ಚೀನಾ ಗಡಿ ಕಿರಿಕ್ ಭಾರತಕ್ಕೆ ಸಿಕ್ಕಿದೆ ಬೂಸ್ಟ್!

NewDelhi, ಭಾನುವಾರ, 13 ಆಗಸ್ಟ್ 2017 (05:31 IST)

Widgets Magazine

ನವದೆಹಲಿ: ಡೋಕ್ಲಾಂ ಗಡಿ ವಿವಾದದಲ್ಲಿ ಭಾರತದ ವಿರುದ್ಧ ಪದೇ ಪದೇ ಚೀನಾ ಕಿಡಿ ಕಾರುತ್ತಿದ್ದರೆ, ಭಾರತ ಮಾತ್ರ ಮೌನಕ್ಕೆ ಶರಣಾಗಿದೆ. ಆದರೆ ಭಾರತದ ಈ ಪ್ರಬುದ್ಧ ನಡೆಗೆ ದೊಡ್ಡಣ್ಣ ಅಮೆರಿಕಾ ಬೆಂಬಲ ಸಿಕ್ಕಿದೆ.


 
ಇದು ಭಾರತದ ಪಾಲಿಗೆ ಸಕಾರಾತ್ಮಕ ಅಂಶವಾಗಲಿದೆ. ಗಡಿ ವಿಚಾರದಲ್ಲಿ ಚೀನಾ ಎಳಸು ಎಂದು ತೋರಿಸುತ್ತಿದೆ. ಆದರೆ ಭಾರತ ತನ್ನ ಗಡಿ ವಿಚಾರದಲ್ಲಿ ರಾಜಿಯೂ ಮಾಡಿಕೊಳ್ಳದೆ, ಇತ್ತ ವಿವಾದಕ್ಕೆ ಬೆಂಕಿ ಹಚ್ಚುವ ಕೆಲಸವನ್ನೂ ಮಾಡದೆ ಪ್ರಬುದ್ಧತೆ ಮೆರೆದಿದೆ ಎಂದು ಅಮೆರಿಕಾದ ವಿದೇಶಾಂಗ ತಜ್ಞರು ಹೊಗಳಿದ್ದಾರೆ.
 
ಭಾರತದ ಪ್ರಧಾನಿ ಮೋದಿ ಅಮೆರಿಕಾ ಅಧ್ಯಕ್ಷರ ಜತೆಗೆ ಮೈತ್ರಿ ಮಾತುಕತೆ ನಡೆಸಿದ ಮೇಲೆ ಆ ದೇಶದ ಬೆಂಬಲ ಭಾರತದ ಕಡೆಗಿದೆ. ಅಲ್ಲದೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಡೋಕ್ಲಾಂ ಗಡಿ ಹಂಚಿಕೊಳ್ಳುತ್ತಿರುವ ಇನ್ನೊಂದು ರಾಷ್ಟ್ರ ಭೂತಾನ್ ವಿದೇಶಾಂಗ ಸಚಿವರೊಂದಿಗೂ ಈ ಕುರಿತು ಯಶಸ್ವಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಚೀನಾ ಖ್ಯಾತೆ ತೆಗೆಯುತ್ತಿದ್ದರೂ, ಭಾರತದ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಡಿಕೆಶಿಯೊಂದಿಗೆ ಐಟಿ ದಾಳಿಯ ಬಗ್ಗೆ ವಿಚಾರಿಸಿದ ರಾಹುಲ್ ಗಾಂಧಿ

ರಾಯಚೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ನಡೆದ ಐಟಿ ದಾಳಿಯ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ...

news

ರಾಜ್ಯದಲ್ಲಿ ಅಧಿಕಾರಕ್ಕೆ ತರುವಂತೆ ಅಮಿಕ್ ಶಾ ಸೂಚನೆ ನೀಡಿದ್ದಾರೆ: ಈಶ್ವರಪ್ಪ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ...

news

ಉತ್ತರಪ್ರದೇಶ ಮಾದರಿಯಲ್ಲೇ ರಾಜ್ಯದಲ್ಲೂ ಚುನಾವಣೆ: ಅಮಿತ್ ಶಾ

ಬೆಂಗಳೂರು: ಉತ್ತರಪ್ರದೇಶ ಮಾದರಿಯಲ್ಲೇ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ...

news

ಅಮಿತ್ ಶಾ , ರಾಹುಲ್‌ಗೆ ಹೆದರೋಲ್ಲ, ಏಕಾಂಗಿ ಹೋರಾಟ: ದೇವೇಗೌಡ

ಬೆಂಗಳೂರು: ರಾಷ್ಟ್ರೀಯ ಪಕ್ಷಗಳ ಮುಖಂಡರಾದ ಅಮಿತ್ ಶಾ ಮತ್ತು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದರೂ ...

Widgets Magazine