ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ

ಕನ್ಸಾಸ್, ಶುಕ್ರವಾರ, 15 ಸೆಪ್ಟಂಬರ್ 2017 (16:46 IST)

ಅಮೆರಿಕದ ಕನ್ಸಾಸ್`ನಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ ನಡೆದಿದೆ. ತೆಲಂಗಾಣ ಮೂಲದ ಮನೋವೈದ್ಯ ಅಚ್ಯುತಾ ರೆಡ್ಡಿಯನ್ನ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೇ ಇರಿದು ಕೊಂದಿದ್ದಾನೆ.
 


ಬುಧವಾರ ರಾತ್ರಿ ವೈದ್ಯನನ್ನ ಇರಿದು ಕೊಲೆ ಮಾಡಲಾಗಿದೆ. ವೈದ್ಯರನ್ನ ಹತ್ಯೆ ಮಾಡಿದ 21 ವರ್ಷದ ಉಮರ್ ರಶೀದ್ ದತ್`ನನ್ನ ಬಂಧಿಸಲಾಗಿದ್ದು, ಬಂಧಿತನು ಸಹ ಇಂಡೋ ಅಮೆರಿಕನ್ ಎಂದು ತಿಳಿದುಬಂದಿದೆ. ಉಮರ್ ರಶೀದ್ ದತ್ ಬಗ್ಗೆ ಬಲ್ಲ ಅವರ ನೆರೆಹೊರೆಯವರು ಹೇಳುವ ಪ್ರಕಾರ, ದತ್ ತುಂಬಾ ಶಾಂತವಾಗಿ, ಒಳ್ಳೆಯವನಾಗಿರುತ್ತಿದ್ದ. ಆತ ಇಂತಹ ಕೃತ್ಯ ಎಸಗಿದ್ದಾನೆಂದರೆ ನಂಬಲು ಅಸಾಧ್ಯ.
 
ವಿದ್ಯಾಭ್ಯಾಸದ ಕುರಿತಾಗಿ ದತ್ ತನ್ನ ಪೋಷಕರು ಜೊತೆ ಮನಸ್ತಾಪ ಹೊಂದಿದ್ದ. ಆತನನ್ನ ಭಾರತಕ್ಕೆ ಕಳುಹಿಸುವ ಚಿಂತನೆಯೂ ನಡೆದಿತ್ತು ಎನ್ನಲಾಗಿದೆ.  ಈ ವರ್ಷ ಅಮೆರಿಕದ ಕನ್ಸಾಸ್`ನಲ್ಲಿ ಕೊಲೆಯಾದ 2ನೇ ಭಾರತೀಯ ಅಚ್ಯುತಾ ರೆಡ್ಡಿ. ಫೆಬ್ರವರಿಯಲ್ಲಿ ತೆಲಂಗಾಣ ಮೂಲದವರೇ ಆದ ಶ್ರೀನಿವಾಸ್ ಕುಬೋಟ್ಲಾ ಅವರನ್ನ ಗುಂಡಿಕ್ಕಿ ಕೊಲ್ಲಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


 ಇದರಲ್ಲಿ ಇನ್ನಷ್ಟು ಓದಿ :  
ಅಚ್ಯುತರಾವ್ ಕೊಲೆ ಕನ್ಸಾಸ್ ಅಮೆರಿಕ Kansas America Murder

ಸುದ್ದಿಗಳು

news

ಮತಯಂತ್ರಗಳಿಗೆ ವಿವಿಪ್ಯಾಟ್‌: ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮನವಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತಯಂತ್ರಗಳಿಗೆ ವಿವಿಪ್ಯಾಟ್‌ ಅಳವಡಿಸುವಂತೆ ...

news

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದ ಸಿಎಂ ಸಿದ್ದರಾಮಯ್ಯ: ಯಡಿಯೂರಪ್ಪ ಕಿಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ರಾಜ್ಯದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ...

news

ಸುಮ್ಮನೆ ಕೆಣಕುತ್ತಾ ಯುದ್ಧಕ್ಕೆ ಆಹ್ವಾನಿಸುತ್ತಿರುವ ಉತ್ತರ ಕೊರಿಯಾ

ಚೀನಾ ಬಳಿಕ ಉತ್ತರ ಕೊರಿಯಾ ಸಹ ಯುದ್ಧೋನ್ಮಾದದಿಂದ ಕುದಿಯುತ್ತಿದೆ. ಇತ್ತೀಚೆಗಷ್ಟೇ ಜಪಾನ್ ದೇಶದ ಮೇಲೆ ಹಾದು ...

news

ಲಂಡನ್‌ನ ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಸ್ಫೋಟ

ಲಂಡನ್‌: ನಗರದ ವಾಯುವ್ಯ ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಹಲವು ಪ್ರಯಾಣಿಕರಿಗೆ ಗಂಭೀರ ...

Widgets Magazine