ಬಿಎಸ್ ಎಫ್ ಯೋಧನನ್ನು ಕೊಂದಿದ್ದ ನಾವಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ವರಸೆ

ಇಸ್ಲಾಮಾಬಾದ್, ಶನಿವಾರ, 22 ಸೆಪ್ಟಂಬರ್ 2018 (09:51 IST)

ಇಸ್ಲಾಮಾಬಾದ್: ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾದ ಮೇಲೆ ಭಾರತದ ಜತೆಗಿನ ಆ ದೇಶದ ದೃಷ್ಟಿಕೋನ ಬದಲಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದೆಲ್ಲಾ ಈಗ ಸುಳ್ಳಾಗಿದೆ.
 
ಮೊನ್ನೆಯಷ್ಟೇ ಜಮ್ಮು ಕಾಶ್ಮೀರದ ಗಡಿಯಲ್ಲಿ ಯೋಧ ನರೇಂದ್ರ ಕುಮಾರ್ ನನ್ನು ಪಾಕ್ ಯೋಧರು ಕತ್ತು ಸೀಳಿ, ಕಣ್ಣು ಕಿತ್ತು, ಗುಂಡು ಹಾರಿಸಿ ಪೈಶಾಚಿಕವಾಗಿ ಕೊಲೆ ಮಾಡಿದ್ದರು. ಆದರೆ ಈ ಹತ್ಯೆ ಮಾಡಿದ್ದು ನಾವಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಳೇ ನಾಯಕರಂತೆ ವರಸೆ ತೆಗೆದಿದ್ದಾರೆ.
 
ಉಭಯ ದೇಶಗಳ ನಡುವಿನ ವಿದೇಶಾಂಗ ಸಚಿವರ ಮಾತುಕತೆಗೆ ಆಹ್ವಾನಿಸಿ ಪ್ರಧಾನಿ ಮೋದಿಗೆ ಇಮ್ರಾನ್ ಖಾನ್ ಪತ್ರ ಬರೆದಿದ್ದರು. ಇದನ್ನು ಭಾರತ ತಿರಸ್ಕರಿಸಿದ ಬೆನ್ನಲ್ಲೇ ಇಮ್ರಾನ್ ಈ ರೀತಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಭಾರತ ಈ ಮಾತುಕತೆ ತಿರಸ್ಕರಿಸುವ ಮೂಲಕ ಮಹತ್ವದ ಅವಕಾಶವೊಂದನ್ನು ಕಳೆದುಕೊಂಡಿದೆ ಎಂದು ಬಣ್ಣಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಕುಮಾರಸ್ವಾಮಿಗೆ ಶೃಂಗೇರಿ ಶಾರದಾಂಬೆ ಒಳ್ಳೆ ಬುದ್ಧಿ ಕೊಡಲಪ್ಪಾ..! ಬಿಜೆಪಿ ಟಾಂಗ್

ಬೆಂಗಳೂರು: ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಕುಟುಂಬ ವರ್ಗ ಪೂಜಾ ಕಾರ್ಯದಲ್ಲಿ ...

news

ಸರ್ಕಾರ ಕಾಪಾಡಲು ದೇವರ ಮೊರೆ ಹೋದ ದೇವೇಗೌಡ ಕುಟುಂಬ

ಬೆಂಗಳೂರು: ಸಿಎಂ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಬಂಡಾಯದಿಂದಾಗಿ ಗೊಂದಲದ ...

news

ಆಸ್ಪತ್ರೆಯಲ್ಲಿರುವ ಗೋವಾ ಸಿಎಂ ಪರಿಕ್ಕರ್ ಮೇಲೆ ಕಾಂಗ್ರೆಸ್ ಹೊಸ ಆರೋಪ

ನವದೆಹಲಿ: ಗೋವಾ ಸಿಎಂ ಪರಿಕ್ಕರ್ ಇದೀಗ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ...

news

‘ನಾವು ನಿಮ್ಮ ಕಣ್ಣಿಗೆ ನರಹಂತಕ ಹುಲಿಗಳ ಹಾಗೆ ಕಾಣ್ತೀವಾ?’ ಸುಪ್ರೀಂಕೋರ್ಟ್ ಪ್ರಶ್ನೆ

ನವದೆಹಲಿ: ನಮ್ಮನ್ನು ನರಹಂತಕ ಹುಲಿಗಳ ರೀತಿ ಕಾಣುತ್ತಾ ನಿಮ್ಮ ಕಣ್ಣಿಗೆ? ನಾವು ಅಂತಹವರಲ್ಲ. ರಾಜ್ಯಗಳು ...

Widgets Magazine