್ರದಾನ ಮಾಡಿದ್ದಾರೆ.

news

ಪ್ರಖ್ಯಾತ ದೇಗುಲದಲ್ಲಿ ‘ಸಂಗಮ’ ಆಗುತ್ತಾ?

ಉಕ್ಕಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ ನದಿಗಳಿಂದ ಆ ದೇವಾಲಯದಲ್ಲಿ ಸಂಗಮ ಆಗುತ್ತಾ ಅನ್ನೋ ಪ್ರಶ್ನೆ ...

news

‘ಮುಳುಗು ಸೇತುವೆ’ ಕಥೆ ಏನಾಗ್ತಿದೆ ಗೊತ್ತಾ?

ಘಾಟಿ ಪ್ರದೇಶದಲ್ಲಿ ವರುಣ ತನ್ನ ಅಬ್ಬರನ್ನು ಮುಂದುವರಿಸಿದ್ದಾನೆ. ಇದರಿಂದಾಗಿ ಮುಳುಗು ಸೇತುವೆ ಖ್ಯಾತಿಯ ...