ಅಮೆರಿಕಾದಲ್ಲಿ ಭಾರತೀಯನ ಕೊಲೆ: ನೆರವಿಗೆ ಧಾವಿಸಿದ ಸುಷ್ಮಾ ಸ್ವರಾಜ್

NewDelhi, ಶನಿವಾರ, 8 ಏಪ್ರಿಲ್ 2017 (12:51 IST)

ನವದೆಹಲಿ: ಅಮೆರಿಕಾದ ವಾಷಿಂಗ್ಟನ್ ನಲ್ಲಿ ಭಾರತೀಯ ವ್ಯಕ್ತಿ ಕೊಲೆಗೀಡಾಗಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕುಟುಂಬದವರ ನೆರವಿಗೆ ಧಾವಿಸಿದ್ದಾರೆ.


 
 
ವಿಕ್ರಮ್ ಜರ್ಯಾಲ್ ಎಂಬಾತ ಕೊಲೆಗೀಡಾದವರು. ಕೆಲವು ದಿನಗಳ ಹಿಂದಷ್ಟೇ ಅಮೆರಿಕಾಕ್ಕೆ ತೆರಳಿದ್ದರು. ತಮ್ಮ ಸಂಬಂಧಿಕರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಈ ಘಟನೆ ನಡೆದಿದೆ. ವಿಕ್ರಮ್ ಬಳಿ ಬಂದ ದುಷ್ಕರ್ಮಿಗಳು ಹಣ ದೋಚಿದ್ದಲ್ಲದೆ, ಗುಂಡಿಕ್ಕಿ ಹತ್ಯೆ ಮಾಡಿದ್ದರು.
 
 
ಏಪ್ರಿಲ್ 6 ರಂದು ಈ ಘಟನೆ ನಡೆದಿತ್ತು. ಇದೀಗ ಮೃತದೇಹವನ್ನು ಸ್ವದೇಶಕ್ಕೆ ತರಲು ವಿಕ್ರಮ್ ಕುಟುಂಬದವರು ವಿದೇಶಾಂಗ ಸಚಿವರ ನೆರವು ಕೇಳಿದ್ದಾರೆ. ಸದ್ಯ ಅಲ್ಲಿನ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ಸಚಿವರು ತಮ್ಮ ಕೈಲಾದ ಪ್ರಯತ್ನ ನಡೆಸುತ್ತಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾಳೆ ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣಾ ಮತದಾನ

ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ನಾಳೆ ...

news

ಬೆಂಗಳೂರು-ಮಂಗಳೂರು ನೇರ ರೈಲು ಹಗಲು ಸಂಚಾರಕ್ಕೆ ನಾಳೆ ಚಾಲನೆ

ಹಾಸನ-ಯಶವಂತಪುರ ರೈಲು ಸಂಚಾರ ಆರಂಭವಾದ ಬಳಿಕ ಬೆಂಗಳೂರು ಮತ್ತು ಮಂಗಳೂರು ನೇರ ರೈಲು ಸಂಚಾರದ ಭಾಗ್ಯ ಒದಗಿ ...

news

ಇಂದಿನಿಂದ ಲಾರಿ ಮುಷ್ಕರ ಮತ್ತಷ್ಟು ತೀವ್ರ

ವಿಮೆ ಕಂತಿನ ಪ್ರಮಾಣ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ...

news

ಕೊನೆಗೂ ಕ್ಷಮೆ ಕೇಳಿದ ರವೀಂದ್ರ ಗಾಯಕ್ವಾಡ್ ಮೇಲಿನ ನಿಷೇಧ ತೆರವು

ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ವಿಮಾನ ಯಾನ ಹಾರಾಟಕ್ಕೆ ನಿಷೇಧ ಪಡೆದಿದ್ದ ಶಿವಸೇನೆ ...

Widgets Magazine