ಬ್ರಿಟನ್ ರಾಣಿ ಭೇಟಿಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ ಮರೆತ ಡೊನಾಲ್ಡ್ ಟ್ರಂಪ್ ಮಾಡಿದ್ದೇನು ಗೊತ್ತೇ?

ಲಂಡನ್, ಭಾನುವಾರ, 15 ಜುಲೈ 2018 (06:58 IST)

ಲಂಡನ್ : ಬ್ರಿಟನ್ ಪ್ರವಾಸದಲ್ಲಿದ್ದ ಸಂದರ್ಭವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಿಷ್ಟಾಚಾರಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಟ್ವಿಟರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ಬ್ರಿಟನ್ ನ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ. ಆದರೆ ಪ್ರವಾಸದ ವೇಳೆ ಬ್ರಿಟನ್ ರಾಣಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಡೆದಿರುವ ಘಟನೆಯೊಂದಕ್ಕೆ ಇದೀಗ ಟ್ವೀಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.


ಹೌದು. ಶುಕ್ರವಾರ ಟ್ರಂಪ್ ದಂಪತಿಗಳು ರಾಣಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಣಿ ಭೇಟಿಯಲ್ಲಿ ಪಾಲಿಸಬೇಕಾದ ಹಲವು ಶಿಷ್ಟಾಚಾರಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸಾಮಾನ್ಯವಾಗಿ ಬ್ರಿಟನ್ ರಾಣಿಯನ್ನು ಭೇಟಿ ಮಾಡಬೇಕಾದರೆ ನಿಗದಿತ ಪ್ರದೇಶಕ್ಕೆ ರಾಣಿಗಿಂತಲೂ ಮುಂಚಿತವಾಗಿ ಆಗಮಿಸಬೇಕಾಗುತ್ತದೆ, ಆದರೆ ಟ್ರಂಪ್ ಬ್ರಿಟನ್ ರಾಣಿಯನ್ನೇ ತಮಗಾಗಿ ಕಾಯಿಸಿದ್ದಾರೆ. ಇಷ್ಟೇ ಅಲ್ಲದೇ ಸ್ವಾಗತ ಸಮಾರಂಭದಲ್ಲಿ ರಾಣಿಯನ್ನು ಬಿಟ್ಟು ತಾವೇ ಮುಂದೆ ನಡೆದು ಹೋಗುವುದರ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಟ್ವೀಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಲಂಡನ್ ಬ್ರಿಟನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ರಾಣಿ Landon Brittan Queen America President Donald Trump

ಸುದ್ದಿಗಳು

news

ಬಾಲಕಿ ಮೇಲೆ ಅತ್ಯಾಚಾರ ಯತ್ನ ಶಂಕೆ: ಥಳಿತ

ಕುಡಿದ ಅಮಲಿನಲ್ಲಿ ನಾಲ್ಕುವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಶಂಕಿಸಿ ...

ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳು, ನುಸಿ ಪತ್ತೆ

ಶಾಲೆಯ ಮಕ್ಕಳ ಬಗ್ಗೆ ಅದೇಕೆ ನಿರ್ಲಕ್ಷ್ಯವೋ ಗೊತ್ತಿಲ್ಲ. ಸರಕಾರಿ ಶಾಲೆಯ ಮಧ್ಯಾಹ್ನದ ಊಟದ ಪಾಡಂತೂ ಆ ...

news

ಕೆ.ಆರ್.ಎಸ್ ಭರ್ತಿ: ತಮಿಳುನಾಡಿಗೆ ಹರಿದ ನೀರು

ನಾಲ್ಕು ವರ್ಷಗಳ ಬರದಿಂದ ತತ್ತರಿಸಿದ್ದ ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತಸ ಮೂಡುವಂತಾಗಿದ್ದು, ನಾಲ್ಕು ...

news

ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಸ್ವಾಗತ

ತುಮಕೂರು ಜಿಲ್ಲೆ ವಿಶ್ವ ಭೂಪಟದಲ್ಲಿ ಸೇರುವ ಕಾಲ ಹತ್ತಿರವಾಗಿದೆ. 40 ವರ್ಷಗಳ ಇತಿಹಾಸ ಹೊಂದಿದ್ದ ...

Widgets Magazine
Widgets Magazine