ಅಮೆರಿಕದಲ್ಲಿ ಮತ್ತೊರ್ವ ಭಾರತೀಯನ ಹತ್ಯೆ

ನ್ಯೂಯಾರ್ಕ್, ಶನಿವಾರ, 4 ಮಾರ್ಚ್ 2017 (14:57 IST)

ಮೂಲದ ಶ್ರೀನಿವಾಸ್ ಹತ್ಯೆಯ ನೆನಪು ಮಾಸುವ ಮುನ್ನವೇ ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನನ್ನು ಹತ್ಯೆ ಮಾಡಲಾಗಿದೆ. ಭಾರತೀಯ ಮೂಲದ ಉದ್ಯಮಿ ಹರ್ನಿಶ್ ಪಟೇಲ್ ಎಂಬುವವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
 
ಭಾರತೀಯ ಮೂಲದ ಉದ್ಯಮಿ ಹರ್ನಿಶ್ ಪಟೇಲ್, ರಾತ್ರಿ ತಮ್ಮ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಕೆಲ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ.
 
ಹರ್ನಿಶ್ ಪಟೇಲ್ ಹತ್ಯೆಯಲ್ಲಿ ಭಾಗಿಯಾದ ಹಂತಕರಿಗಾಗಿ ಪೊಲೀಸರು ಬೇಟೆ ಆರಂಭಿಸಿದ್ದಾರೆ. ದುಷ್ಕರ್ಮಿಗಳ ಬಗ್ಗೆ ಕೆಲ ಸುಳಿವುಗಳು ಲಭ್ಯವಾಗಿದ್ದು, ಶೀಘ್ರದಲ್ಲಿಯೇ ಹಂತಕರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ಕಳೆದ ಬುಧವಾರದಂದು ಅಮೆರಿಕದ ಕ್ಯಾನ್ಸಾಸ್‌ನ ಬಾರ್‌ ಒಂದರಲ್ಲಿ ಭಾರತೀಯ ಮೂಲದ ಶ್ರೀನಿವಾಸ್ ಕುಚ್ಚಿ ಬೋಟ್ಲಾ ಎನ್ನುವವರನ್ನು ನಿವೃತ್ತ ಯೋಧನೊಬ್ಬ ಗುಂಡು ಹಾರಿಸಿ ಹತ್ಯೆಗೈದು ಅಮೆರಿಕದಿಂದ ತೆರಳುವಂತೆ ಗರ್ಜಿಸಿದ್ದ.
 
ಶ್ರೀನಿವಾಸ್ ಹತ್ಯೆ ಭಾರತ-ಅಮೆರಿಕ ದೇಶದಲ್ಲಿ ಬಾರಿ ಕೋಲಾಹಲ ಸೃಷ್ಟಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ರೀನಿವಾಸ್ ಹತ್ಯೆಯನ್ನು ಖಂಡಿಸಿ ಶೃದ್ಧಾಂಜಲಿ ಅರ್ಪಿಸಿದ್ದರು. ಇದೀಗ ಮತ್ತೊಬ್ಬ ಭಾರತೀಯನ ಹತ್ಯೆಯಾಗಿರುವುದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಲ್ಲಿ ಆತಂಕ ಮೂಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  
ಅಮೆರಿಕ ಭಾರತೀಯ ಭೀಕರ ಹತ್ಯೆ ಶೂಟೌಟ್ Us Shot Dead Harnish Patel

ಸುದ್ದಿಗಳು

news

ಕಾಂಗ್ರೆಸ್ ಪಕ್ಷಕ್ಕೆ ಸೋಲಾದಲ್ಲಿ ಕಾಂಗ್ರೆಸ್ಸಿಗರೇ ಕಾರಣ: ಸುರೇಶ್ ಗೌಡ

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಶಕ್ತಿ ವಿಪಕ್ಷಗಳಿಗಿಲ್ಲ. ಒಂದು ವೇಳೆ, ಕಾಂಗ್ರೆಸ್ ಪಕ್ಷಕ್ಕೆ ...

news

ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ಸರಕಾರ ವಿಫಲ: ದೇವೇಗೌಡ

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ...

news

ಅಮಿತ್ ಶಾ ಆದೇಶಗಳನ್ನು ಯಡಿಯೂರಪ್ಪ ಪಾಲಿಸುತ್ತಿಲ್ಲ: ಈಶ್ವರಪ್ಪ ಆಕ್ರೋಶ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿದ ...

news

ಆಯೋಗದ ಅನುಮತಿ ಪಡೆಯದೇ ಮೋದಿ ರೋಡ್ ಶೋ

ವಾರಣಾಸಿ: ಆಯೋಗದ ಅನುಮತಿ ಪಡೆಯದೇ ಪ್ರಧಾನಿ ಮೋದಿ ರೋಡ್ ಶೋ ನಡೆಸುತ್ತಿದ್ದರೂ ಚುನಾವಣೆ ಆಯೋಗ ಏಕೆ ಕಣ್ಣು ...

Widgets Magazine