ಸುಳ್ಳು ಆರೋಪ ಹೊರಿಸಿ ಭಾರತೀಯನನ್ನ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನ

ನವದೆಹಲಿ, ಸೋಮವಾರ, 10 ಏಪ್ರಿಲ್ 2017 (15:58 IST)

Widgets Magazine

ಬೇಹುಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಭಾರತ ಮೂಲಕ ಕುಲ್ ಭೂಷಣ್ ಜಾಧವ್`ಗೆ ಗಲ್ಲುಶಿಕ್ಷೆ ವಿಧಿಸಿದೆ. ಪಾಕಿಸ್ತಾನದ ಸೇನಾ ಕಾಯ್ದೆಯಡಿ ಶಿಕ್ಷೆ ವಿಧಿಸಲಾಗಿದ್ದು, ಮುಖ್ಯ ಸೇನಾಧಿಕಾರಿ ಜನರಲ್ ಖಮಾರ್ ಜಾವೇದ್ ಬಜ್ವಾ ಈ ವಿಷಯವನ್ನ ಖಚಿತಪಡಿಸಿದ್ದಾರೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.


ಕುಲ್ ಭೂಷಣ್ ಜಾಧವ್ ಅವರನ್ನ ಇರಾನಿನಲ್ಲಿ ಕಿಡ್ನಾಪ್ ಮಾಡಿದ ಸೇನೆ ಬಳಿಕ ಬಲೂಚಿಸ್ತಾನದಲ್ಲಿ ಬಂಧಿಸಿದ್ದಾಗಿ ಹೇಳಿಕೊಂಡಿತ್ತು. ಜಾಧವ್ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿರಲಿಲ್ಲ.  ಪಾಪಿ ಪಾಕಿಸ್ತಾನ ತನಿಖೆ ಕುರಿತಂತೆ ಭಾರತ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಇದು ಪಾಕಿಸ್ತಾನ ಸೇನೆಯ ಆಂತರಿಕ ನಿರ್ಧಾರ ಎನ್ನಲಾಗಿದೆ.
 
ತಿಂಗಳ ಹಿಂದಷ್ಟೇ ಪಾಕಿಸ್ತಾನ ಸೇನೆ ಜಾಧವ್ ತಪ್ಪೊಪ್ಪಿಗೆ ವಿಡಿಯೋ ರಿಲೀಸ್ ಮಾಡಿತ್ತು. ಈ ವಿಡಿಯೋದಲ್ಲಿ ಜಾಧವ್, ತಾನು ಭಾರತೀಯ ನೌಕಾದಳದ ಅಧಿಕಾರಿ ಎಂದು ಹೇಳಿಕೊಂಡಿದ್ದರೆಂದು ವರದಿಯಾಗಿದೆ. ಇವತ್ತು ಜಾಧವ್ ಅವರನ್ನ ನೇಣಿಗೇರಿಸಲಾಗಿದ್ದು,ಪಾಕಿಸ್ತಾನದ ವಿರುದ್ಧ ಜಾಧವ್ ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದನೆಂದು ಹೇಳಿಕೊಂಡಿದೆ. ಆದರೆ, ಪಾಕಿಸ್ತಾನದ ಆರೋಪಗಳನ್ನ ಭಾರತ ನಿರಾಕರಿಸಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡೊನಾಲ್ಡ್ ಟ್ರಂಪ್ ಸಿರಿಯಾ ಮೇಲೆ ದಾಳಿ ನಡೆಸಲು ಈ ಮಹಿಳೆ ಕಾರಣ..?

ಪ್ರತಿಯೊಬ್ಬ ಗಂಡಿನ ಯಶಸ್ಸಿನ ಹಿಂದೆ ಒಂದು ಹೆಣ್ಣಿರುತ್ತಾಳೆ ಎಂಬ ಮಾತನ್ನ ಕೇಳೇ ಇರುತ್ತೀರಿ. ಅಮೆರಿಕ ...

news

ಗೋವಾ ಬೀಚ್ ನಲ್ಲಿ ಇನ್ನು ಪಾರ್ಟಿ ಮಾಡುವಂತಿಲ್ಲ!

ಪಣಜಿ: ಗೋವಾ ಬೀಚ್ ಎಂದರೆ ಸಾಕು, ಪಾರ್ಟಿ, ಮಸ್ತ್ ಮಜಾ ನೆನಪಾಗುವುದು. ಆದರೆ ಇದೆಲ್ಲದಕ್ಕೂ ಇನ್ನು ಕತ್ತರಿ ...

news

ನೀವೆಷ್ಟು ತಿನ್ನಬೇಕು ಎನ್ನುವುದನ್ನು ಸರ್ಕಾರವೇ ನಿರ್ಧರಿಸುತ್ತದೆ!

ನವದೆಹಲಿ: ಇನ್ನು ಮುಂದೆ ಹೋಟೆಲ್ ಗೆ ಹೋಗಿ ಬೇಕಾಬಿಟ್ಟಿ ಆಹಾರ ವೇಸ್ಟ್ ಮಾಡುವಂತಿಲ್ಲ. ನಿಮ್ಮ ಪ್ಲೇಟ್ ...

news

ಕನ್ನಡ ವಿರೋಧಿತನ ತೋರಿದ್ದ ಐಎಎಸ್ ಅಧಿಕಾರಿ ಎತ್ತಂಗಡಿ

ಬೆಂಗಳೂರು: ಕನ್ನಡ ವಿರೋಧಿತನ ತೋರಿದ್ದ ಐಎಎಸ್ ಅಧಿಕಾರಿ ಶ್ರೀ ವತ್ಸ ಕೃಷ್ಣ ಅವರನ್ನು ಎತ್ತಂಗಡಿ ಮಾಡಿ ...

Widgets Magazine Widgets Magazine