ಕಳೆದ ಐದು ವರ್ಷಗಳಲ್ಲಿ ಎಷ್ಟು ಕೆಜಿ ತಲೆಕೂದಲು ಪಾಕಿಸ್ತಾನದಿಂದ ಚೀನಾಕ್ಕೆ ರಫ್ತಾಗಿದೆ ಗೊತ್ತಾ?

ಇಸ್ಲಾಮಾಬಾದ್, ಸೋಮವಾರ, 21 ಜನವರಿ 2019 (11:32 IST)

ಇಸ್ಲಾಮಾಬಾದ್ : ಚೀನಾದಲ್ಲಿ ಸೌಂದರ್ಯ ಉದ್ಯಮದ ಬೆಳವಣಿಗೆ ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ ಮಾನವ ಕೂದಲಿಗೆ ಬಾರೀ  ಬೇಡಿಕೆಯಿರುವುದರಿಂದ ಪಾಕಿಸ್ತಾನದಿಂದ ಕಳೆದ ಐದು ವರ್ಷಗಳಲ್ಲಿ ಒಂದು ಲಕ್ಷ ಕೆಜಿ ಮಾನವ ಕೂದಲನ್ನು ಚೀನಾಕ್ಕೆ ರಫ್ತು ಮಾಡಲಾಗಿದೆ ಎಂದು ತಿಳಿದುಬಂದಿದೆ.


ಅಂದಾಜು ₹94 ಲಕ್ಷ (1,32,000 ಡಾಲರ್ ) ಮೌಲ್ಯದ 1,05,461 ಕೆಜಿ ತೂಕದಷ್ಟು ಮನುಷ್ಯರ ಕೂದಲು ಚೀನಾಗೆ ರಫ್ತು ಮಾಡಿರುವುದಾಗಿ ಪಾಕಿಸ್ತಾನದ ವಾಣಿಜ್ಯ ಮತ್ತು ಜವಳಿ ಸಚಿವಾಲಯ ಸಂಸತ್ತಿಗೆ ತಿಳಿಸಿರುವುದಾಗಿ ಪತ್ರಿಕೆವೊಂದರಲ್ಲಿ ವರದಿ ಮಾಡಲಾಗಿದೆ. ಹಾಗೇ ಪ್ರತೀ ಕೆ.ಜಿಗೆ 5 ರಿಂದ 6 ಸಾವಿರ ರೂಪಾಯಿಯಷ್ಟು ಬೆಲೆಯಿದೆ ಎಂದು ಪಾಕಿಸ್ತಾನದ ಪ್ರಮುಖ ಸೌಂದರ್ಯತಜ್ಞ ಎ.ಎಂ.ಚೌಹಾಣ್‌ ತಿಳಿಸಿದ್ದಾರೆ.


ಚೀನಾದಲ್ಲಿ ಮನುಷ್ಯರ ಕೂದಲಿಂದ ಸಿದ್ಧಪಡಿಸಿದ ವಿಗ್‌ ಗಳನ್ನು ಫ್ಯಾಷನ್‌ ಆಗಿ ಧರಿಸುತ್ತಿರುವುದು ಟ್ರೆಂಡ್‌ ಆಗಿದೆ. ಆದರೆ ಪಾಕಿಸ್ತಾನದಲ್ಲಿ ಫ್ಯಾಶನ್‌ ಗಾಗಿ ವಿಗ್‌ ಗಳನ್ನು ಧರಿಸುವ ಪ್ರವೃತ್ತಿಯಿಲ್ಲ ಹಾಗೂ ಕೂದಲಿಗೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕೆಯೂ ಕ್ಷೀಣಿಸಿದೆ. ಹಾಗಾಗಿ ಚೀನಾಕ್ಕೆ ತಲೆಕೂದಲನ್ನು ರಫ್ತು ಮಾಡುತ್ತಿದೆ ಪತ್ರಿಕೆವೊಂದರಲ್ಲಿ ವರದಿ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶ್ರೀಗಳ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ- ಡಾ.ಪರಮೇಶ್ವರ್

ತುಮಕೂರು : ಡಾ.ಶಿವಕುಮಾರ್ ಶ್ರೀಗಳ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಶ್ರೀಗಳಿಗೆ ಚಿಕಿತ್ಸೆ ...

news

ಶ್ರೀಗಳ ಆರೋಗ್ಯದಲ್ಲಿ ಏರು ಪೇರಾದ ಹಿನ್ನೆಲೆ; ರಾಜ್ಯಾದ್ಯಂತ ಬಿಗಿ ಪೊಲೀಸ್ ಭದ್ರತೆ

ತುಮಕೂರು : ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರು ಪೇರಾಗಿರುವ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಹಾಗೂ ...

news

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು

ತುಮಕೂರು : ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ...

news

ಮಹಾಘಟಬಂಧನ್ ಭ್ರಷ್ಟಾಚಾರ, ವಂಚನೆ, ಋಣಾತ್ಮಕತೆ ಹಾಗೂ ಅಸ್ಥಿರತೆಯಿಂದ ಆಗಿರುವ ಕೂಟ- ಪ್ರಧಾನಿ ಮೋದಿ

ನವದೆಹಲಿ : ಹಲವು ಪಕ್ಷಗಳು ಸೇರಿ ರೂಪಿಸಿದ ಮಹಾಘಟಬಂಧನ್ ಭ್ರಷ್ಟಾಚಾರ, ವಂಚನೆ, ಋಣಾತ್ಮಕತೆ ಹಾಗೂ ...

Widgets Magazine