ನೀರು ಹಾಗೂ ವಿದ್ಯುತ್ ಉಳಿಸುವ ಪ್ರಯತ್ನಕ್ಕೆ ಮುಂದಾದ ದುಬೈ

ದುಬೈ, ಗುರುವಾರ, 21 ಜೂನ್ 2018 (13:36 IST)

ದುಬೈ : ದುಬೈ ಹಾಗೂ ವಿದ್ಯುತ್ ಪ್ರಾಧಿಕಾರ (ದಿವಾ) ಅನಗತ್ಯವಾಗಿ  ಬಳಕೆಯಾಗುತ್ತಿರುವ ನೀರು ಹಾಗೂ ವಿದ್ಯುತ್ ನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಿದೆ.


ಯುಎಇ ನ ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರು ಅತಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಪಕರಣಗಳು ಹಾಗೂ ಜಲಸಂಪನ್ಮೂಲಗಳನ್ನು ಬಳಸುತ್ತಿರುವ ಹಿನ್ನಲೆಯಲ್ಲಿ ವಾಟರ್ ಹೀಟರ್, ಇಲೆಕ್ಟ್ರಿಕಲ್ ಓವನ್, ಇಸ್ತ್ರಿಪೆಟ್ಟಿಗೆ ಮುಂತಾದ ಉಪಕರಣಗಳ ಉಪಯೋಗವನ್ನು ಕಡಿಮೆಗೊಳಿಸಿ ಬೇಸಿಗೆಯಲ್ಲಿ ಅಗತ್ಯವಾಗಿ ಬೇಕಾದ ಉಪಕರಣಗಳನ್ನು ಮಾತ್ರ ಬಳಸುವಂತೆ ಜನರಿಗೆ  ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.


ಈ ಹಿಂದೆಯೂ ಕೂಡ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ದಿವಾ ಅದರಲ್ಲಿ ಯಶಸ್ಸು ಸಾಧಿಸಿದ್ದು, ಈ ಮೂಲಕ 2009ರಿಂದ 2017ರವರೆಗಿನ ಅವಧಿಯಲ್ಲಿ 1.66 ಟೆರಾವ್ಯಾಟ್ ವಿದ್ಯುತ್ ಹಾಗೂ 666 ಕೋಟಿ ಗ್ಯಾಲನ್ ನೀರು ಸಂರಕ್ಷಿಸಲು ಈ ಅಭಿಯಾನದಿಂದ ಸಾಧ್ಯವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉಗ್ರರ ಮೇಲೆ ಕಠಿಣ ಕ್ರಮ ; ಕೇಂದ್ರ ಸರ್ಕಾರ ನಿರ್ಧಾರ

ನವದೆಹಲಿ : ಬಿಜೆಪಿ ಜಮ್ಮುಕಾಶ್ಮೀರದಲ್ಲಿ ಪಿಡಿಪಿ ಜೊತೆಗಿನ ಮೈತ್ರಿಯನ್ನು ಕಳಚಿಕೊಂಡ ನಂತರ ಕೇಂದ್ರ ಸರ್ಕಾರ ...

news

ಡಿಕೆಶಿ ಪ್ರಕರಣದ ಬಗ್ಗೆ ನಾಲ್ಕು ದಿನ ಆದ್ಮೇಲೆ ಪ್ರತಿಕ್ರಿಯೆ ಕೊಡ್ತೀನಿ ಅಂದ್ರು ಈಶ್ವರಪ್ಪ!

ಬೆಂಗಳೂರು: ಹೈಕಮಾಂಡ್ ಗೆ ಹವಾಲಾ ಹಣ ರವಾನೆ ಮಾಡಿದ್ದಾರೆಂಬ ಸಚಿವ ಡಿಕೆ ಶಿವಕುಮಾರ್ ಮೇಲಿನ ಗಂಭೀರ ಆರೋಪದ ...

news

ಹೋಟೆಲ್ ರೂಂ ಸಿಗಲಿಲ್ಲ, ಅದಕ್ಕೇ ಡೆಲ್ಲಿಯಲ್ಲಿ ಫ್ಲ್ಯಾಟ್ ತಗೊಂಡಿದ್ದೆ: ಡಿಕೆಶಿ ಸಮಜಾಯಿಷಿ

ಬೆಂಗಳೂರು: ದೆಹಲಿಯ ತಮ್ಮ ಫ್ಲ್ಯಾಟ್ ಮೇಲೆ ನಡೆದ ಐಟಿ ದಾಳಿ ಮತ್ತು ಆರೋಪಗಳಿಗೆ ಸಂಬಂಧಿಸಿದಂತೆ ಸಚಿವ ಡಿಕೆ ...

news

ನಾನೇ ಡಿಕೆ ಶಿವಕುಮಾರ್ ರಾಜೀನಾಮೆ ಕೇಳುವೆ : ಸಿಎಂ ಎಚ್ ಡಿಕೆ

ಬೆಂಗಳೂರು: ಐಟಿ ಇಲಾಖೆ ಭಾರೀ ಆರೋಪ ಹಣದ ಅವ್ಯವಹಾರ ಆರೋಪ ಹೊರಿಸಿರುವ ಹಿನ್ನಲೆಯಲ್ಲಿ ಡಿಕೆ ಶಿವಕುಮಾರ್ ...

Widgets Magazine
Widgets Magazine