ಮೋದಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಸಿಂಗಾಪುರದ ಮಾಜಿ ರಾಜತಾಂತ್ರಿಕ ಪ್ರೊಫೆಸರ್ ಟಾಮಿ ಕೊಹ್

ಸಿಂಗಾಪುರ, ಶನಿವಾರ, 2 ಜೂನ್ 2018 (07:51 IST)

Widgets Magazine

: ಸಿಂಗಾಪುರದ ಮಾಜಿ ರಾಜತಾಂತ್ರಿಕ ಪ್ರೊಫೆಸರ್ ಟಾಮಿ ಕೊಹ್ ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


ಈ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರದಲ್ಲಿ ಪ್ರೊಫೆಸರ್ ಟಾಮಿ ಕೊಹ್ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಈ ವರ್ಷ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸಿದ 10 ಆಸಿಯಾನ್ (ಆಗ್ನೇಯ ಏಶ್ಯ ದೇಶಗಳ ಸಂಘಟನೆ) ದೇಶಗಳ ನಾಗರಿಕರ ಪೈಕಿ ಕೊಹ್ ಕೂಡ ಒಬ್ಬರೆನಿಸಿಕೊಂಡಿದ್ದಾರೆ.


ಇವರು ಮತ್ತು ವಿಶ್ವಸಂಸ್ಥೆಗೆ ಸಿಂಗಾಪುರದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. 1981 ಮತ್ತು 1982ರಲ್ಲಿ ವಿಶ್ವಸಂಸ್ಥೆಯ ಸಮುದ್ರ ಕಾನೂನು ಕುರಿತ ಮೂರನೇ ಸಮ್ಮೇಳನದ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಇದೀಗ ಅವರು ಸಿಂಗಾಪುರ ನ್ಯಾಶನಲ್ ವಿಶ್ವವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ಕಾನೂನು ಕೇಂದ್ರದ ಗವರ್ನರ್‌ಗಳ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮುಸ್ಲಿಮರು ಒಪ್ಪಿದ್ರೆ ಮಾತ್ರ ಇಫ್ಟಾರ್‌ಕೂಟ: ಪೇಜಾವರ ಶ್ರೀ

ಉಡುಪಿ: ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕೆಂಬ ಭಾವನೆ ಇದೆ. ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ...

news

ಡಿಕೆ ಬ್ರದರ್ಸ್ ಮತ್ತು ಬೆಂಬಲಿಗರ ಮನೆಗಳ ಮೇಲೆ ಐಟಿ ದಾಳಿ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಡಿಕೆ ಶಿವಕುಮಾರ ಬ್ರದರ್ಸ್ ಮತ್ತು ಬೆಂಬಲಿಗರ ಮನೆಗಳ ಮೇಲೆ ಐಟಿ ದಾಳಿ ಖಂಡಿಸಿ ಪ್ರತಿಭಟನೆ ...

news

ಕುಮಾರಸ್ವಾಮಿ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ: ಪೇಜಾವರ ಶ್ರೀ

ಬೆಂಗಳೂರು: ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಅಂತ ಹಾರೈಸ್ತೇನೆ. ರಾಜಕೀಯ ಪಕ್ಷಗಳು ...

news

ಸಂಪುಟ ರಚನೆಯಲ್ಲಿ ಗೊಂದಲವಿಲ್ಲ: ಎಚ್.ವಿಶ್ವನಾಥ್

ಮಂಡ್ಯ: ಸಚಿವ ಸಂಪುಟ ರಚನೆಯಲ್ಲಿ ಯಾವುದೇ ಗೊಂದಲವಿಲ್ಲ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ...

Widgets Magazine