ಟ್ರಂಪ್ ವಿರುದ್ಧ ಮಾಜಿ ಕಾರು ಚಾಲಕ ದೂರು ದಾಖಲಿಸಿದ್ಯಾಕೆ?

ನ್ಯೂಯಾರ್ಕ್, ಬುಧವಾರ, 11 ಜುಲೈ 2018 (07:36 IST)

ನ್ಯೂಯಾರ್ಕ್ : ಡೊನಾಲ್ಡ್ ಟ್ರಂಪ್ ಹಾಗೂ ಅವರ ಉದ್ಯಮ ಗುಂಪಿನ ವಿರುದ್ಧ ಅವರ ಮಾಜಿ ಕಾರು ನೋಯಲ್ ಸಿಂಟ್ರಾನ್ ಎಂಬಾತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.


ನೋಯಲ್ ಸಿಂಟ್ರಾನ್ 25ಕ್ಕೂ ಅಧಿಕ ವರ್ಷ ಟ್ರಂಪ್, ಅವರ ಕುಟುಂಬ ಮತ್ತು ಉದ್ಯಮಗಳಲ್ಲಿ  ಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. 2016ರಲ್ಲಿ ಟ್ರಂಪ್ ಅಮೆರಿಕದದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ನೋಯಲ್‌ರನ್ನು ಗುಪ್ತಚರ ಸಂಸ್ಥೆಯು ಚಾಲಕ ಕೆಲಸದಿಂದ ತೆಗೆದು ಭದ್ರತಾ ಸಿಬ್ಬಂದಿಯಾಗಿ ನೇಮಿಸಿದರು.


ಆದರೆ ಈಗ ಸಿಂಟ್ರಾನ್ 10 ವರ್ಷಗಳಿಗೂ ಅಧಿಕ ಅವಧಿಯಲ್ಲಿ ಟ್ರಂಪ್ ತನಗೆ ನ್ಯಾಯೋಚಿತ ಸಂಬಳ ಏರಿಕೆ ಮಾಡಿಲ್ಲ ಹಾಗೂ ತನ್ನನ್ನು ಅವರು ಶೋಷಿಸಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೂರು ದಾಖಲಿಸಿದ್ದಾರೆ. 3,000ಕ್ಕೂ ಅಧಿಕ ಗಂಟೆಗಳ ಓವರ್‌ಟೈಮ್ ಭತ್ತೆ ಹಾಗೂ ತಾನು ಅನುಭವಿಸಿದ 'ಹಾನಿ'ಗಾಗಿ ದಂಡ, ಪರಿಹಾರ ಮತ್ತು ಮೊಕದ್ದಮೆ ಖರ್ಚುಗಳನ್ನು ಟ್ರಂಪ್ ನೀಡಬೇಕೆಂದು ಸಿಂಟ್ರಾನ್ ನ್ಯಾಯಾಲಯವನ್ನು ಕೋರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೊಟ್ಟಿ ಸುಟ್ಟಿದ್ದು ಕಪ್ಪಾಗಿದ್ದಕ್ಕೆ ಪತ್ನಿಗೆ ತಲಾಖ್ ನೀಡಿದ ಭೂಪ!

ಉತ್ತರ ಪ್ರದೇಶ : ಕೇಂದ್ರದಲ್ಲಿ ಎನ್ ಡಿೆ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಮಹಿಳೆಯರ ಹಿತ ಕಾಪಾಡಲು ...

news

ಪರೇಶ ಮೇಸ್ತ್ ಪ್ರಕರಣ: ಶೀಘ್ರ ತನಿಖೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಹೊನ್ನಾವರ ಪಟ್ಟಣದ ಯುವಕ ಪರೇಶ್ ಮೇಸ್ತನ ಅನುಮಾನಾಸ್ಪದ ಸಾವಿನ ಪ್ರಕರಣದ ಶೀಘ್ರ ತನಿಖೆಗೆ ಒತ್ತಾಯಿಸಿ ...

news

ಕಳಸಾ ಬಂಡೂರಿ ಹೋರಾಟಗಾರರಿಂದ ಬೆಂಗಳೂರು ಚಲೋ

ರೈತರ ಸಾಲಸಂಪೂರ್ಣ ಮನ್ನಾ ಹಾಗೂ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕಳಸಾ -ಬಂಡೂರಿ ...

news

ಮಾನವೀಯತೆ ಮೆರೆದ ಪತ್ರಕರ್ತರು

ಧಾರಾಕಾರ ಮಳೆಯ ಅವಘಡದಿಂದ ಮೂಕ ಪ್ರಾಣಿಯ ಮನಕಲುಕುವ ಘಟನೆ ನಡೆದಿದೆ. ಚರಂಡಿಯಲ್ಲಿ ಕೊಚ್ಚಿ ಹೋಗಿ ...

Widgets Magazine