Widgets Magazine

ಭಾರತ ಮೂಲದ ಯುವತಿಯ ತಲೆಗೆ ಗನ್ನಿಟ್ಟು ಪಾಕಿಸ್ತಾನದ ಯುವಕನ ಜೊತೆ ಮದುವೆ..!

ಇಸ್ಲಾಮಾಬಾದ್, ಸೋಮವಾರ, 8 ಮೇ 2017 (20:16 IST)

Widgets Magazine

ಗನ್ ಪಾಯಿಂಟ್`ನಲ್ಲಿ ಮೂಲದ ಮಹಿಳೆಗೆ ಬಲವಂತವಾಗಿ ಪಾಕಿಸ್ತಾನದ ಪುರುಷನ ಜೊತೆ ಮದುವೆ ಮಾಡಿಸಿರುವ ಘಟನೆ ಇಸ್ಲಾಮಾಬಾದ್`ನಲ್ಲಿ ನಡೆದಿದ್ದು, ನೊಂದ ಮಹಿಳೆ ಉಜ್ಮಾ ವಾಪಸ್ ಭಾರತಕ್ಕೆ ಕಳುಹಿಸುವಂತೆ ಇಂಡಿಯನ್ ಹೈಕಮೀಷನರ್`ಗೆ ದುರು ನೀಡಿದ್ದಾರೆ.


ಇಸ್ಲಾಮಾಬಾದ್ ಕೋರ್ಟ್`ನಲ್ಲಿ ಕೇಸ್ ದಾಖಲಿಸಿರುವ ಉಜ್ಮಾ,  ಪತಿ ತಹೀರ್ ಅಲಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ಆರೋಪ ಮಾಡಿದ್ದಾರೆ. ನನ್ನ ವಲಸೆ ದಾಖಲೆಗಳನ್ನ ಕಸಿದುಕೊಂಡು ಗನ್ ಪಾಯಿಂಟ್`ನಲ್ಲಿ ನನಗೆ ಬಲವಂತದ ಮದುವೆ ಮಾಡಿಸಲಾಗಿದೆ ಎಂದು ದೂರಿನಲ್ಲಿ ಉಜ್ಮಾ ಆರೋಪಿಸಿದ್ದಾರೆ ಎಂದು ಪಿಟಿಐ, ಜಿಯೋ ನ್ಯೂಸ್ ವರದಿ ಉಲ್ಲೇಖಿಸಿ ಸುದ್ದಿ ಪ್ರಸಾರ ಮಾಡಿದೆ.

ಭಾರತಕ್ಕೆ ಸುರಕ್ಷಿತವಾಗಿ ತೆರಳುವ ವ್ಯವಸ್ಥೆಯಾಗುವವರೆಗೂ ಇಂಡಿಯನ್ ಹೈಕಮೀಷನರ್ ಅಂಗಳ ಬಿಟ್ಟು ಹೋಗುವುದಿಲ್ಲ ಎಂದು ಉಜ್ಮಾ ಪಟ್ಟು ಹಿಡಿದಿದ್ದಾರೆ.
 
ಉಜ್ಮಾ ವಿದೇಶಿ ಭೇಟಿ ಕೆಟಗರಿಯಲ್ಲಿ ಮಾತ್ರ ವೀಸಾ ಪಡೆದಿದ್ದಾರೆ. ಪಾಕ್ ಯುವಕನ ಜೊತೆ ವಿವಾಹವಾಗುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ದೆಹಲಿಯ ಪಾಕಿಸ್ತಾನಿ ಹೈಕಮೀಷನರ್ ಕಚೇರಿ ಸ್ಪಷ್ಟಪಡಿಸಿದೆ. ಹೀಗಾಗಿ, ಉಜ್ಮಾ  ವಾದಕ್ಕೆ ಮತ್ತಷ್ಟು ಬಲ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಪಿಲ್ ಮಿಶ್ರಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ: ಸತ್ಯೆಂದ್ರ ಜೈನ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಎರಡು ಕೋಟಿ ರೂಪಾಯಿ ಲಂಚ ನೀಡಿದ್ದೇನೆ ಎಂದು ...

news

ಭಾರತ ನಂತ್ರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಇರಾನ್

ನವದೆಹಲಿ: ಭಾರತೀಯ ಸೇನೆ ನಿಯಂತ್ರಣ ರೇಖೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ...

news

ಬಿಎಸ್ಎಫ್`ನ ಮತ್ತಷ್ಟು ಕರ್ಮ ಕಾಂಡ ಬಿಚ್ಚಿಟ್ಟ ತೇಜ್ ಬಹದ್ದೂರ್

ಬಿಎಸ್ಎಫ್`ನ ಕಳಪೆ ಆಹಾರದ ವಿಡಿಯೋವನ್ನ ಫೇಸ್ಬುಕ್`ನಲ್ಲಿ ಹಾಕಿ ವಿವಾದಕ್ಕೀಡಾಗಿದ್ದ ಮಾಜಿ ಯೋಧ ತೇಜ್ ...

news

ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿನಿಯ ಒಳ ಉಡುಪು ಬಿಚ್ಚಿಸಿದರಾ..?

ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿನಿಯ ಒಳ ಉಡುಪು ಬಿಚ್ಚಲು ಹೇಳಿ ಪರೀಕ್ಷಾಧಿಕಾರಿಗಳು ಅಪಮಾನ ಎಸಗಿರುವ ಘಟನೆ ...

Widgets Magazine Widgets Magazine