ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತ

ನವದೆಹಲಿ, ಮಂಗಳವಾರ, 26 ಸೆಪ್ಟಂಬರ್ 2017 (12:50 IST)

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತಕ್ಕೆ ಕಳಂಕ ಹಚ್ಚಲು ಹೊರಟಿದ್ದ ಪಾಕಿಸ್ಥಾನಕ್ಕೆ ವಿಶ್ವಸಂಸ್ಥೆಯ ಭಾರತದ ಮಿಷನ್ನಿನ ಕಿರಿಯ ರಾಯಭಾರಿ ಪೌಲೊಮಿ ತ್ರಿಪಾಠಿ ತಕ್ಕ ಉತ್ತರ ಕೊಟ್ಟಿದ್ಧಾರೆ.
 


 ಪ್ಯಾಲೆಸ್ಟೈನ್`ನಲ್ಲಿ ಪೆಲೆಟ್ ಗನ್ ದಾಳಿಯ ಸಂತ್ರಸ್ತೆಯ ಪೋಟೋ ತೋರಿಸಿ ಕಾಶ್ಮೀರದ ಸಂತ್ರಸ್ತೆ ಎಂದು ಹೇಳಿ ಭಾರತಕ್ಕೆ ಕಳಂಕ ಹಚ್ಚಲು ಹೊರಟಿದ್ದ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿಗೆ ತ್ರಿಪಾಠಿ ಸೂಕ್ತ ಉತ್ತರ ಕೊಟ್ಟಿದ್ಧಾರೆ.
  
ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ತಪ್ಪು ಚಿತ್ರವನ್ನ ತೋರಿಸುವ ಮೂಲಕ ಸಭೆಯನ್ನ ತಪ್ಪು ದಾರಿಗೆಳೆಯುವ ಪ್ರಯತ್ನ ನಡೆಸಿದರು. ನಿಜವಾದ ಚಿತ್ರ ಇಲ್ಲಿದೆ ನೋಡಿ. ಇವರು ಜಮ್ಮು ಮತ್ತು ಕಾಶ್ಮೀರದ ಯುವ ಅಧಿಕಾರಿ ಲೆಫ್ಟಿನೆಂಟ್ ಉಮ್ಮರ್ ಫಯಾಜ್, ಪಾಕಿಸ್ತನ ಬೆಂಬಲಿತ ಉಗ್ರರಿಂದ ಕೊಲೆಯಾದವರು. ಉಗ್ರರು ಬರ್ಬರವಾಗಿ ಇವರನ್ನ ಕೊಂದಿದ್ರು ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಫೋಟೋ ಪ್ರದರ್ಶಿಸಿದ್ದಾರೆ.
 
ಈ ಮೂಲಕ ಮತ್ತೊಮ್ಮೆ ಕಪಟಿ ಪಾಕಿಸ್ತಾನದ ನಿಜ ಬಣ್ಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಯಲಾಗಿದೆ.  ಭಾರತದ ವಿರುದ್ಧ ಕಿರು ಅಣ್ವಸ್ತ್ರ ಪ್ರಯೋಗದ ಹೇಳಿಕೆ ನೀಡಿದ್ದ ಪಾಕ್ ಪ್ರಧಾನಿಗೆ ಸುಷ್ಮಾ ಸ್ವರಾಜ್ ತಕ್ಕ ಉತ್ತರ ಕೊಟ್ಟಿದ್ದರು. ನಾವು ಐಐಟಿ, ಐಐಎ< ನಿರ್ಮಿಸಿದ್ದರೆ, ಉಗ್ರರನ್ನ ಉತ್ಪಾದಿಸುತ್ತಿದೆ ಎಂದು ಕಿಡಿ ಕಾರಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ ವಿಶ್ವಸಂಸ್ಥೆಯ ಶಾಶ್ವತ ಪ್ರತಿನಿಧಿ ಮಲೀಹಾ ಲೋಧಿ, ಗಾಜಾ ಸಂತ್ರಸ್ತೆಯ ಫೋಟೋ ತೋರಿಸಿ ಕಾಶ್ಮಿರದಲ್ಲಿ ಹತ್ಯೆಗೀಡಾದ ಸಂತ್ರಸ್ತೆ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ವಿಶ್ವಸಂಸ್ಥೆ ಮಲಿಹಾ ಲೋಧಿ ಭಾರತ ಪಾಕಿಸ್ತಾನ ಪೌಲೊಮಿ ತ್ರಿಪಾಠಿ Maliha Lodhi Un General Assembly

ಸುದ್ದಿಗಳು

news

ಯುವತಿಯ ಗುಪ್ತಾಂಗಕ್ಕೆ ಕೈಹಾಕಿದನಾ ಸಿಇಓ..?

ಖಾಸಗಿ ಕಂಪನಿಯ ಸಿಇಓ ಒಬ್ಬ ಯುವತಿಯ ಗುಪ್ತಾಂಗವನ್ನೇ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ...

news

ಎಚ್`ಡಿಕೆ ಆರೋಗ್ಯದಲ್ಲಿ ಚೇತರಿಕೆ, 2 ದಿನ ಐಸಿಯೂನಲ್ಲೇ ಮುಂದುವರಿಕೆ: ವೈದ್ಯರ ಹೇಳಿಕೆ

ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ...

news

‘ದತ್ತು ಪುತ್ರಿ ಹನಿಪ್ರೀತ್ ಳನ್ನು ಡೇರಾ ಬಾಬಾ ಅತ್ಯಾಚಾರವೆಸಗಿದ್ದು ನಿಜ’

ನವದೆಹಲಿ: ಡೇರಾ ಸಚ್ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ತನ್ನ ದತ್ತು ಪುತ್ರಿಯನ್ನೂ ಕಾಮದ ಕಣ್ಣಿನಿಂದ ...

news

‘ಅಮೆರಿಕಾ ನಮ್ಮ ಮೇಲೆ ಯುದ್ಧ ಸಾರಿದೆ’

ನವದೆಹಲಿ: ಅಮೆರಿಕಾ ನಮ್ಮ ಮೇಲೆ ಯುದ್ಧ ಸಾರಿದೆ. ಅವರ ಯುದ್ಧ ವಿಮಾನಗಳನ್ನು ಹೊಡೆದುರಳಿಸುತ್ತೇವೆ ಉತ್ತರ ...

Widgets Magazine
Widgets Magazine