ಅಫಘಾನಿಸ್ತಾನದಲ್ಲಿ ಚಿನ್ನದ ಗಣಿ ಕುಸಿದು 30 ಜನ ಸಾವು

ಅಫಘಾನಿಸ್ತಾನ್, ಸೋಮವಾರ, 7 ಜನವರಿ 2019 (07:24 IST)

ಅಫಘಾನಿಸ್ತಾನ : ಭಾನುವಾರ ಅಫಘಾನಿಸ್ತಾನದ  ಬದಖಷಾನ ಪ್ರಾಂತ್ಯದ ಕೊಹಿಸ್ತಾನ್‌ ಜಿಲ್ಲೆಯ ಚಿನ್ನದ ಗಣಿ ಕುಸಿದು 30 ಜನ ಮೃತಪಟ್ಟಿದ್ದು, 15 ಜನ ಗಾಯಗೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಅಲ್ಲಿನ ಗ್ರಾಮಸ್ಥರು ನದಿ ತೀರದ ಉದ್ದಕ್ಕೂ ಸುಮಾರು 200 ಅಡಿ ಆಳದ ವರೆಗೆ ಅಗೆದು  ಹುಡುಕುವ ಸಲುವಾಗಿ ಗಣಿ ಒಳಗೆ ಇಳಿದಿದ್ದಾರೆ. ಆ ವೇಳೆ ಮಣ್ಣು ಕುಸಿದು ಈ ಅವಘಡ ನಡೆದಿದೆ.


ಆದರೆ ಈ ಗ್ರಾಮಸ್ಥರು ವೃತ್ತಿರಪ ಗಣಿ ಕೆಲಸಗಾರರಲ್ಲ. ಅವರು ದಶಕಗಳಿಂದ ಸರ್ಕಾರದ ನಿಯಂತ್ರಣವಿಲ್ಲದೆ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಪ್ರಾಂತೀಯ ಗವರ್ನರ್‌ ವಕ್ತಾರ ನಿಕ್‌ ಮೊಹಮ್ಮದ್‌ ನಝೀರ್‌ ಹೇಳಿದ್ದಾರೆ.


ಅವಘಡ ಸಂಭವಿಸಿದ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ. ಆದರೆ ಸ್ಥಳೀಯರು ಆಗಲೇ ಕುಸಿದಿರುವ ಮಣ್ಣು ತೆರವು ಕಾರ್ಯದಲ್ಲಿ ತೊಡಿಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಬಸ್ ಕಂಡಕ್ಟರ್ ನಿಂದಲೇ ಲೈಂಗಿಕ ಕಿರುಕುಳ

ರಾಯಚೂರು : ರಾತ್ರಿ ವೇಳೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಬಸ್ ಕಂಡಕ್ಟರ್ ಲೈಂಗಿಕ ಕಿರುಕುಳ ...

news

16 ವರ್ಷದ ಬಾಲಕಿಯ ಮೇಲೆ ಮಲತಂದೆ ಹಾಗೂ ಆತನ ಸಹೋದರನಿಂದ ಸಾಮೂಹಿಕ ಅತ್ಯಾಚಾರ

ಲಕ್ನೋ : 16 ವರ್ಷದ ಬಾಲಕಿಯ ಮೇಲೆ ಮಲತಂದೆ ಹಾಗೂ ಆತನ ಸಹೋದರ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ...

news

ಜನವರಿ 8 ಮತ್ತು 9 ರಂದು ಭಾರತ್ ಬಂದ್‍

ಬೆಂಗಳೂರು : ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆ ಕಾರ್ಮಿಕ ಸಂಘಟನೆಗಳು ಮಂಗಳವಾರ ...

news

ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ವ್ಯಕ್ತಿಗೆ ವಂಚಿಸಿದ ದುಷ್ಕರ್ಮಿಗಳು

ಬೆಂಗಳೂರು : ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿರುವ ಘಟನೆ ...