ಸಾಂತಾ ಕ್ಲಾಸ್‍ ನ ವೇಷಧರಿಸಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅಮೇರಿಕಾದ ಮಾಜಿ ಅಧ್ಯಕ್ಷ

ವಾಷಿಂಗ್ಟನ್, ಶುಕ್ರವಾರ, 21 ಡಿಸೆಂಬರ್ 2018 (07:36 IST)

ವಾಷಿಂಗ್ ಟನ್ : ಅಮೆರಿಕದಲ್ಲಿ ಕ್ರಿಸ್‍ಮಸ್ ತಯಾರಿ ಜೋರಾಗಿ ನಡೆಯುತ್ತಿದ್ದು, ಅಮೇರಿಕಾದ ಮಾಜಿ ಅಧ್ಯಕ್ಷರೊಬ್ಬರು ಸಾಂತಾ ಕ್ಲಾಸ್ ವೇಷ ಧರಿಸಿ, ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಉಡುಗೊರೆಗಳನ್ನು ಹಂಚಿದ್ದಾರೆ.


ಹೌದು. ತಮ್ಮ ಸರಳತೆಯಿಂದ ಹೆಸರಾದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ್ ಅವರು ಕ್ರಿಸ್‍ಮಸ್ ನಿಮಿತ್ತ ಸಾಂತಾ ಕ್ಲಾಸ್‍ ನಂತೆ ಕೆಂಪು ಟೋಪಿ ಧರಿಸಿ, ಕೈಯಲ್ಲಿ ಉಡುಗೊರೆಗಳ ಜೋಳಿಗೆ ಹಿಡಿದು ವಾಷಿಂಗ್ಟನ್ ಡಿಸಿಯಲ್ಲಿರುವ ನ್ಯಾಷನಲ್ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿ ದಾಖಲಾಗಿರುವ ಮಕ್ಕಳನ್ನು ಅಪ್ಪಿಕೊಂಡು ಶುಭಾಶಯ ಕೋರಿ ಜೊತೆಗೆ ಉಡುಗೊರೆಗಳನ್ನು ನೀಡಿದ್ದಾರೆ.


ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈಗಾಗಲೇ 2.6 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅಲ್ಲದೇ ಒಬಾಮಾರವರ ಈ ಕಾರ್ಯಕ್ಕೆ ಅನೇಕರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯಾಷನಲ್ ಆಸ್ಪತ್ರೆ ಕೂಡ ಒಬಾಮಾ ಅವರಿಗೆ ಕೃತಜ್ಞತೆ ಸಲ್ಲಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟ್ಯೂಷನ್ ಕ್ಲಾಸ್ ಗೆ ಬಂದ ಬಾಲಕನ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

ಬೆಂಗಳೂರು : ಟ್ಯೂಷನ್ ಮಾಸ್ಟರ್ ಒಬ್ಬ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾದ ಘಟನೆ ...

news

ಗೋವಾ ಬೀಚ್ ನಲ್ಲಿ ಬ್ರಿಟಿಷ್ ಮಹಿಳೆಯ ಮೇಲೆ ದುಷ್ಕರ್ಮಿಗಳಿಂದ ಅತ್ಯಾಚಾರ

ಪಣಜಿ : ಗೋವಾ ಬೀಚ್ ಗೆಂದು ಬರುತ್ತಿದ್ದ 42 ವರ್ಷದ ಬ್ರಿಟಿಷ್ ಮಹಿಳೆಯೊಬ್ಬಳ ಮೇಲೆ ದುಷ್ಕರ್ಮಿಗಳು ...

news

ರಾಂಗ್ ರೂಟ್ ನಲ್ಲಿ ಬಂದ ಕಾರು ಚಾಲಕ ಟ್ರಾಫಿಕ್ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಮಾಡಿದ್ದೇನು ಗೊತ್ತಾ?

ನವದೆಹಲಿ : ವ್ಯಕ್ತಿಯೊಬ್ಬ ಕಾರು ಚಲಾಯಿಸಿಕೊಂಡು ರಾಂಗ್ ರೂಟ್ ನಲ್ಲಿ ಬಂದಿದ್ದಲ್ಲದೇ ಇದನ್ನು ತಡೆಯಲು ಬಂದ ...

news

ಹತ್ತು ರೂ. ನಿಂದ ಲಕ್ಷ ಲಕ್ಷ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಇಬ್ಬರು ಕಳ್ಳರ ಬಂಧನ

ಚಿಕ್ಕಬಳ್ಳಾಪುರ : ರಸ್ತೆಯಲ್ಲಿ ಹತ್ತು ರೂ. ಬಿಸಾಕಿ ಅಮಾಯಕರಿಂದ ಲಕ್ಷ ಲಕ್ಷ ದೋಚುತ್ತಿದ್ದ ಕುಖ್ಯಾತ ...