ವೆನೆಝುವೆಲಾದ ನೈಟ್‌ಕ್ಲಬ್‌ ನಲ್ಲಿ ಅಶ್ರುವಾಯು ಸ್ಫೋಟ ; ನೂಕುನುಗ್ಗಲಿಗೆ 17 ಜನರು ಬಲಿ

ಕಾರಾಕಸ್, ಸೋಮವಾರ, 18 ಜೂನ್ 2018 (14:20 IST)

ಕಾರಾಕಸ್ : ವೆನೆಝುವೆಲಾದ ರಾಜಧಾನಿ ಕಾರಾಕಸ್‌ನ ನೈಟ್‌ಕ್ಲಬ್‌ವೊಂದರಲ್ಲಿ ಅಶ್ರುವಾಯು ಗ್ರೆನೇಡ್ ಸ್ಫೋಟಿಸಿದ ಕಾರಣ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಎಲ್ ಪ್ಯಾರಾಸಿಯೊ ಪ್ರದೇಶದಲ್ಲಿನ 'ಲಾಸ್ ಕೊಟೊರಸ್' ಕ್ಲಬ್‌ನಲ್ಲಿ ಮಿಡ್ಲ್ ಸ್ಕೂಲ್‌ವೊಂದರ ಗ್ರಾಜ್ಯುಯೇಷನ್ ಪಾರ್ಟಿಯಲ್ಲಿ ಎರಡು ಗುಂಪುಗಳ ನಡುವೆ  ಹೊಡೆದಾಟ ನಡೆದಿದ್ದು, ಆ ವೇಳೆ ಬಾತ್‌ರೂಮಿನಲ್ಲಿ ಅಶ್ರುವಾಯು ಬಾಂಬ್‌ನ್ನು ಸಿಡಿಸಲಾಗಿತ್ತು. ಆಗ ಜನರು ಜೀವವುಳಿಸಿಕೊಳ್ಳಲು ಏಕಕಾಲದಲ್ಲಿ ಮುಚ್ಚಿದ್ದ ಬಾಗಿಲುಗಳತ್ತ ಧಾವಿಸಿದ್ದ ಕಾರಣ ಉಂಟಾದ  ನೂಕುನುಗ್ಗಲಿನಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ.


ಅಶ್ರುವಾಯು ಬಾಂಬ್‌ನ್ನು ಸ್ಫೋಟಿಸಿದ್ದರೆನ್ನಲಾದ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಎಂಟು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಗೇ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದಕ್ಕೆ ಮತ್ತು ಅಶ್ರುವಾಯು ಬಾಂಬ್ ಒಳಗೆ ತರುವುದನ್ನು ತಡೆಯದಿದ್ದಕ್ಕಾಗಿ ಕ್ಲಬ್‌ನ ಮಾಲಿಕನನ್ನು ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಜಿ ಸಿಎಂ ಸಿದ್ದರಾಮಯ್ಯಗೆ ಬಾದಾಮಿಯಲ್ಲಿ ಉಚಿತ ಮನೆ ಆಫರ್!

ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು, ...

news

‘ನಾಯಿ ಸತ್ತರೂ ಪ್ರಧಾನಿ ಪ್ರತಿಕ್ರಿಯಿಸಬೇಕೇ?’ ಗೌರಿ ಹತ್ಯೆ ಬಗ್ಗೆ ಪ್ರಮೋದ್ ಮುತಾಲಿಕ್ ವಿವಾದಿತ ಹೇಳಿಕೆ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ...

news

ಕಾಂಗ್ರೆಸ್ ನಾಯಕರ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಳ್ತಾರೆ: ಸಿಎಂ ಎಚ್ ಡಿಕೆ

ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ನಲ್ಲಿ ಎದ್ದಿರುವ ಅಸಮಾಧಾನದ ಬಗ್ಗೆ ನಾನು ...

news

ಲಕ್ಷ್ಮೀ ಹೆಬ್ಬಾಳ್ಕರ್-ಜಯಮಾಲಾ ಫೈಟ್ ಗೆ ಹೊಸ ಟ್ವಿಸ್ಟ್

ಬೆಂಗಳೂರು: ಸಚಿವ ಸ್ಥಾನ ತಮಗೆ ನೀಡದೇ ಜಯಮಾಲಾಗೆ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕರ ವಿರುದ್ಧ ...

Widgets Magazine