ಭಾರತ ಕೆಲವು ವಸ್ತುಗಳಿಗೆ 100 ಶೇಕಡ ಆಮದು ಸುಂಕ ವಿಧಿಸುತ್ತಿದ್ದಾರೆ - ಡೊನಾಲ್ಡ್ ಟ್ರಂಪ್

ಅಮೇರಿಕಾ, ಮಂಗಳವಾರ, 12 ಜೂನ್ 2018 (12:34 IST)

ಅಮೇರಿಕಾ : ಅಮೇರಿಕಾದಿಂದ ಆಮದು ಮಾಡಿಕೊಳ್ಳುವ  ಉತ್ಪನ್ನಗಳ ಮೇಲೆ ಅಧಿಕ ಹೇರುತ್ತಿದೆ. ಇದು ಹೀಗೆ ಮುಂದುವರಿದರೆ ನಾವು ಭಾರತದೊಂದಿಗೆ ವಾಣಿಜ್ಯ ವ್ಯವಹಾರವನ್ನು ನಿಲ್ಲಿಸಬೇಕಾಗುತ್ತದೆ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.


ಕ್ಯೂಬೆಕ್‌ನಲ್ಲಿ ನಡೆದ ಎರಡು ದಿನಗಳ ಜಿ7 ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ಅವರು,’ ಜಗತ್ತಿನ ಹಲವು ದೇಶಗಳು ಅಮೆರಿಕವನ್ನು ದೋಚುತ್ತಿವೆ. ಇದು ಜಿ7 ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಭಾರತವೂ ಇದೆ. ಅಲ್ಲಿ ಕೆಲವು ವಸ್ತುಗಳಿಗೆ 100 ಶೇಕಡ ಆಮದು ಸುಂಕ ವಿಧಿಸುತ್ತಿದ್ದಾರೆ. ಆದರೆ ನಾವು ಯಾವುದೇ ಸುಂಕ ವಿಧಿಸುತ್ತಿಲ್ಲ. ನಮಗೆ ಹಾಗೆ ಮಾಡಲು ಆಗುವುದಿಲ್ಲ. ನಾವು ಪ್ರತಿಯೊಬ್ಬರೂ ದೋಚುವ ಪಿಗ್ಗಿ ಬ್ಯಾಂಕ್ ಆಗಿದ್ದೇವೆ. ಹಾಗೆ ಮಾಡಬಾರದು. ನಾವು ಹಲವು ದೇಶಗಳೊಂದಿಗೆ ಮಾತನಾಡುತ್ತಿದ್ದೇವೆ. ಇನ್ನು ಅದು ನಿಲ್ಲಲಿದೆ. ಅಥವಾ ನಾವು ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ. ಇದೇ ಅದಕ್ಕೆ ಸರಿಯಾದ ಉತ್ತರ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೊಲೀಸರ ವೇತನ ಹೆಚ್ಚಳ ಬಗ್ಗೆ ಪರಿಶೀಲಿಸುತ್ತೇನೆ: ಡಿಸಿಎಂ ಪರಮೇಶ್ವರ್

ಬೆಂಗಳೂರು: ರಾಜ್ಯ ಗೃಹ ಸಚಿವರೂ ಆಗಿರುವ ಡಿಸಿಎಂ ಜಿ ಪರಮೇಶ್ವರ್ ಬಹುದಿನಗಳ ಬೇಡಿಕೆಯಾದ ಪೊಲೀಸರ ವೇತನ ...

news

ಚಾರ್ಮಾಡಿ ಘಾಟಿಯಲ್ಲಿ ಮುಂದುವರಿದ ಪ್ರಯಾಣಿಕರ ಪರದಾಟ

ಬೆಂಗಳೂರು: ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ವ್ಯತ್ಯಯವಾಗಿದೆ. ಈ ...

news

ಕೋರ್ಟ್ ಗೆ ಹಾಜರಾಗಲಿರುವ ರಾಹುಲ್ ಗಾಂಧಿ

ನವದೆಹಲಿ: ಆರ್ ಎಸ್ಎಸ್ ಹೊರಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ...

news

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾದ ರಾಹುಲ್ ಗಾಂಧಿ ಹೇಳಿಕೆ

ನವದೆಹಲಿ: ಕೋಕಾಕೋಲಾ ಕಂಪನಿ ಮಾಲಿಕರು ನಿಂಬೂ ಸೋಡಾ ಮಾರುತ್ತಿದ್ದರು ಎಂಬ ರಾಹುಲ್ ಗಾಂಧಿ ಹೇಳಿಕೆ ಇದೀಗ ...

Widgets Magazine
Widgets Magazine