ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಪುತ್ರಿ ಮರಿಯಂ ಅರೆಸ್ಟ್

ಶನಿವಾರ, 14 ಜುಲೈ 2018 (10:39 IST)

ಲಾಹೋರ್ : ಪನಾಮ ಪೇಪರ್ ಹಗರಣದಲ್ಲಿ ದೋಷಿ ಎಂದು ಸಾಬೀತಾದ ಕಾರಣ ಪಾಕಿಸ್ತಾನ ಸುಪ್ರಿಂ ಕೋರ್ಟ್ ಮಾಜಿ ಪ್ರಧಾನಿ ನವಾಜ್ ಷರೀಫ್ 10 ವರ್ಷ ಹಾಗೂ ಅವರ ಪುತ್ರಿ ಮರಿಯಂಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಹಿನ್ನಲೆಯಲ್ಲಿ ಇದೀಗ  ಇವರಿಬ್ಬರನ್ನು ಬಂಧಿಸಲಾಗಿದೆ.


ಅಬುಧಾಬಿಯಿಂದ ಎತಿಹಾದ್‌ ವಿಮಾನದಲ್ಲಿ ರಾತ್ರಿ 9.15ಕ್ಕೆ ಅಲ್ಲಮ ಇಕ್ಬಾಲ್‌ ವಿಮಾನ ನಿಲ್ದಾಣಕ್ಕೆ  ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಪುತ್ರಿ ಮರಿಯಂ ಬಂದಿಳಿಯುತ್ತಿದ್ದಂತೆ ಪಾಕಿಸ್ತಾನದ ನ್ಯಾಬ್ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಇಬ್ಬರೂ ಯಾವುದೇ ವಿರೋಧ ವ್ಯಕ್ತಪಡಿಸದೆ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಶರಣಾದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.


ಏರ್ ಪೋರ್ಟ್ ಹೊರಗಡೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು ಶರೀಫ್ ಪರ ಘೋಷಣೆ ಕೂಗುತ್ತಿದ್ದಾರೆ. ಏರ್ ಪೋರ್ಟ್ ಸುತ್ತಲೂ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದೆ., ಶರೀಫ್ ತಾಯಿ ಬೇಗಂ ಶಮೀಮ್ ಅಖ್ತರ್ ಹಾಗೂ ಶೆಬಾಝ್ ಶರೀಫ್‍ಗೆ ಮಾತ್ರ ಏರ್ ಪೋರ್ಟ್ ಗೆ ಒಳಗೆ ಹೋಗಲು ಅನುಮತಿ ನೀಡಲಾಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಲಾಹೋರ್‍‍ನಲ್ಲಿ ಇಂಟರ್‍‍ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

‘ಹಿಂದೂ ಪಾಕಿಸ್ತಾನ’ ಎಂದ ಶಶಿ ತರೂರ್ ಗೆ ಮತ್ತಷ್ಟು ಸಂಕಟ

ನವದೆಹಲಿ: ಬಿಜೆಪಿ 2019 ರ ಲೋಕಸಭೆ ಚುನಾವಣೆ ಗೆದ್ದರೆ ಭಾರತವನ್ನು ಹಿಂದೂ ಪಾಕಿಸ್ತಾನ ಮಾಡಬಹುದು ಎಂದು ...

ಇಂದಿನಿಂದ ಮಧ್ಯಮ ವರ್ಗಕ್ಕೆ ಎಲ್ಲವೂ ತುಟ್ಟಿ!

ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದ ಬೆಲೆ ಏರಿಕೆ ...

ಲೋಕಸಭೆ ಚುನಾವಣೆಗಾಗಿ ಪ್ರಧಾನಿ ಮೋದಿ ಎಂಥಾ ಕೆಲಸ ಮಾಡಲಿದ್ದಾರೆ ಗೊತ್ತಾ?

ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನಲೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ...

ದೇಶದ ಪ್ರಮುಖರ ಟ್ವಿಟರ್ ಖಾತೆಯ ಫಾಲೋವರ್ ಗಳ ಸಂಖ್ಯೆ ದಿಡೀರ್ ಇಳಿಕೆ

ನವದೆಹಲಿ: ಪ್ರಧಾನಿ ಮೋದಿ, ಬಾಲಿವುಡ್ ನಟ ಶಾರುಖ್ ಖಾನ್ ಸೇರಿದಂತೆ ಪ್ರಮುಖರ ಟ್ವಿಟರ್ ಖಾತೆಯಲ್ಲಿ ಫಾಲೋವರ್ ...