ಸ್ಮಾರ್ಟ್ ಫೋನ್ ಮಾರಾಟದಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಭಾರತ

ನವದೆಹಲಿ, ಶನಿವಾರ, 28 ಅಕ್ಟೋಬರ್ 2017 (17:21 IST)

ನವದೆಹಲಿ: ಅಮೆರಿಕಾಗಿಂತಲೂ ಅತಿ ಹೆಚ್ಚು ಸ್ಮಾರ್ಟ್‌‌ ಫೋನ್‌ ಮಾರಾಟ ಮಾಡಿರುವ ಪಟ್ಟಿಯಲ್ಲಿ ವಿಶ್ವದ ದೊಡ್ಡಣ್ಣನನ್ನು ಹಿಂದಿಕ್ಕಿದೆ.


ಸಿಂಗಾಪುರ್ ಮೂಲದ ಟೆಕ್ನಾಲಜಿ ಮಾರುಕಟ್ಟೆ ವಿಶ್ಲೇಷಕ ಕ್ಯಾನಾಲಿಸ್ ಮಾಡಿರುವ ವರದಿ ಪ್ರಕಾರ, 2017ರ 3ನೇ ತ್ರೈಮಾಸಿಕದಲ್ಲಿ ಭಾರತ ಈ ಸಾಧನೆ ಮಾಡಿದೆ. ಈ ವರದಿ ಪ್ರಕಾರ ಭಾರತ ಇದೇ ಮೊದಲ ಬಾರಿಗೆ ಬರೋಬ್ಬರಿ 40 ಮಿಲಿಯನ್‌ ಸ್ಮಾರ್ಟ್‌‌ ಫೋನ್‌‌ ಮಾರಾಟ ಮಾಡಿವ ಮೂಲಕ ಅಮೆರಿಕಾವನ್ನು ಹಿಂದಿಟ್ಟಿದೆಯಂತೆ.

ಆದರೆ ಮೊದಲ ಸ್ಥಾನದಲ್ಲಿ ನೆರೆಯ ಚೀನಾ ಮುಂದುವರಿದಿದ್ದು, ಬರೋಬ್ಬರಿ 110 ಮಿಲಿಯನ್‌ ಗಿಂತಲೂ ಹೆಚ್ಚು ಸ್ಮಾರ್ಟ್‌‌ ಫೋನ್‌‌ ಮಾರಾಟ ಮಾಡಿದೆ.

ಭಾರತದಲ್ಲಿ ಚೀನಾ ಮತ್ತು ದಕ್ಷಿಣ ಕೊರಿಯಾದ ಮೊಬೈಲ್‌‌ ಬ್ರ್ಯಾಂಡ್‌ ಗಳಾದ ಕ್ಸಿಯೋಮಿ ಹಾಗೂ ಸ್ಯಾಮ್‌ ಸಂಗ್‌‌ ಮೊಬೈಲ್‌ ಅತಿ ಹೆಚ್ಚು ಮಾರಾಟಗೊಂಡಿವೆ. ಉಳಿದಂತೆ ವಿವೋ, ಒಪ್ಪೊ, ಲೆನೊವೊ ಮೊಬೈಲ್‌ ಹೆಚ್ಚು ಮಾರಾಟಗೊಂಡಿವೆ.

ಕೆಲ ದಿನಗಳಿಂದ ಭಾರತದಲ್ಲಿ ಆ್ಯಪಲ್‌ ಐಫೋನ್‌ ಸಹ ಹೆಚ್ಚು ಮಾರಾಟಗೊಳ್ಳುತ್ತಿವೆ ಎಂದು ವರದಿಯಲ್ಲಿ ತಿಳಿದು ಬಂದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ… ಮಂಗಳೂರು-ಧರ್ಮಸ್ಥಳದವರೆಗೆ ಹೈ ಅಲರ್ಟ್

ಮಂಗಳೂರು: ಇದೇ ಮೊದಲ ಬಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ...

news

ದೇಶದ ಪ್ರಾದೇಶಿಕ ಪಕ್ಷಗಳಲ್ಲಿಯೇ ಡಿಎಂಕೆ ಶ್ರೀಮಂತ ಪಕ್ಷ

ನವದೆಹಲಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ ವರದಿಯ ಪ್ರಕಾರ.2015-16ರ ...

news

ಯುವತಿಯರನ್ನು ಕೆಣಕುವವರಿಗೆ ಹಣಿಯಲು ಪೊಲೀಸ್ ಇಲಾಖೆ ಭರ್ಜರಿ ಪ್ಲ್ಯಾನ್

ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪಿಗಳನ್ನು ಬಂಧಿಸಲು ಮಫ್ತಿಯಲ್ಲಿದ್ದ ಮಹಿಳಾ ...

news

ಸಿಎಂ ಸಿದ್ದರಾಮಯ್ಯ ಮತ್ತೊಂದು ಅವಧಿಗೆ ಸಿಎಂ ಆದ್ರೆ ಉತ್ತಮ: ದೇಶಪಾಂಡೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ನನ್ನ ಸಂಪೂರ್ಣ ಬೆಂಬಲವಿದೆ ಎಂದು ...

Widgets Magazine