ಫೇಸ್ ಬುಕ್ ಗ್ರೂಪ್ ಅಡ್ಮಿನ್ ಗಳಿಗೆ ಸಿಗಲಿದೆ ಹೆಚ್ಚು ಅಧಿಕಾರ

ನವದೆಹಲಿ, ಮಂಗಳವಾರ, 31 ಅಕ್ಟೋಬರ್ 2017 (17:30 IST)

ನವದೆಹಲಿ: ಫೇಸ್‌ ಬುಕ್ ಗ್ರೂಪ್ ಕ್ರಿಯೇಟ್ ಮಾಡುವ ಅಡ್ಮಿನ್‌ ಗಳಿಗೆ ಹೆಚ್ಚು ಅಧಿಕಾರ ನೀಡುವ ಫೀಚರ್ ಬಿಡುಗಡೆ ಮಾಡಿದೆ.


ಸಾಮಾಜಿಕ ತಾಣ ಫೇಸ್‌ ಬುಕ್ ಈಗ ಹೊಸ ಟೂಲ್ ವೊಂದನ್ನು ಪರಿಚಯಿಸಿದ್ದು, ಇದನ್ನು ಬಳಸಿಕೊಂಡು ಗ್ರೂಪ್ ಅಡ್ಮಿನ್‌ ಗಳು ಗ್ರೂಪ್ ಸದಸ್ಯರ ಕಾಮೆಂಟ್‌ಗಳನ್ನು ನಿಷೇಧಿಸಬಹುದಾಗಿದೆ. ಹೀಗೆ ಮಾಡುವುದರಿಂದ ಆ ಗ್ರೂಪ್‌ ನಲ್ಲಿ ಅವರು ಯಾವುದೇ ಕಾರಣಕ್ಕೂ ಕಮೆಂಟ್ ಮಾಡಲು ಆಗುವುದಿಲ್ಲವಂತೆ.

ಫೇಸ್‌ ಬುಕ್ ಅಡ್ಮಿನ್‌ ಗಳು ಒಂದು ಕ್ಲಿಕ್ ಮಾಡುವ ಮೂಲಕ ತಮ್ಮ ಸಮುದಾಯದ ನಿಯಮಗಳನ್ನು ಉಲ್ಲಂಘಿಸುವ ಸದಸ್ಯರನ್ನು ಗ್ರೂಪ್ ನಿಂದ ತೆಗೆಯುವ ಹಾಗೂ ಅವರು ಯಾವುದೇ ಕಮೆಂಟ್ ಮಾಡದಂತೆ ನಿಷೇಧಿಸುವ ಅಧಿಕಾರ ಹೊಂದಿರುವುದಾಗಿ ಫೇಸ್‌ ಬುಕ್ ಹೇಳಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಆಯ್ಕೆ ಲಭ್ಯವಾಗಲಿದೆ.

ಇನ್ನು ಗ್ರೂಪ್ ಅಡ್ಮಿನ್‌ ಗಳು ಹೊಸದಾಗಿ ಗ್ರೂಪ್ ಸೇರುವ ಸದಸ್ಯರಿಗೆ ಸ್ವಾಗತ ಕೋರಲು ಸಹ ಫೀಚರ್ ಅಪ್‌ ಡೇಟ್ ಆಗಿದ್ದು, ಸ್ವಾಗತ ಕೋರುವ ಪೋಸ್ಟ್ ಗ್ರೂಪ್‌ ಗೆ ಹೊಸದಾಗಿ ಸೇರಿದ ಸದಸ್ಯರಿಗೆ ಆಟೋಮ್ಯಾಟಿಕ್ ಆಗಿ ಟ್ಯಾಗ್ ಆಗುತ್ತದೆ ಎಂದು ಫೇಸ್‌ಬುಕ್ ತಿಳಿಸಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐಪಿಎಸ್ ಅಧಿಕಾರಿ ಪತ್ನಿ ಬಂಧನ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…!

ಹೈದರಾಬಾದ್: ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಸಹಕರಿಸಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿ ...

news

ಹಿಮಾಚಲ ಪ್ರದೇಶ ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಪ್ರೇಮಕುಮಾರ್ ಧುಮಾಲ್

ನವದೆಹಲಿ: ಹಿಮಾಚಲ ಪ್ರದೇಶದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕ ಪ್ರೇಮಕುಮಾರ್ ...

news

ಪೊಲೀಸ್ ಇಲಾಖೆಯ ಮುಖ್ಯಸ್ಥೆಯಾಗಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿ

ಬೆಂಗಳೂರು: ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಅವರ ...

news

ರಾಜ್ಯದ ಮೊದಲ ಮಹಿಳಾ ಡಿಜಿಪಿ ಆಗಿ ನೀಲಮಣಿ ರಾಜು ನೇಮಕ

ಬೆಂಗಳೂರು: ರಾಜ್ಯದ ನೂತನ ಹಾಗೂ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ಎನ್.ರಾಜು ...

Widgets Magazine
Widgets Magazine